ಇಂಡಿಯಲ್ಲಿ ಇಂದ್ರಧನುಷ್ ಅಭಿಯಾನಕ್ಕೆ ಚಾಲನೆ ; ಡಾ.ದೂಮಗೊಂಡ
ಇಂಡಿ : ಪೋಷಕರು ಮಕ್ಕಳ ವಯಸ್ಸಿಗೆ ಅನುಗುಣವಾಗಿ ಎಲ್ಲ ಲಸಿಕೆಗಳನ್ನು ತಪ್ಪದೆ ಹಾಕಿಸಿ, ಅವರನ್ನು ಸಂಭವನೀಯ ರೋಗಗಳಿಂದ ಮುಕ್ತಗೊಳಿಸಬೇಕು ಎಂದು ಡಾ. ಪ್ರಶಾಂತ ದೂಮಗೊಂಡ ಹೇಳಿದರು.

ಪಟ್ಟಣದ ವಿಜಯಪುರ ಮುಖ್ಯ ರಸ್ತೆಯ ಇಂದಿರಾನಗರ ಬಯಲು ಪ್ರದೇಶದಲ್ಲಿ ಬಿಡಾರ ಹೂಡಿರುವ ಅಲೆಮಾರಿಯ 5 ವರ್ಷದ ಮಕ್ಕಳಿಗೆ ಲಸಿಕೆ ಹಾಕುವ ಮೂಲಕ ಇಂದ್ರಧನುಷ್ ಅಭಿಯಾನಕ್ಕೆ ಚಾಲನೆ ನೀಡಿ ಮಾತಾನಾಡಿದರು.

ದಡಾರ ರುಬೆಲ್ಲಾ ನಿರ್ಮೂಲನೆಯತ್ತ ದೊಡ್ಡ ಹೆಜ್ಜೆ ಇಡಲಾಗಿದೆ. ಒಟ್ಟಾರೆ ಮಕ್ಕಳನ್ನು ಬಾಧಿಸುವ 12 ರೋಗ ನಿಯಂತ್ರಣಕ್ಕೆ ಪೂರಕವಾಗಿ ಲಸಿಕೆ ನೀಡಲಾಗುತ್ತಿದೆ. ಆರೋಗ್ಯ ಇಲಾಖೆ ಸಿಬ್ಬಂದಿ ಜತೆಗೆ ವಿದ್ಯಾವಂತ ಸಮುದಾಯ ಗ್ರಾಮೀಣ ಪ್ರದೇಶದಲ್ಲಿ ಲಸಿಕೆ ಅಭಿಯಾನ ಯಶಸ್ಸಿಗೆ ಶ್ರಮಿಸಬೇಕು ಎಂದು ಹೇಳಿದರು.
1 ನೇ ಡೋಜ್ ಮತ್ತು 2 ಡೋಜ್ ಪಡೆದವರು, ಎರಡನೇ ಸುತ್ತಿನಲ್ಲಿ ಕಡ್ಡಾಯವಾಗಿ ಮಕ್ಕಳಿಗೆ ಲಸಿಕೆ ಹಾಕಿಸಿ ಮಾರಕ ಖಾಯಿಲೆಯಿಂದ ತುತ್ತಾಗುವ ಮಕ್ಕಳನ್ನು ಉಳಿಸುವ ಪುಣ್ಯದ ಕಾರ್ಯಕ್ಕೆ ಕೈ ಜೋಡಿಸಿ ಯಶಸ್ವಿಗೊಳಿಸಬೇಕು. ಇನ್ನೂ ಒಂದರಡು ಲಸಿಕೆ ಪಡೆದ ಮಕ್ಕಳ ತಾಯಿಂದಿರು ಮುಂದಿನ ಲಸಿಕೆ ಹಾಕಲು ಹಿಂಜಿರಿಯುವುದು ಬೇಡ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಇನ್ನೋರ್ವ ಕ್ಷೇತ್ರ ಆರೋಗ್ಯ ಅಧಿಕಾರಿ ಎಮ್ ವೈ ಪೂಜಾರಿ ಮಾತಾನಾಡಿದ ಅವರು, ವಿಶ್ವ ಆರೋಗ್ಯ ಸಂಸ್ಥೆಯ ಮಾರ್ಗಸೂಚಿಯಂತೆ, ವಯಾಮನಾಕ್ಕೆ ಅನುಗುಣವಾಗಿ ಸಕಾಲಕ್ಕೆ ಎಲ್ಲಾ ಮಕ್ಕಳಿಗೆ ಲಸಿಕೆ ಹಾಕಿಸುವುದರಿಂದ ಮಕ್ಕಳ ಆರೋಗ್ಯದ ಭವಿಷ್ಯದ ಸುಂದರವಾಗಿರುತ್ತೆದೆ. ಮಗುವಿನ ತೊಡೆಯ ಮಧ್ಯ ಭಾಗದಲ್ಲಿ ಮಾಡುವ ಚುಚ್ಚು ಮದ್ದು ಸುಮಾರು 6 ರೋಗಗಳ ವಿರುದ್ಧ ಹೋರಾಟ ಮಾಡುತ್ತದೆ. ಒಂದು ವೇಳೆ ನಿರ್ಲಕ್ಷ್ಯ ಮಾಡಿದ್ರೆ ಮಾರಕ ಗಳಿಂದ ಸಾವೇ ಗತಿ, ಅದು ಬಿಟ್ಟು ಬೇರೆ ಮಾರ್ಗವಿಲ್ಲ. ಸುಮಾರು ರೋಗಗಳು ತಡೆಗಟ್ಟಲು ಲಸಿಕೆ ಹಾಕಿಸಿ ಎಂದು ಹೇಳಿದರು.
ಈ ಸಂದರ್ಭದಲ್ಲಿ ಹಿರಿಯ ಆರೋಗ್ಯ ನಿರೀಕ್ಷಾಧಿಕಾರಿ ಎಸ್ ಎಚ್ ಆತನೂರ, ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ ಪಾರ್ವತಿ ಬಡಿಗೇರ, ಆರೋಗ್ಯ ನಿರೀಕ್ಷಣಾಧಿಕಾರಿ ಪ್ರದೀಪ ಬೂದಿಹಾಳ , ರಾಜು ದಶವಂತ ಹಾಗೂ ಆಶಾಕಾರ್ಯಕರ್ತರು ಉಪಸ್ಥಿತರಿದ್ದರು.