ಇತಿಹಾಸವುಳ್ಳ ಇಂಡಿ ತಾಲೂಕು ಜಿಲ್ಲಾ ಕೇಂದ್ರಕ್ಕೆ ಆಗ್ರಹಿಸಿ ಪ್ರತಿಭಟಿಸಿದ ಪುರಸಭೆ ಮಾಜಿ ಅಧ್ಯಕ್ಷ ಯಮುನಾಜಿ ಸಾಳುಂಕೆ..
ಇಂಡಿ : ಸ್ವತಂತ್ರ ಪೂರ್ವದಲ್ಲಿ ಇತಿಹಾಸ ನಿರ್ಮಿಸಿದ ಹಾಗೂ ಬ್ರಿಟಿಷ್ ರ ಕಾಲಘಟ್ಟದಲ್ಲಿ ಉಪವಿಭಾಗ ಕಚೇರಿಯಾಗಿ ನಾಡಿನ ಜನತೆಯ ಸೇವೆ ನೀಡಿದ ಇಂಡಿ ತಾಲೂಕು ಪ್ರತ್ಯೇಕ ಜಿಲ್ಲಾ ಕೇಂದ್ರವಾಗಬೇಕು ಎಂದು ಆಗ್ರಹಿಸಿ ಪುರಸಭೆ ಮಾಜಿ ಅಧ್ಯಕ್ಷ ಯಮುನಾಜಿ ಸಾಳುಂಕೆ ಹೇಳಿದರು.
ಇಂಡಿ ಪಟ್ಟಣದಲ್ಲಿ ಹಲವಾರು ಮಹಿಳಾ ಸಂಘಟನೆಗಳು, ಸಾಹಿತ್ಯ ಪರಿಷತ್ತು ಜೊತೆಗೆ ಜಿಲ್ಲಾ ಹೋರಾಟ ಸಮಿತಿಗಳ ಪ್ರತಿಭಟನೆಯಲ್ಲಿ ಮಾತಾನಾಡಿದರು.
ಮಹಾ ಗಡಿಭಾಗದಲ್ಲಿ ಬರುವ ಇಂಡಿ ತಾಲೂಕಿನ ಉಪ ವಿಭಾಗದ ಕ್ಷೇತ್ರ ಚಡಚಣ, ಆಲಮೇಲ, ಸಿಂದಗಿ, ದೇವರಹಿಪ್ಪರಗಿ ಸಂಪೂರ್ಣ ಅಭಿವೃದ್ಧಿಯಿಂದ ವಂಚಿತಗೊಂಡಿದೆ. ಸರಕಾರಗಳು ಈ ಭಾಗದ ಯಾವ ಐತಿಹಾಸಿಕ ಸ್ಥಳಗಳನ್ನು ಗುರುತಿಸಿಲ್ಲ. ಅದಕ್ಕಾಗಿ ವಿಶೇಷ ಕಾರ್ಯಕ್ರಮಗಳು ರೂಪಿಸಿಲ್ಲ. ನಿಂಬಾಳದ ಎಮ್ ಜಿ ರಾನಡೆ ಮಠ, ಹಲಸಂಗಿ ಗೆಳಯರ ಬಳಗದ ಸ್ಮಾರಕ ಹಾಗೂ ಲಚ್ಯಾಣ ಸಿದ್ದಲಿಂಗ ಮಠಕ್ಕೆ ಸರಕಾರದ ಕೊಡುಗೆ ಶೂನ್ಯವಾಗಿದೆ. ನಮ್ಮ ಭಾಗದಲ್ಲಿ ಬರುವ ಐತಿಹಾಸಿಕ ಸ್ಥಳಗಳಿಗೆ ಪ್ರವಾಸ ಇಲಾಖೆಯಿಂದ ವಿಶೇಷ ಅನುದಾನ ಮತ್ತು ಕಾರ್ಯಕ್ರಮಗಳು ರೂಪಿಸಬೇಕಾಗುತ್ತದೆ.ಆದರೆ ಅದಕ್ಕೆ ಆಸಕ್ತಿವಹಿಸಬೇಕಾಗುತ್ತೆದೆ. ಈ ಎಲ್ಲಾ ದೃಷ್ಟಿಯಿಂದ ನೋಡಿದರೆ ನಂಜುಡಪ್ಪ ವರದಿಯಂತೆ ಇಂಡಿ ಉಪವಿಭಾಗ ಸಂಪೂರ್ಣ ಹಿಂದುಳಿದೆ. ಹಾಗಾಗಿ ಈ ಭಾಗದ ಅಭಿವೃದ್ಧಿ ಜನರ ಬೇಡಿಕೆಗೆ ಸರಕಾರ ಸ್ಪಂದಿಸಿ ಇಂಡಿಯನ್ನು ಜಿಲ್ಲಾ ಕೇಂದ್ರ ಘೋಷಣೆ ಮಾಡಿ ಹಾಗೂ ಈ ಮಕ್ಕಳ ಶಿಕ್ಷಣ ಭವಿಷ್ಯಕ್ಕಾಗಿ 371 ಜೆ ರಲ್ಲಿ ಸೇರ್ಪಡೆ ಗೊಳಿಸಬೇಕು ಎಂದು ಹೇಳಿದರು.
ಅದಲ್ಲದೇ ತಾಲೂಕುಗಳ ವಿಸ್ತೀರ್ಣ, ಜನಸಂಖ್ಯೆ, ಕಂದಾಯ ಸಂಗ್ರಹ, ಹೆದ್ದಾರಿ, ಶಿಕ್ಷಣ, ಸಾಮಾಜಿಕ ಸ್ಥಿತಿಗತಿ, ಆರ್ಥಿಕ ಸ್ಥಿತಿಗತಿ, ಉದ್ಯೋಗಾವಕಾಶಗಳ ಲಭ್ಯತೆ, ಸಂಪರ್ಕ, ಪಂಚಾಯತ್‌ರಾಜ್ ವ್ಯವಸ್ಥೆ, ಉಪವಿಭಾಗ ಕೇಂದ್ರ ಸೇರಿದಂತೆ ಅಂಕಿ- ಅಂಶಗಳ ಮಾಹಿತಿ ಸಂಗ್ರಹ ಮತ್ತು ಅವುಗಳ ಸಾಮಾಜಿಕ ಚರ್ಚೆಗೆ ಅವಕಾಶ ನೀಡುವ ನಿಟ್ಟಿನಲ್ಲಿ ಮಾಹಿತಿ ಮುದ್ರಿಸಿ ಹಂಚುವ ಕೆಲಸ ನಡೆಯಬೇಕು. ಅದರ ಜೊತೆಗೆ ತಾಲೂಕಿನ ಎಲ್ಲ ಸಂಘಟನೆಗಳ ನೇತೃತ್ವದಲ್ಲಿ ಹೋರಾಟವನ್ನು ರೂಪಿಸಬೇಕು ಎಂಬ ಸಲಹೆ ನೀಡಿದರು.