ಇಂಡಿ | ವಿಪ್ರ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನ
ಇಂಡಿ : ಪರೀಕ್ಷೆಗಳಲ್ಲಿ ಹೆಚ್ಚಿನ ಅಂಕ ಪಡೆದುಕೊಂಡು ವಿದ್ಯಾರ್ಥಿಗಳಿಗೆ ಸನ್ಮಾನಿಸುವದು ಕೇವಲ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಿಸುವದಲ್ಲ, ಅದರ ಜೊತೆಗೆ ವಿದ್ಯೆಗೆ ಮಹತ್ವ ನೀಡುವ ಮಹತ್ತರ ಕಾರ್ಯವಾಗಿದೆಯೆಂದು ಹಿರೇಮಣ್ಣೂರಿನ ವೇದತೀರ್ಥ ಸಂಸ್ಕೃತ ವಿದ್ಯಾಪೀಠದ ಕುಲಪತಿ ಪಂಡಿತ ಅನಂತಾಚಾರ್ಯ ಅಕಮಂಚಿ ಅಭಿಪ್ರಾಯಪಟ್ಟರು.
ಪಟ್ಟಣದಲ್ಲಿ ಸೋಮವಾರ ಅಖಿಲ ಭಾರತ ಬ್ರಾಹ್ಮಣ ಮಹಾಸಭಾ ತಾಲ್ಲೂಕು ಶಾಖೆ ಇಂಡಿ ವತಿಯಿಂದ ಶ್ರೀ ಸತ್ಯನಾರಾಯಣ ದೇವಸ್ಥಾನದ ಸಭಾ ಭವನದಲ್ಲಿ ಏರ್ಪಡಿಸಿದ್ದ ಪ್ರತಿಭಾ ಪುರಸ್ಕಾರ ಸಮಾರಂಭದ ಸಾನಿಧ್ಯ ವಹಿಸಿ ಆಶಿರ್ವಚನ ನೀಡಿದರು.
ಎಲ್ಲಾ ಸಂಪತ್ತುಗಳಿಗಿಂತ ಶಿಕ್ಷಣ ಸಂಪತ್ತು ಶ್ರೇಷ್ಠ ಎಂದ ಅವರು ಮಕ್ಕಳು ವಿದ್ಯೆಯಲ್ಲಿ ಆಗಿರಲಿ, ಕ್ರೀಡೆಯಲ್ಲಿರಲಿ ಅಥವಾ ಇನ್ನಿತರ ಯಾವದೇ ಸ್ಪರ್ಧೆಯಲ್ಲಿ ಸಾಧನೆ ಮಾಡಿರಲಿ ಅಂತಹ ಮಕ್ಕಳನ್ನು ಬ್ರಾಹ್ಮಣ ಮಹಾ ಸಭಾ ಗುರುತಿಸಿ ಸನ್ಮಾನಿಸುವ ಕಾರ್ಯ ನಿರಂತರವಾಗಿ ಮಾಡಬೇಕೆಂದರು.
ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಜಂಟೀ ಕಾರ್ಯದರ್ಶಿ ಸತಿಶ್ಚಂದ್ರ ಕುಲಕರ್ಣಿ ಮಾತನಾಡಿ, ಅಖಿಲ ಕರ್ನಾಟಕ ಮಹಾ ಸಭಾ ಪ್ರತೀ ವರ್ಷ ತಾಲ್ಲೂಕು ಮತ್ತು ಜಿಲ್ಲಾ ಮಟ್ಟದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸಿ ಸನ್ಮಾನಿಸುದಲ್ಲದೇ ಪ್ರತಿಭಾವಂತ ಬಡ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣಕ್ಕಾಗಿ ಹಣಕಾಸಿನ ಸಹಾಯ ಹಸ್ತ ಕೂಡಾ ನೀಡುವ ಬಗ್ಗೆ ತೀರ್ಮಾನಿಸಲಾಗಿದೆಯೆಂದರು
ಎಸ್ ಎಸ್ ಎಲ್ ಸಿ, ಪಿಯುಸಿ ಹಾಗೂ ಇಂಜಿನಿರಿಂಗ್ ವಿಭಾಗದಲ್ಲಿ ಹೆಚ್ಚಿನ ಅಂಕಗಳನ್ನು ಪಡೆದ ವಿದ್ಯಾರ್ಥಿಗಳಾದ ರೋಹಿತ ಕುಲಕರ್ಣಿ, ಗೌರಿ ಪಾಟೀಲ, ಗೌತಮಿ ಕುಲಕರ್ಣಿ, ಸೌಮ್ಯ ಕುಲಕರ್ಣಿ, ಸುಪ್ರೀಯಾ ಕುಲಕರ್ಣಿ, ದೀಕ್ಷಾ ಪಾಟೀಲ, ದೀವಾಕರ ಕುಲಕರ್ಣಿ, ಅಕ್ಷತಾ ಕುಲಕರ್ಣಿ, ಪ್ರತಿಕ್ಷಾ ಕುಲಕರ್ಣಿ, ಶ್ರೇಯಾ ನಾಡಗೌಡ, ಸಮರ್ಥ ಜಹಾಗೀರದಾರ, ಸಾಯಿರಾಮ ಕುಲಕರ್ಣಿ ಅವರಿಗೆ ಸನ್ಮಾನಿಸಲಾಯಿತು.
ವೇದಿಕೆಯಲ್ಲಿ ಸತೀಶ್ಚಂದ್ರ ಕುಲಕರ್ಣಿ, ಹಿರಿಯ ವಕೀಲರಾದ ಆರ್.ವಿ.ದೇಶಪಾಂಡೆ, ನಿವೃತ್ತ ಮುಖ್ಯಗುರು ಜೆ.ಎನ್.ನಾಡಗೌಡ ಇದ್ದರು.
ಇದೇ ಸಂದರ್ಭದಲ್ಲಿ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾ ಸಭಾದ ಜಂಟೀ ಕಾರ್ಯದರ್ಶಿಯಾಗಿ ವಿಜಯಪೂರ ಜಿಲ್ಲೆಯಿಂದ ಆಯ್ಕೆಯಾದ ಸತೀಶ್ಚಂದ್ರ ಕುಲಕರ್ಣಿ ಅವರಿಗೆ ಬ್ರಾಹ್ಮಣ ಸಮಾಜದಿಂದ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ವಿಪ್ರ ಸಮಾಜದ ಹಿರಿಯರಾದ ಆರ್.ವ್ದಿ. ದೇಶಪಾಂಡೆ, ಜಿ.ಎ.ನಾಡಗೌಡ, ವೇಂಕಟೇಶ ಕುಲಕರ್ಣಿ, ಆನಂದ ಕುಲಕರ್ಣಿ, ಮುಕುಂದ ಆದ್ಯ, ಎನ್.ಕೆ.ನಾಡಪುರೋಹಿತ, ಜಗನ್ನಾಥ ಪಾಟೀಲ, ಪಿ. ಜಿ.ನಾಡಗೌಡ, ಡಿ.ಎಸ್. ಜ್ಯೋಶಿ.ಎಸ್.ವ್ದಿ. ಕುಲಕರ್ಣಿ, ಪ್ರಸನ್ನ ದೇಶಪಾಂಡೆ, ಗುರುರಾಜ,ಗೋಪಾಲ ಕುಲಕರ್ಣಿ, ರವಿ ಕುಲಕರ್ಣಿ, ಕೃಷ್ಣ ಚಟ್ಟರಕಿ,ಪ್ರಸನ್ನ ನಾಡಗೌಡ, ಮನೋಜ ಕುಲಕರ್ಣಿ,ದತ್ತಾ ಕುಲಕರ್ಣಿ, ಅರ್ಚಕ ಅಪ್ಪಣ್ಣಾಚಾರ್ಯ ಹಾಗು ಇನ್ನಿತರರು ಉಪಸ್ಥಿತರಿದ್ದರು.
ಇಂಡಿ ತಾಲೂಕ ಕಸಾಪ ಅಧ್ಯಕ್ಷ ರಾಘವೇಂದ್ರ ಕುಲಕರ್ಣಿ ಸ್ವಾಗತಿಸಿ, ವಂದಿಸಿದರು.
ಇಂಡಿ ತಾಲ್ಲೂಕು ಬ್ರಾಹ್ಮಣ ಮಹಾ ಸಭಾದ ಆಶ್ರಯದಲ್ಲಿ ಸೋಮವಾರ ಎಸ್ ಎಸ್ ಎಲ್ ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚಿನ ಅಂಕ ಪಡೆದ ಪ್ರತಿಭಾವಂತ ಬ್ರಾಹ್ಮಣ ವಿದ್ಯಾರ್ಥಿಗಳನ್ನು ಶ್ರೀ ಸತ್ಯನಾರಾಯಣ ದೇವಸ್ಥಾನದ ಸಭಾ ಭವನದಲ್ಲಿ ಸನ್ಮಾನಿಸಲಾಯಿತು.