ಇಂಡಿ | ಕಂದಾಯ ಉಪವಿಭಾಗ ಅಧಿಕಾರಿಯಾಗಿ ವಿನಯ ಪಾಟೀಲ ಅಧಿಕಾರ ಸ್ವೀಕಾರ
ಇಂಡಿ : ವಿಜಯಪುರ ಜಿಲ್ಲೆಯ ಬಹುದೊಡ್ಡ ಕಂದಾಯ ಉಪ ವಿಭಾಗ ಎನಿಸಿಕೊಂಡಿರುವ ಇಂಡಿ ಕಂದಾಯ ಉಪವಿಭಾಗಕ್ಕೆ ನೂತನ ಸಾರಥಿಯಾಗಿ ವಿನಯ ಪಾಟೀಲ ಅವರು ಕಂದಾಯ ಉಪವಿಭಾಗ ಅಧಿಕಾರಯಾಗಿ ಅಧಿಕಾರ ಸ್ವೀಕರಿಸಿದರು.
ಈ ಇತ್ತೀಚಿಗೆ ಇಂಡಿಯ ಕಂದಾಯ ಉಪವಿಭಾಗ ಅಧಿಕಾರಿ ಅಬೀದ್ ಗದ್ಯಾಳ ಅವರು ಉಡುಪಿ ಜಿಲ್ಲೆ ಅಪರ ಜಿಲ್ಲಾಧಿಕಾರಿಯಾಗಿ ವರ್ಗಾವಣೆಗೊಂಡ ಹಿನ್ನೆಲೆಯಲ್ಲಿ ವಿನಯ ಪಾಟೀಲ ಅವರನ್ನು ಇಂಡಿ ಕಂದಾಯ ಉಪವಿಭಾಗದ ಪ್ರಭಾರ ಅಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದರು.
ಈ ಸಂದರ್ಭದಲ್ಲಿ ತಹಶಿಲ್ದಾರ ಬಿ.ಎಸ್ ಕಡಕಬಾವಿ ಪುಷ್ಪ ಗುಚ್ಚ ನೀಡಿ ಸ್ವಾಗತಸಿಕೊಂಡರು. ಕಂದಾಯ ನಿರೀಕ್ಷಕ ಎಚ್ ಎಸ್ ಗುನ್ನಾಪುರ, ಪರಮಾನಂದ ಹೂಗಾರ, ಶ್ರೀಪಾದ ಪೂಜಾರ್ ಸೇರಿದಂತೆ ಅನೇಕರು ಹಾಗೂ ಕಛೇರಿ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.