ಇಂಡಿಯಲ್ಲಿ ಮೃತ್ಯು ಕೂಪಕವಾದ ಚರಂಡಿಗಳು..!
ಚರಂಡಿಯ ನಾಲೆಯಲ್ಲಿ ಬಿದ್ದು ಪ್ರಾಣಾಪಯಾದಿಂದ ಪಾರಾದ ಬಾಲಕ..!
ಇಂಡಿ : ಚರಂಡಿ ನಾಲೆಯಲ್ಲಿ ಐದು ವರ್ಷದ ಮಗು ಬಿದ್ದು ಪ್ರಾಣಾಪಾಯದಿಂದ ಪಾರಾದ ಘಟನೆ ಇಂಡಿ ಪಟ್ಟಣದಲ್ಲಿ ನಡೆದಿದೆ.
ಪಟ್ಟಣದ 16 ಮತ್ತು 17 ನೇ ನಂಬರ ವಾರ್ಡಲ್ಲಿ ಚರಂಡಿಗಳು ಮೃತ್ಯು ಕೊಪಕವಾಗಿ ನಿಂತಿವೆ.ಗುರುವಾರ ಸಾಯಂಕಾಲ ಸುಮಾರು ೬ ವರ್ಷದ ಬಿಲಾಲ ಡಾಂಗೆ ಎಂಬ ಏನು ಅರಿಯದ ಮಗು ಚರಂಡಿಯ ನಾಲೆಯಲ್ಲಿ ಬಿದ್ದಿದ್ದಾನೆ. ಆಳವಾದ ತೆರೆದ ಚರಂಡಿಯಲ್ಲಿ ಬಿದ್ದು ಮಗು ಜೀವನ್ಮರಣದ ಸ್ಥಿತಿಯಲ್ಲಿದ್ದಾಗ ದಾರಿ ಹೋಗುವ ವ್ಯಕ್ತಿ ಮಗುವನ್ನು ರಕ್ಷಣೆ ಮಾಡುವ ಕಾರ್ಯ ಮಾಡಿದ್ದು ಆ ಮಗು ಈಗ ಸುರಕ್ಷಿತವಾಗಿದೆ.
ಈ ಸಂದರ್ಭದಲ್ಲಿ ಆ ಮಗುವಿನ ತಂದೆ ಮಾತನಾಡಿದ್ದು, ಸುಮಾರು ದಿನಗಳ ಹಿಂದೆ ಕಾಮಗಾರಿ ಮಾಡಿದ್ದು, ಅದು ವೈಜ್ಞಾನಿಕ ರೂಪದಲ್ಲಿ ನಡೆದಿಲ್ಲ. ಅದರಲ್ಲಿ ಚರಂಡಿಯ ನಾಲೆಗಳು ಸುಮಾರು 6 ರಿಂದ 8 ಅಡಿ ಆಳವಿದ್ದು ಅವುಗಳ ಬಗ್ಗೆ ಪರ್ಯಾಯ ಮಾರ್ಗ ಕಂಡುಕೊಳ್ಳುವಲ್ಲಿ ಪುರಸಭೆ ನಿರ್ಲಕ್ಷ್ಯ ವಹಿಸಿದೆ.ಆದ್ದರಿಂದ ಚಿಕ್ಕ ಮಕ್ಕಳು , ಬೈಕ್ ಸವಾರರು ತುಂಬಾ ಕಷ್ಟ ಅನುಭವಿಸುತ್ತಿದ್ದಾರೆ. ಈ ಕೂಡಲೇ ತಾಲ್ಲೂಕು ಅಡಳಿತ ಅದರ ಬಗ್ಗೆ ಜವಾಬ್ದಾರಿ ವಹಿಸಬೇಕು.ಮತ್ತು ಅತ್ಯಂತ ಶಿಸ್ತು ಬದ್ಧ ಕೆಲಸ ಮಾಡಿ ಜೀವಗಳ ಪ್ರಾಣ ಹಾನಿಯಾಗದಂತೆ ನೋಡಿಕೊಳ್ಳಬೇಕು ಎಂದು ಆಗ್ರಹಿಸಿದರು.