ಆಡಳಿತ್ಮಕವಾಗಿ ಎಲ್ಲಾ ವಿಧದಲ್ಲೂ ಪ್ರಗತಿ ಹೊಂದಲು ಇಂಡಿ ಜಿಲ್ಲಾ ಕೇಂದ್ರವಾಗಬೇಕು..!
ಇಂಡಿ: ರಾಜ್ಯದ ಗಡಿ ಭಾಗವಿರುವ ವಿಜಯಪುರ ಜಿಲ್ಲೆಯ ಇಂಡಿಯು ಡಾ. ನಂಜುಂಡಪ್ಪ ವರದಿಯನ್ವಯ ಅತಿ ಹಿಂದುಳಿದ ಪ್ರದೇಶವಾಗಿದೆ. ಅಲ್ಲದೆ ಶೈಕ್ಷಣಿಕವಾಗಿ,
ಆರ್ಥಿಕವಾಗಿ, ಸಾಮಾಜಿಕವಾಗಿ ಹಿಂದುಳಿದಿದ್ದರಿಂದ ಇಂಡಿಯು ಆಡಳಿತ್ಮಕವಾಗಿ ಎಲ್ಲ ವಿಧದಲ್ಲು ಪ್ರಗತಿ
ಹೊಂದಬೇಕಾದರೆ ಜಿಲ್ಲೆ ಮಾಡಿದಾಗ ಮಾತ್ರ ಸಾಧ್ಯ ಎಂದು ಖ್ಯಾತ ನ್ಯಾಯವಾಧಿ ಸುನೀಲ ಕುಲಕರ್ಣಿ ಹೇಳಿದರು.
ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ,
ಭೌಗೊಳಿಕವಾಗಿ ಕೇಂದ್ರ ಸ್ಥಾನದಲ್ಲಿದ್ದು ಜಿಲ್ಲೆಗೆ ಇರಬೇಕಾದ ಪೂರಕ ಅಂಶಗಳು ಸಾಕಷ್ಟು ಲಭ್ಯ ಇವೆ.
ಆದ್ದರಿಂದ ಮಾನ್ಯ ಮುಖ್ಯಮಂತ್ರಿಗಳು ಇಂಡಿ ಪ್ರತೇಕ
ಜಿಲ್ಲೆ ರಚನೆ ಮಾಡಿ ಘೋಷಣೆ ಮಾಡಬೇಕು.
ಸ್ವಾತಂತ್ಯ್ರ ಪೂರ್ವದಲ್ಲಿ ಬ್ರಿಟಿಷರು ಸುಗಮ ಆಡಳಿತದ
ಹಿತದೃಷ್ಟಿಯಿಂದ ಇಂಡಿಯಲ್ಲಿ ಉಪವಿಭಾಗ ಕಚೇರಿಗಳನ್ನು ಸ್ಥಾಪಿಸದರು. ಮುಖ್ಯವಾಗಿ ಅನ್ಯ ರಾಜ್ಯಗಳ ನಗರಗಳಿಗೆ ಸಂಪರ್ಕ ಕಲ್ಪಿಸಲು ಅನುಕೂಲಕ್ಕಾಗಿ ಜಿಲ್ಲೆಗೆ ಇರಬೇಕಾದ ರೇಲ್ವೆ ಸಂಪರ್ಕ, ಎರಡು ರಾಷ್ಟ್ರೀಯ ಹೆದ್ದಾರಿಗಳನ್ನು ಹೊಂದಿದೆ. ಇಂಡಿ ಪಟ್ಟಣದಲ್ಲಿ ರಾಜ್ಯ ಮಟ್ಟದ ಲಿಂಬೆ ಅಭಿವೃದ್ಧಿ
ಮಂಡಳಿ, ಜಿಲ್ಲಾ ಮಟ್ಟದ ಹಲವಾರು ಕಛೇರಿಗಳು
ಪ್ರಸ್ತೂತ ಕಾರ್ಯನಿವರ್ಹಿಸುತ್ತಿವೆ. ತಾಲೂಕಿನಲ್ಲಿ ಹಲಸಂಗಿ ಗೆಳೆಯರು ಬಳಗ ಸೇರಿದಂತೆ ನಾಟಕಕಾರರು,
ಸಾಹಿತಿಗಳು, ದಾರ್ಶನಿಕರು, ಸಂತರು, ಸೂಪಿಸಂತರು,
ಮಠಾದಿಶರು ನೆಲಸಿದ ಬೀಡಾಗಿದೆ. ಇಂತಹ ಖ್ಯಾತಿ ಹೊಂದಿದೆ ಇಂಡಿಯನ್ನು ಜಿಲ್ಲಾ ಕೇಂದ್ರಕ್ಕೆ ಯೊಗ್ಯವಾಗಿದೆ. ಜಿಲ್ಲಾ ಕೇಂದ್ರವನ್ನಾಗಿ ಘೋಷಣೆ ಮಾಡಲು ಸಮಂಜಸವಾಗಿದೆ ಎಂದರು.
ಈ ಭಾಗದಲ್ಲಿ ಕೈಗಾರಿಕೆಗಳು ಬೆಳೆದು ತಾಂತ್ರಿಕ ಶಿಕ್ಷಣ
ವಿಜ್ಞಾನ ತಂತ್ರಜ್ಞಾನದಿಂದ ಯುವಕರಿಗೆ ಉದ್ಯೋಗ
ನೀಡಲು ಸಹಕಾರಿಯಾಗುತ್ತದೆ. ಅಲ್ಲದೆ ತೊಟಗಾರಿಕೆ
ಪ್ರದೇಶ ವಿಸ್ಥಿರಣಗೊಂಡು ಲಿಂಬೆ, ದ್ರಾಕ್ಷೀ, ದಾಳಿಂಬೆ
ಬೆಳೆಗಳಿಗೆ ಬೇಡಿಕೆ ಬರಲು ಜಿಲ್ಲೆ ಮಾಡುವುದು
ಸೂಕ್ತವಾಗಿದೆ ಎಂದರು.
ನೂತನವಾಗಿ ರಚನೆ ಮಾಡಿರುವ ಅನ್ಯ ಜಿಲ್ಲೆಗಳಿಗೆ
ಹೊಲಿಸಿದರೆ ಇಂಡಿ ಎಲ್ಲ ವಿಧದಲ್ಲಿಯೂ ಜಿಲ್ಲೆ ಮಾಡಲು
ಸೂಕ್ತವಾಗಿದೆ. ಆದ್ದರಿಂದ ಮಾನ್ಯ ಮುಖ್ಯಮಂತ್ರಿಗಳು
ಕೂಡಲೆ ಇಂಡಿಯನ್ನು ಜಿಲ್ಲಾ ಕೇಂದ್ರವನ್ನಾಗಿ ಘೊಷಣೆ
ಮಾಡಬೇಕು ಎಂದು ಒತ್ತಾಯಿಸಿದ್ದಾರೆ.