ಇಂಡಿ | ಆದರ್ಶವಿದ್ಯಾಲಯ ಪ್ರವೇಶ ಆರಂಭ
ಇಂಡಿ : ೨೦೨೫-೨೬ ರ ಸಾಲಿನ ಆದರ್ಶ ವಿದ್ಯಾಲಯಕ್ಕೆ ೬ ನೇ ತರಗತಿಗೆ ಮೊದಲ ಸುತ್ತಿನ ದಾಖಲಾತಿ ಪ್ರಾರಂಭವಾಗಿದ್ದು ದಾಖಲಾತಿಗೆ ಮೇ ೨೯ ಕೊನೆ ದಿನ. ಈಗಾಗಲೇ ಪರೀಕ್ಷಾ ಫಲಿತಾಂಶ ಪ್ರಕಟವಾಗಿದ್ದು ಮೊದಲ ಸುತ್ತಿನಲ್ಲಿ ಆಯ್ಕೆಯಾದ ವಿದ್ಯಾರ್ಥಿಗಳ ಪಾಲಕರಿಗೆ ಸಂದೇಶ ಬಂದಿರುತ್ತದೆ. ಆಯ್ಕೆಯಾದವರು ಮೇ ೨೯ ರೊಳಗೆ ಹಾಜರಾಗಿ ದಾಖಲಾತಿ ಸಲ್ಲಿಸಿ ದಾಖಲಾತಿ ಮೊಂದಣ ಮಾಡಿಕೊಳ್ಳಬೇಕು.
ವರ್ಗಾವಣೆ ಪ್ರಮಾಣ ಪತ್ರ, ಮೂಲ ಪ್ರತಿ ಹಾಗೂ ೨ ಝರಾಕ್ಸ ಪ್ರತಿ ೫ ನೇ ತರಗತಿ ಅಂಕಪಟ್ಟಿ ಹಾಗೂ ಆನ್ ಲೈನ್ ಟಿಸಿ ವಿದ್ಯಾರ್ಥಿಯ ಆಧಾರ ಕಾರ್ಡ ೨ ಝರಾಕ್ಸ ಪ್ರತಿ ತಂದೆ ತಾಯಿಯ ಆಧಾರ ಕಾರ್ಡ ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಮೂಲ ಪ್ರತಿ ಹಾಗೂ ಝರಾಕ್ಸ ಪ್ರತಿ ವಾಸ ಸ್ಥಳ ದೃಡಿಕರಣ ಪತ್ರ ಬೇರೆ ತಾಲೂಕಿನವರಿಗೆ ಮಾತ್ರ ಅಂಗವಿಕಲ ಪ್ರಮಾಣ ಪತ್ರ ಮೂಲ ಪ್ರತಿ ಹಾಗೂ ೨ ಝರಾಕ್ಸ ಪ್ರತಿ ಪರೀಕ್ಷಾ ಪ್ರವೇಶ ಪತ್ರ ಆರೋಗ್ಯ ಕಾರ್ಡ ಹಾಗೂ ಪಾಸಪೋರ್ಟ ೪ ಪೋಟೋಗಳು ವಿದ್ಯಾರ್ಥಿಯ ಬ್ಯಾಂಕ ಪಾಸ್ ಬುಕ್ ಝರಾಕ್ಸ ಪ್ರತಿ ಪಾಲಕರ ಮೊಬೈಲ ಸಂಖ್ಯೆ ಪಿಇಎನ್ ಹಾಗೂ ಎಪಿಎಎಆರ್‌ಐಡಿ ಸಂಖ್ಯೆಯೊAದಿಗೆ ನಿಗದಿತ ಸಮಯ ದೊಳಗೆ ದಾಖಲಾತಿ ಮಾಡಿಕೊಳ್ಳಬೇಕು. ಮಾಹಿತಿಗೆ ಮುಖ್ಯೋಪಾಧ್ಯಾಯ ಎಸ್.ಜಿ.ಬನಸೋಡೆ ಮೊ.೮೯೭೦೭೧೬೦೫೪ ಗೆ ಸಂಪರ್ಕಿಸಲು ಆದರ್ಶ ಮಹಾವಿದ್ಯಾಲಯದ ಪ್ರಾಚಾರ್ಯರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.