ಕಬಡ್ಡಿ ಗಂಡುಗಲಿಗಳ ದೇಶಿಯ ಆಟ ; ಶ್ರೀಗಳು
ಅಫಜಲಪುರ: ತಾಲೂಕಿನ ಕರಜಗಿ ಗ್ರಾಮದಲ್ಲಿ
ಸುಭಾಷ್ ಚಂದ್ರ ಬೋಸ್ ಸೇನಾ ತರಬೇತಿ ಕೇಂದ್ರ ಕರಜಗಿ ಇವರ ವತಿಯಿಂದ ಹೊನಲು ಬೆಳಕಿನ ಪ್ರೊ ಕಬಡ್ಡಿ ಪಂದ್ಯಾವಳಿ ನಡೆಯಿತು.ಕ್ರೀಡಾ ಜೋತಿಯನ್ನ ಶ್ರೀಗಳು ಗ್ರಾಮದ ಮುಖಂಡರು ಸೇರಿ ಸ್ವಿಕರಿಸಿದರು.ಈ ಕಬಡ್ಡಿಯಲ್ಲಿ ವಿಶೇಷವೆನೆಂದರೆ ಅಂಗವಿಕಲ ವಿಧ್ಯಾಥಿ೯ ಕಬಡ್ಡಿ ಆಟವಾಡಿದ್ದು ಬಹಳಷ್ಟು ವಿಶೇಷವಾಗಿತ್ತು ಆ ಯುವಕನಲ್ಲಿ ಎಂತಹ ಕ್ರೀಡಾ ಆಸಕ್ತಿ ಎಂಬುವುದು ನೊಡುಗರಲ್ಲಿ ಬಹಳ ವಿಶೇಷವೆನಿಸಿತ್ತು.
ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದ್ದ ಮರುಳಾದ್ಯ ಶ್ರೀಗಳು ಮಾತನಾಡಿ ಕಬಡ್ಡಿ ಅಂತಹ ಕ್ರೀಡೆಗಳು ಆಡುವುದರಿಂದ ಯುವಕರ ದೇಹ ಸದೃಢವಾಗುವುದು ಅಲ್ಲದೆ ಯುವಕರು ಯಾವುದೇ ರೀತಿಯ ಚಟಗಳಿಗೆ ಮಾರುಹೋಗದೆ ಒಳ್ಳೆಯ ಗುಣಗಳನ್ನು ಕಲಿತು ಗ್ರಾಮದ ಹೆಸರು ಉನ್ನತಮಠದಲ್ಲಿ ಬೆಳೆಸಿ ಕ್ರೀಡೆಗಳಲ್ಲಿ ದೊಡ್ಡಮಟ್ಟದಲ್ಲಿ ಹೆಸರು ಬೆಳೆಸಿ ಗ್ರಾಮದ ಸಂಪೂರ್ಣ ಬೆಳವಣಿಗೆಯಲ್ಲಿ ಯುವಕರ ಪಾತ್ರ ಬಹಳ ದೊಡ್ಡದು ಇದೇ ರೀತಿ ಗ್ರಾಮದಲ್ಲಿ ಕ್ರೀಡೆಗಳನ್ನು ಆಯೋಜನೆ ಮಾಡಿ ಗ್ರಾಮದ ಯುವಕರು ದೊಡ್ಡ ಮಟ್ಟದಲ್ಲಿ ಕ್ರೀಡೆಯನ್ನ ಬೆಳೆಸಲಿ ಎಂದು ಆಶೀರ್ವದಿಸಿದರು.
ಪ್ರೊ ಕಬಡ್ಡಿಯ ಉದ್ದೇಶಿಸಿ ಲಯನ್ಸ್ ಕ್ಲಬ್ ರೂವಾರಿಗಳಾದ ಮಂಜುನಾಥ ನಾಯಕೋಡಿ ಮಾತನಾಡಿ ನಮ್ಮ ಗ್ರಾಮಗಳಲ್ಲಿ ಏಳು ವರ್ಷದಿಂದ ಕಬಡ್ಡಿ ಆ ಯೋಜನೆ ಮಾಡುತ್ತಾ ಬಂದಿದ್ದೆವೆ ನಮ್ಮ ಗ್ರಾಮದ ಯುವಕರು ಕಬಡ್ಡಿಯಲ್ಲಿ ತಾಲೂಕು ಮಟ್ಟ ಜಿಲ್ಲಾ ಮಟ್ಟ ರಾಜ್ಯ ಮಟ್ಟದಲ್ಲಿ ಆಯ್ಕೆಯಾಗಿದ್ದಾರೆ ಕಬಡ್ಡಿಯಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ ಎಂದರು.
ಈ ಸಂದರ್ಭದಲ್ಲಿ ರಾಹುಲ್ ಪೂಜಾರಿ ವಿಜಯಕುಮಾರ್ ತಳವಾರ ಮಲ್ಕಣ್ಣ ಪರಿಟ್ ವಿಠೋಬಾ ಹಿರೇಕುಬುರು ಮಂಜುನಾಥ ನಾಯಕೋಡಿ ಚಿದಾನಂದ ನಾಯಕೋಡಿ, ಸಿದ್ದರಾಮಯ ಸುಲ್ತಾನಪುರ್, ಸೋಮನಾಥ ನಾಯಕೋಡಿ, ಸಿದ್ದಾರಾಮ ಮೇತ್ರಿ,ರಫಿಕ ಮುಜಾವರ, ಮಡಿವಾಳ ಹಳಿಯಾಳ,ಆರ್ ಎಸ್ ಹೊರಪೆಟೆ,ಸಲಿಂ ಜಮಾದಾರ, ಶ್ರೀನಾಥ್ ನಾಯಕೋಡಿ ಶಿವಾನಂದ ಕೋನಳ್ಳಿ ,ಅಸ್ಪಾಕ ಅವಟೆ,ಆರೀಫ್, ಪ್ರಕಾಶ್ ಅಲೆಗಾಂವ ಅಸ್ಲಾಂಬಾಬಾ ಚೌಧರಿ ಭಗವಂತ ಬಳಗಾನೂರ ಸುಭಾಷಚಂದ್ರ ಭೋಸ್ ತರಬೇತಿ ಕೇಂದ್ರದ ಮುಖ್ಯಸ್ಥರು ಪ್ರೊ ಕಬಡ್ಡಿ ಆಯೋಜಕರು ಹಾಗೂ ಗ್ರಾಮಸ್ಥರು ಕ್ರೀಡಾಪಟುಗಳು ವಿದ್ಯಾರ್ಥಿಗಳು ಸಮಸ್ತ ಗ್ರಾಮದ ಹಿರಿಯರು ಉಪಸ್ಥಿತರಿದ್ದರು.