ಇಂಡಿ : ಪ್ರತಿ ತಿಂಗಳು ತಾಲ್ಲೂಕು ಕಚೇರಿಗೆ ಜಿಲ್ಲಾಧಿಕಾರಿಗಳು ಭೇಟಿ ನೀಡಿ ಕಚೇರಿಯ ಅಧಿಕಾರಿಗಳ ಹಾಗೂ ಸಿಬ್ಬಂದಿಗಳ ಜೊತೆ ಸಮಾಲೋಚನೆ ನಡೆಸುತ್ತಿದ್ದರು. ಆದರೆ ಕರ್ನಾಟಕ ವಾಯವ್ಯ ಶಿಕ್ಷಕರ ಮತ್ತು ಪದವೀಧರರ ಮತ ಕ್ಷೇತ್ರದ ಚುನಾವಣೆ- 2022 ರ ದಿನಾಂಕ: 13-06-2022 ರಂದು ಮತದಾನ ಪ್ರಕ್ರಿಯೆ ಪೂರ್ಣಗೊಂಡ ನಂತರ ಮತಗಳ ಏಣಿಕೆ/ಅದರ ಪೂರ್ವಭಾವಿ ತಯಾರಿ ಸಲುವಾಗಿ ಚುನಾವಣಾಧಿಕಾರಿ – ಗಳೊಂದಿಗೆ ಬೆಳಗಾವಿಯಲ್ಲಿ ಇರಬೇಕಾಗುವುದರಿಂದ ದಿನಾಂಕ : 14-06-2022 ರಂದು ಇಂಡಿ ತಾಲ್ಲೂಕಾ ಕಚೇರಿಗೆ ಭೇಟಿ ನೀಡಲು ಸಾಧ್ಯವಾಗುವುದಿಲ್ಲ ಎಂದು ಪತ್ರಿಕಾ ಮಾಹಿತಿ ನೀಡಿದ್ದಾರೆ.