ಇಂಡಿ : ಮೆಲ್ನೊಟಕ್ಕೆ ಸ್ಪಷ್ಟವಾಗಿ ಪುರಸಭೆಯಲ್ಲಿ ಅವ್ಯವಹಾರ ಕಾಣುತ್ತಿದ್ದು ಕೂಡಲೇ ತನಿಖೆ ಮಾಡಬೇಕೆಂದು ಆಗ್ರಹಿಸಿ ಜಿಲ್ಲಾ ಯೋಜನಾ ನಿರ್ದೇಶಕ, ನಗರಾಭಿವೃದ್ಧಿ ಕೋಶ ಅಧಿಕಾರಿ ರಾಜಶೇಖರ ಡಂಬಳ ಅವರಿಗೆ ಕರ್ನಾಟಕ ಪ್ರದೇಶ ಮಾದಿಗರ ಸಂಘದ ತಾಲ್ಲೂಕು ಅಧ್ಯಕ್ಷ ಚಂದ್ರಶೇಖರ ಹೊಸಮನಿ ಮನವಿ ಸಲ್ಲಿಸಿದರು.
ಶೇ.24.10 ಎಸಿ ಅನುದಾನ, ಪರಸಭೆಯ ನಿಧಿಯ, ನಗರೋತ್ಥಾನ ಅನುದಾನ, ಎನ್ ಎ ಕಾಲಿನಗಳ ಪ್ಲ್ಯಾಟ್ ಗಳ, ಎಸ್.ಎಪ್.ಸಿ ಅನುದಾನ, ಗುತ್ತಿಗೆದಾರರ ಮತ್ತು ಗುತ್ತಿಗೆ ಆಧಾರ ಮೇಲೆ ಕೆಲಸ ಮಾಡುತ್ತಿರುವ ಬಗ್ಗೆ ವಿವರ ಕೇಳಲಾಗಿತ್ತು. ಹಾಗೂ ನೈರ್ಮಲೀಕರಣ ಮತ್ತು ಕೀಟನಾಶಕ ಮೇಲಾಥಿನ ಪೌಡರ್, ಬ್ಲಾಕ್ ಪಿನಾಯಿಲ್, ಡೈಲೂಟೆಡ್ ಅ್ಯಸಿಡ್ ಮತ್ತು ಬ್ಲಿಚಿಂಗ್ ಪವಡರ್
ಗಳು ಸೇರಿ ೨೦೦೫ ರ ಮಾಹಿತಿ ಹಕ್ಕು ಅಡಿಯಲ್ಲಿ ಅರ್ಜಿ ಸಲ್ಲಿಸಲಾಗಿತ್ತು. ಆದರೆ ನಿಗದಿತ ಅವದಿ ಮುಗಿದರೂ ಹಿಂಬರ ಪೂರೈಸದ ಹಿನ್ನೆಲೆ ಪ್ರಥಮ ಮೆಲ್ಮಮನವಿಯನ್ನು ಕೂಡಾ ಸಲ್ಲಿಸಲಾಗಿದೆ.
ಈ ಸಂದರ್ಭದಲ್ಲಿ ಎರಡು ಪಕ್ಷಗಳನ್ನು ಕರೆದು ವಿಚಾರಣೆ ಮಾಡಬೇಕಾಗಿತ್ತು. ಅದನ್ನು ಮಾಡದೇ ೧೯ ದಿನಗಳ ನಂತರ ಸಾರ್ವಜನಿಕ ಮಾಹಿತಿ ಹಕ್ಕು ಅಧಿಕಾರಿಗಳಿಗೆ ನೇರವಾಗಿ ನೋಟಿಸ್ ಮುಟ್ಟಿದ ೩ ದಿನಗಳಲ್ಲಿ ದಾಖಲೆಗಳನ್ನು ಪೂರೈಸಲು ನೋಟಿಸ್ ಜಾರಿ ಮಾಡಿದ್ದಾರೆ. ಆದರೆ ನೋಟಿಸ್ ಜಾರಿ ಮಾಡಿ ೧೩ ದಿನ ಕಳೆದರೂ ಇಲ್ಲಿಯವರೆಗೆ ದಾಖಲಾತಿಗಳು ಪೂರೈಸಿರುವುದಿಲ್ಲ. ಹಾಗಾಗಿ ೨೦೦೫ ರ ಮಾಹಿತಿ ಅಧಿನಿಯಮ ಪಾಲನೆ ಮತ್ತು ದಾಖಲಾತಿಗಳು ಪೂರೈಸದ ಹಿನ್ನೆಲೆ ಸ್ವಷ್ಟವಾಗಿ ಗೋಚರಿಸುತ್ತೆದೆ ಅವ್ಯವಹಾರ ನಡೆದಿದೆ ಎಂದು ಕೂಡಲೇ ತನಿಖೆ ಮಾಡಿ ಇಲ್ಲದಿದ್ದರೆ ಉಗ್ರ ಹೋರಾಟಕ್ಕೆ ಸಮ್ಮತಿಯಿದೆ ಎಂದು ಭಾವಿಸಬೇಕಾಗುತ್ತೆದೆ ಎಂದು ಮನವಿ ಸಲ್ಲಿಸಿದರು.