Voice Of Janata DesK News
ಕಾಂಗರೂ ಪಡೆಗೆ ಮೊದಲ ಗೆಲುವು..
ಐದು ಪಂದ್ಯಗಳ ಟಿ20 ಸರಣಿಯಲ್ಲಿ ಭಾರತ ಇನ್ನೂ 2-1 ಅಂತರದಿಂದ ಮುನ್ನಡೆ..
India vs Australia 3rd T20 : ಮ್ಯಾಕ್ಸ್‌ವೆಲ್ ಸಿಡಿಸಿದ ಸಿಡಿಲಬ್ಬರದ ಶತಕದ ನೆರವಿನಿಂದ ಗುವಾಹಟಿಯಲ್ಲಿ ನಡೆದ ಮೂರನೇ ಟಿ20 ಪಂದ್ಯವನ್ನು ಆಸ್ಟ್ರೇಲಿಯಾ 5 ವಿಕೆಟ್‌ಗಳಿಂದ ಗೆದ್ದುಕೊಂಡಿದೆ.
ಆರಂಭಿಕ ಎರಡೂ ಪಂದ್ಯಗಳಲ್ಲಿ ಗೆಲುವು ಪಡೆಯುವ ಮೂಲಕ ಟಿ20 ಸರಣಿಯಲ್ಲಿ 2-0 ಮುನ್ನಡೆ ಪಡೆದಿದ್ದ ಭಾರತ ತಂಡ, ಮೂರನೇ ಪಂದ್ಯದಲ್ಲಿ ಆಸ್ಟ್ರೇಲಿಯಾ ಎದುರು 5 ವಿಕೆಟ್ ಸೋಲು ಅನುಭವಿಸಿತು. ಗುವಾಹಟಿಯ ಬರ್ಸಪರ ಕ್ರಿಕೆಟ್ ಕ್ರೀಡಾಂಗಣದಲ್ಲಿ ಭಾರತ ನೀಡಿದ್ದ 223 ರನ್‌ಗಳ ಗುರಿಯನ್ನು ಹಿಂಬಾಲಿಸಿದ ಆಸ್ಟ್ರೇಲಿಯಾ ತಂಡ, ಗ್ಲೆನ್ ಮ್ಯಾಕ್ಸ್‌ವೆಲ್ (104*) ಸ್ಪೋಟಕ ಶತಕದ ಬಲದಿಂದ 225 ರನ್ ಗಳಿಸಿ ರೋಚಕ ಗೆಲುವು ಸಾಧಿಸಿತು. ಆ ಮೂಲಕ ಟಿ20 ಸರಣಿಯನ್ನು ಜೀವಂತವಾಗಿರಿಸಿಕೊಂಡಿದೆ. ಭಾರತ ತಂಡದ ಪರ ಋತುರಾಜ್ ಗಾಯಕ್ವಾಡ್ ಗಳಿಸಿದ್ದ ಅಜೇಯ 123 ರನ್‌ಗಳು ವ್ಯರ್ಥವಾದವು.
ಸ್ಕೋರ್ ವಿವರ
ಭಾರತ: 20 ಓವರ್‌ಗಳಿಗೆ 222-3 (ಋತುರಾಜ್ ಗಾಯಕ್ವಾಡ್ 123*, ಸೂರ್ಯಕುಮಾರ್ ಯಾದವ್ 39, ತಿಲಕ್ ವರ್ಮಾ 31*; ಜೇಸನ್ ಬೆಹ್ರನ್‌ಡ್ರಾಫ್ 12ಕ್ಕೆ 1, ಕೇನ್ ರಿಚರ್ಡ್ಸನ್ 34 ಕ್ಕೆ 1)
ಆಸ್ಟ್ರೇಲಿಯಾ: 20 ಓವರ್‌ಗಳಿಗೆ 225-5 (ಗ್ಲೆನ್ ಮ್ಯಾಕ್ಸ್‌ವೆಲ್ 104*, ಟ್ರಾವಿಸ್ ಹೆಡ್ 35, ಮ್ಯಾಥ್ಯೂ ವೇಡ್ 28*; ರವಿ ಬಿಷ್ಣೋಯ್ 32ಕ್ಕೆ 1)
ಪಂದ್ಯ ಶ್ರೇಷ್ಠ ಪ್ರಶಸ್ತಿ: ಗ್ಲೆನ್ ಮ್ಯಾಕ್ಸ್‌ವೆಲ್