ವಿಶ್ವದ ಇತರೆ ದೇಶಗಳಿಗೆ ಪ್ರತಿಭೆಗಳನ್ನು ರವಾನಿಸುವ ದೇಶ ಭಾರತ : ಎಸಿ ಅಬೀದ್ ಗದ್ಯಾಳ
ಇಂಡಿ : ವಿಶ್ವದ ಹಲವು ದೇಶಗಳಲ್ಲಿನ ಪ್ರಸಿದ್ಧ ಕಂಪನಿಗಳಲ್ಲಿ ಉನ್ನತ ಹುದ್ದೆಯಲ್ಲಿ ಇರುವವರು ಭಾರತೀಯರು. ಭಾರತೀಯರು ಬುದ್ಧಿಶಕ್ತಿಯಲ್ಲಿ ಉನ್ನತ ಮಟ್ಟದಲ್ಲಿ ಇದ್ದು, ಹೀಗಾಗಿ ಭಾರತೀಯ ಪ್ರತಿಭೆಗಳು ಹೊರದೇಶದಲ್ಲಿಯೂ ತಮ್ಮ ಪ್ರತಿಭೆಯನ್ನು ತೊರಿಸುತ್ತಿದ್ದಾರೆ.ಭಾರತ ಪ್ರತಿಭೆಗಳ ತಯಾರಿಸುವ ದೇಶ ಎಂದು ಎಸಿ ಅಬೀದ್ ಗದ್ಯಾಳ ಹೇಳಿದರು. ಅವರು ಪಟ್ಟಣದ ಎಸ್ .ಎಸ್ .ಪ್ಯಾರಾ ಮೆಡಿಕಲ್ ಕಾಲೇಜು ಹಾಗೂ ಎಕ್ಸಲಂಟ್ ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆಯ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡ ವಾರ್ಷಿಕ ಸ್ನೇಹ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದರು.
ಸಂಸ್ಥೆಯ ಅಧ್ಯಕ್ಷ ಹಾಗೂ ನ್ಯಾಯವಾದಿ ಎಸ್ .ಬಿ.ಕೆಂಬೋಗಿ ಪ್ರಾಸ್ತಾವಿಕವಾಗಿ ಮಾತನಾಡಿ, ಬಡತನದ ಗ್ರಾಮೀಣ ಕುಟುಂಬದಲ್ಲಿ ಬಂದಿರುವ ನಾನು, ಬಡತನ ಏನು ಎಂಬುದು ನನಗೆ ಅರಿವಾಗಿದ್ದರಿಂದ ತಾಲೂಕು ಮಟ್ಟದಲ್ಲಿ ಶಿಕ್ಷಣ ಸಂಸ್ಥೆಯೊಂದನ್ನು ಹುಟ್ಟು ಹಾಕಿ ಪಾಲಕರಿಂದ ಕಡಿಮೆ ಹಣ ಪಡೆದು ತಾಲೂಕಿನ ಮಕ್ಕಳಿಗೆ ಉತ್ತಮ ಶಿಕ್ಷಣವನ್ನು ನೀಡಬೇಕು ಎಂದು ಗುರಿ ಇಟ್ಟುಕೊಂಡು ಶಿಕ್ಷಣ ಸಂಸ್ಥೆ ಸ್ಥಾಪಿಸಿದ್ದೇನೆ, ವಿನ ಹಣ ಗಳಿಸುವುದಕ್ಕಾಗಿ ಅಲ್ಲ.ಶಿಕ್ಷಣ ವ್ಯಾಪಾರೀಕರಣ ಮಾಡದೇ, ಬಡಪ್ರತಿಭಾವಂತ ಮಕ್ಕಳಿಗೆ ಶಿಕ್ಷಣ ದೊರಕಿಸಿಕೊಡಬೇಕು ಎಂಬ ಹಂಬಲದಿಂದ ಶಿಕ್ಷಣ ಸಂಸ್ಥೆ ಹುಟ್ಟು ಹಾಕಿದ್ದೇನೆ ಎಂದು ಹೇಳಿದರು. ಮುಂಬರುವ ದಿನದಲ್ಲಿ ಉಚಿತವಾಗಿ ರಾಣಿಚೆನ್ನಮ್ಮ, ಮುರಾರ್ಜಿ ದೇಸಾಯಿ ವಸತಿ ಶಾಲೆಗಳು ಹಾಗೂ ಆದರ್ಶ ಶಾಲೆಗಳ ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿಯಾಗುವಂತೆ ತರಬೇತಿ ಶಾಲೆಯನ್ನು ಆರಂಭಿಸುವ ಚಿಂತನೆ ಇಟ್ಟುಕೊಂಡಿದ್ದೇನೆ ಎಂದು ಹೇಳಿದರು. ಶಿಕ್ಷಕ, ಸಾಹಿತಿ ದಶರಥ ಕೊರೆ ಉಪನ್ಯಾಸ ನೀಡಿದರು.
ಅಭಿನವ ಪುಂಡಲಿಂಗ ಮಹಾಶಿವಯೋಗಿಗಳು ಸಾನಿಧ್ಯ ವಹಿಸಿದ್ದರು.ಪುರಸಭೆ ಸದಸ್ಯರಾದ ದೇವೆಂದ್ರ ಕುಂಬಾರ, ಅನೀಲಗೌಡ ಬಿರಾದಾರ, ನಿಜಣ್ಯ ಕಾಳೆ,ಮಲು ವಾಲಿಕಾರ, ಪಾಪು ಕಿತ್ತಲಿ,ಯಮುನಾಜಿ ಸಾಳುಂಕೆ, ನ್ಯಾಯವಾದಿಗಳಾದ ಪಾಟೀಲ, ಮಲು, ಹಾವಿನಾಳಮಠ, ಮೋಹನ ರಾಠೋಡ, ಶಂಕರ ಜಮಾದಾರ, ಮುಖ್ಯ ಶಿಕ್ಷಕ ಶ್ರೀಶೈಲ ಹೂಗಾರ, ಜಗದೀಶ ರಾಠೋಡ, ಫಯಾಜ ಬಾಗವಾನ ಮೊದಲಾದವರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಇದೆ ಸಂದರ್ಭದಲ್ಲಿ ಮಾಧ್ಯಮ ಕ್ಷೇತ್ರದಲ್ಲಿ ಖಾಜು ಸಿಂಗೆಗೋಳ, ಆರ್ಯುವೇದ ಕ್ಷೇತ್ರದಲ್ಲಿ ಡಾ.ಸುನೀಲಕುಮಾರ ಸರಸಂಬಿ, ಆಗ್ನಿಶಾಮಕದ ಮುಬಾರಕ ಇಂಡಿಕರ, ಸಾವಯವ ಕೃಷಿ ಕ್ಷೇತ್ರದಲ್ಲಿ ಮಲ್ಲಿಕಾರ್ಜುನ ಗುಡ, ಸಾಮಾಜಿಕ ಕ್ಷೇತ್ರದಲ್ಲಿ ಪ್ರೀತು ದಶವಂತ ಅವರು ವಿಶೇಷ ಸಾಧನೆ ಮಾಡಿದಕ್ಕಾಗಿ ಸಾಧಕರಿಗೆ ಸನ್ಮಾನ ನೆರವೇರಿಸಲಾಯಿತು.ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿದವು.
ಇಂಡಿ ಪಟ್ಟಣದ ಎಸ್ .ಎಸ್ .ಪ್ಯಾರಾ ಮೆಡಿಕಲ್ ಕಾಲೇಜು ಹಾಗೂ ಎಕ್ಸಲಂಟ್ ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆಯ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡ ವಾರ್ಷಿಕ ಸ್ನೇಹ ಸಮ್ಮೇಳನವನ್ನು ಎಸಿ ಅಬೀದ್ ಗದ್ಯಾಳ ಉದ್ಘಾಟಿಸಿದರು.