ಇಂಡಿ ಪುರಸಭೆ ಸಾಮಾನ್ಯ ಸಭೆ ಆಶ್ರಯ ಯೋಜನೆಗೆ ಜಮೀನು ಖರಿದಿಸಿ ನಿವೇಶನ್ ಹಂಚಿ
ಇಂಡಿ : ಪುರಸಭೆಯ ಸಾಮಾನ್ಯ ಸಭೆ ಪುರಸಭೆ ಅಧ್ಯಕ್ಷ ಲಿಂಬಾಜಿ ರಾಠೋಡ ಇವರ ಅಧ್ಯಕ್ಷತೆಯಲ್ಲಿ ನಡೆಯಿತು. ಪುರಸಭೆ ಮುಖ್ಯಾಧಿಕಾರಿ ಮಹಾಂತೇಶ ಹಂಗರಗಿ ಸ್ವಾಗತಿಸಿದರು.
ಪುರಸಭೆ ಸದಸ್ಯ ದೇವೆಂದ್ರ ಕುಂಬಾರ ಮಾತನಾಡಿ ಆಶ್ರಯ ಯೋಜನೆ ಅಡಿ ನಿವೇಶನ ಹಂಚಲು ೧೫ ವರ್ಷಗಳಿಂದ ಇಲ್ಲಿಯ ವರೆಗೆ ಪುರಸಭೆಯಿಂದ ಜಮೀನು ಖರೀದಿಸಿಲ್ಲ.ಬಡ ಕುಟುಂಬಗಳಿಗೆ ಜಮೀನು ಹಂಚಲು ಜಮೀನು ಖರೀದಿಸಲು ಕೇಳಿಕೊಂಡರು.
ಅದಲ್ಲದೆ ಇಂಡಿಯ ಹಳ್ಳವುಪೂರ್ಣ ಪ್ರಮಾಣದಲ್ಲಿ ಅತಿ ಕ್ರಮಣ ಮಾಡಿದ್ದು ಹಂಜಗಿ ರಸ್ತೆಯಿಂದ ಸ್ಮಶಾನದ ವರೆಗೆ ಪೂರ್ಣ ಸ್ಥಳವನ್ನು ಸರ್ವೇ ಮಾಡಿ ಅತಿಕ್ರಮಣ ತೆರವುಗೊಳಿಸಲು ಸದಸ್ಯ ದೇವೆಂದ್ರ ಕುಂಬಾರ ಸಭೆಯ ಗಮನಕ್ಕೆ ತಂದರು. ಮತ್ತು ಬೇಗ ಸರ್ವೇ ಮಾಡಲಿಕ್ಕೆ ಒತ್ತಾಯಿಸಿದರು.
ಸದಸ್ಯ ಅಯೂಬ ಬಾಗವಾನ ಮಾತನಾಡಿ ವಾರ್ಡ ೧೭ ರಲ್ಲಿ ನಗರೋತ್ಥಾನ ಹಂತ ೪ ರ ಕಾಮಗಾರಿಯಲ್ಲಿ ಗಟಾರು ತೆರೆದು ಹಾಗೆಯೇ ಬಿಟ್ಟಿದ್ದು,ಯುಜಿಡಿ ಹಾಗೂ ನೀರು ಪೂರೈಕೆ ಕನೆಕ್ಷನ್ ಒಡೆದಿದ್ದು ಕಾಮಗಾರಿ ಪೂರ್ಣಗೊಳಿಸುವ ಕುರಿತು, ಸದಸ್ಯ ಇಸ್ಮಾಯಿಲ್ ಅರಬ ನಗರೋತ್ಥಾನ ಕಾಮಗಾರಿ ವಿಳಂಬವಾಗುತ್ತಿರುವ ಬಗ್ಗೆ , ವಾರ್ಡ ನಂ. ೧೯ ರ ಸದಸ್ಯ ಉಮೇಶ ದೇಗಿನಾಳ ನಗರೋತ್ಥಾನ ಕಾಮಗಾರಿ ೨೦೨೩ ಜನೇವರಿಯಲ್ಲಿ ಪ್ರಾರಂಭಿಸಿದ್ದು ಇಲ್ಲಿಯ ವರೆಗೆ ಮುಗಿದಿಲ್ಲ ವಿಳಂಬವಾಗುತ್ತಿರುವ ಬಗ್ಗೆ ಚರ್ಚೆ ನಡೆಯಿತು.
ಪುರಸಭೆ ವ್ಯಾಪ್ತಿಯಲ್ಲಿರುವ ಉದ್ಯಾನವನ ಸರ್ವೆ ಮಾಡಿಸಿ ಬೋರ್ಡು ಹಾಕಿಸುವ ಕುರಿತು, ಮೇಗಾ ಮಾರುಕಟ್ಟೆ ಸ್ವಚ್ಛತೆಗೆ, ಸೆಕ್ಯೂರಿಟಿ ಮತ್ತು ಲಿಫ್ಟ ಅಪರೇಟರ್ ಪ್ರಸ್ತಾವನೆ ಜಿಲ್ಲಾಧಿಕಾರಿಗಳಿಗೆ ಸಲ್ಲಿಸಲು ತಿಳಿಸಿದರು. ಸದಸ್ಯ ಅಸ್ಲಂ ಕಡಣ ಮಾತನಾಡಿ ಇಂಡಿ ಪಟ್ಟಣಕ್ಕೆ ನೀರು ಸರಬರಾಜು ಮಾಡುವ ೨೪*೭ ನಳಗಳು ಒಡೆದಿದ್ದು ರಿಪೇರಿಗಾಗಿ ಸೂಚಿಸಿದರು.
ಸಭೆಯಲ್ಲಿ ಉಪಾಧ್ಯಕ್ಷ ಜಹಾಂಗೀರ ಸೌದಾಗರ, ಸದಸ್ಯರಾದ ಭೀಮನಗೌಡ ಪಾಟೀಲ,ಸೈಪನ ಪವಾರ,ಜ್ಯೋತಿ ರಾಠೋಡ,ಸಂಗೀತಾ ಕರಕಟ್ಟಿ,ರೇಣುಕಾ ಉಟಗಿ, ಮುಸ್ತಾಕ ಇಂಡಿಕರ, ಅಭಿಯಂತರ ಪರುತಪ್ಪ,ಅಶೋಕ ಚಂದನ, ಪ್ರವೀಣ ಸೋನಾರ,ಸದಾಶಿವ ನಿಂಬಾಳಕರ,ಹುಚ್ಚಪ್ಪ ಶಿವಶರಣ, ಚಂದ್ರಶೇಖರ ಕಾಲೇಭಾಗ ಮತ್ತಿತರಿದ್ದರು.
ಇಂಡಿ ಪುರಸಭೆಯ ಸಾಮಾನ್ಯ ಸಭೆ ಪುರಸಭೆ ಆವರಣದಲ್ಲಿ ಅಧ್ಯಕ್ಷ ಲಿಂಬಾಜಿ ರಾಠೋಡ ಇವರ ಅಧ್ಯಕ್ಷತೆಯಲ್ಲಿ ನಡೆಯಿತು.