ಸರ್ವತೋಮುಖ ಪ್ರಗತಿಗಾಗಿ ಇಂಡಿ ಪ್ರತ್ಯೇಕ ಜಿಲ್ಲೆಯಾಗಬೇಕು : ಧರ್ಮರಾಜ ವಾಲಿಕಾರ
ಇಂಡಿ : ಇಂಡಿ ಪ್ರತ್ಯೇಕ ಜಿಲ್ಲಾ ಘೋಷಣೆ ಯಾಗಬೇಕು, ಇಲ್ಲವಾದರೆ ಉಗ್ರವಾದ ಹೋರಾಟಕ್ಕೆ ಸಹಕಾರ ನೀಡಿದಂತಾಗುತ್ತದೆ ಎಂದು ತಳವಾರ ಪರಿವಾರ ಸಮಾಜ ಸೇವಾ ಸಂಘದ ಅಧ್ಯಕ್ಷ ಧರ್ಮರಾಜ ವಾಲಿಕಾರ ಹಾಗೂ ಪದಾಧಿಕಾರಿಗಳು ಕಂದಾಯ ಉಪವಿಭಾಗ ಅಧಿಕಾರಿ ಅಬೀದ್ ಗದ್ಯಾಳ ಅವರ ಮೂಲಕ ಮುಖ್ಯ ಮಂತ್ರಿಗಳಿಗೆ ಮನವಿ ಸಲ್ಲಿಸಿ ಮಾತಾನಾಡಿದರು.
ಮಂಗಳವಾರ ಪಟ್ಟಣದಲ್ಲಿ ಪ್ರತಿಭಟನೆ ಮೂಲಕ ಆಡಳಿತ ಸೌಧಕ್ಕೆ ಸರಕಾರದ ಮುಖ್ಯ ಮಂತ್ರಿಗಳಿಗೆ ಮನವಿ ಸಲ್ಲಿಸಿ ಮಾತಾನಾಡಿದರು. ಸುಮಾರು ವರ್ಷಗಳಿಂದ ಇಂಡಿ ಉಪವಿಭಾಗ ಅನೇಕ ಮೂಲಸೌಕರ್ಯ ಮತ್ತು ಅಭಿವೃದ್ಧಿ ಕಾರ್ಯಗಳಿಂದ ವಂಚಿತಗೊಂಡಿದೆ. ಇಲ್ಲಿಯವರೆಗೆ ಈ ಭಾಗದಲ್ಲಿ ಶೈಕ್ಷಣಿಕ ಪ್ರಗತಿ ಕಾಣಲು ಎಂಜಿನಿಯರ್ ಮೆಡಿಕಲ್ ಜೊತೆಗೆ ಇನ್ನಿತರ ಟೆಕ್ನಿಕಲ್ ಕಾಲೇಜು ಗಳು ಹೊಂದಿಲ್ಲ. ಅದಲ್ಲದೇ ಕೈಗಾರಿಕಾ ಕೇಂದ್ರಗಳು ಸಹ ನಮ್ಮ ಭಾಗದಲ್ಲಿ ಇಲ್ಲವಾಗಿವೆ. ಇತ್ತೀಚಿಗೆ ಹ್ಯಾಟ್ರಿಕ್ ಬಾರಿಸಿದ ಶಾಸಕ ಯಶವಂತರಾಯಗೌಡ ಪಾಟೀಲ್ ಅವರ ಇಚ್ಛಾಶಕ್ತಿ ಉತ್ಸಾಹದಿಂದ ತಾಲೂಕು ದೂರದೃಷ್ಟಿ ವಿಚಾರದಿಂದ ಅಭಿವೃದ್ಧಿ ಮತ್ತು ಬದಲಾವಣೆ ಕಾಣುತ್ತಿದ್ದೆವೆ. ಆದರೆ ಇಂಡಿ ಉಪವಿಭಾಗದ ತಾಲೂಕುಗಳು ಸಿಂದಗಿ, ದೇವರಹಿಪ್ಪರಗಿ, ಚಡಚಣ, ಆಲಮೇಲ ಸಂಪೂರ್ಣ ಬದಲಾವಣೆಯ ಪ್ರಗತಿಯತ್ತ್ ಸಾಗಲು ಸರ್ವತೋಮುಖ ಅಭಿವೃದ್ಧಿಗೆ ಇಂಡಿ ಜಿಲ್ಲಾ ಕೇಂದ್ರ ಘೋಷಣೆಯಾಗುವುದು ಅತೀ ಅವಶ್ಯಕತೆ ವಾಗಿದೆ ಎಂದು ಹೇಳಿದರು. ಒಂದು ವೇಳೆ ನಿರ್ಲಕ್ಷ್ಯ ವಹಿಸಿದ್ರೆ ಹೋರಾಟದ ಮೂಲಕ ಬೆಂಗಳೂರನ್ನೇ ಇಂಡಿಗೆ ತರಬೇಕಾಗುತ್ತದೆ ಎಂದು ಸರಕಾರಕ್ಕೆ ಎಚ್ಚರಿಸಿದರು.
ಈ ಸಂದರ್ಭದಲ್ಲಿ ಪ್ರದಾನ ಕಾರ್ಯದರ್ಶಿ ಹುಚ್ಚಪ್ಪ ತಳವಾರ, ಚಂದ್ರಕಾಂತ ಲಿಂಗದಳ್ಳಿ, ಸಮಾಜದ ಹಿರಿಯ ಮುಖಂಡ ಭೀಮಣ್ಣ ಕೌಲಗಿ, ಸಂಜೀವ ತಳವಾರ, ಸುನಿಲ ಕೋಳಿ ಇನ್ನೂ ಅನೇಕ ಮುಖಂಡರು ಹಾಗೂ ಯುವಕರು ಉಪಸ್ಥಿತರಿದ್ದರು.