ಇಂಡಿ | ಪುರಸಭೆ ಮುಖ್ಯ ಅಧಿಕಾರಿ ವಿರುದ್ಧ ಪ್ರತಿಭಟನೆ..!
ಇಂಡಿ : ಪಟ್ಟಣದಲ್ಲಿ ಬೀದಿ ದೀಪ ಅಳವಡಿಸಲು ಮನವಿ ಮಾಡಲು ತೆರಳಿದ್ದಾಗ ನನ್ನನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆಂದು ಪುರಸಭೆ ಎದುರು ಪ್ರತಿಭಟನೆ ನಡೆಸುತ್ತೀರುವ ಘಟನೆ ವಿಜಯಪುರ ಜಿಲ್ಲೆಯ ಇಂಡಿ ಪಟ್ಟಣದಲ್ಲಿ ನಡೆದಿದೆ.
ಕರ್ನಾಟಕ ಆದಿಜಾಂಬವ ಜನಸಂಘ ತಾಲೂಕಾ ಅಧ್ಯಕ್ಷ ದತ್ತಾತ್ರೇಯ ಪರಸಪ್ಪ ಬಂಡೇನವರ ತಮ್ಮ ವಾರ್ಡದಲ್ಲಿ ಬೀದಿ ದೀಪ ಅಳವಡಿಸಲು ಮುಖ್ಯಾಧಿಕಾರಿಗಳಿಗೆ ಮನವಿ ಮಂಗಳವಾರ ತೆರಳಿದ್ದರು. ಆಗ ಪುರಸಭೆ ಮುಖ್ಯ ಅಧಿಕಾರಿ ಸ್ಪಂದನೆ ನೀಡದೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆಂದು ಪುರಸಭೆ ಎದುರು ಪ್ರತಿಭಟನೆ ನಡೆಸುತ್ತೀರುವ ಘಟನೆ ಈ ಸದ್ಯ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಇದನ್ನು ಗಮನಿಸಿ ಮಾದ್ಯಮದವರು ಕರೆ ಮಾಡಿ ಕೇಳಿದಾಗ ಹೌದು ನನಗೆ ತುಂಬಾ ನೋವೂ ಆಗಿದೆ. ಮಾನ ಹಾನಿ ಯಾಗಿದೆ . ಕಾರಣ ಇವರ ವಿರುದ್ಧ ಕ್ರಮ ಜರುಗಿಸುವ ವರೆಗೆ ಪುರಸಭೆ ಕಾರ್ಯಾಲಯ ಎದುರುಗಡೆ ಧರಣಿ ಸತ್ಯಾಗ್ರಹ ಕೂಡುತ್ತೇನೆ ಎಂದು ತಿಳಿಸಿದ್ದಾರೆ.