ಇಂಡಿ | ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಉಚ್ಛಾಟನೆ..! ಹಿಂದೂಪರ ಸಂಘಟನೆಯಿಂದ ಪೂರ್ವಭಾವಿ ಸಭೆ ಇಂದು
ಇಂಡಿ: ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರ ಉಚ್ಛಾಟನೆಯನ್ನು ಖಂಡಿಸಿ ವಿವಿಧ ಹಿಂದೂಪರ ಸಂಘಟನೆಗಳು ಹಾಗೂ ಲಿಂಗಾಯತ ಪಂಚಮಸಾಲಿ ಸಮಾಜದ ಪೂರ್ವಭಾವಿ ಸಭೆಯನ್ನು ಏಪ್ರಿಲ್ ೨ ರಂದು ಇಂಡಿ ಪಟ್ಟಣದ ಶಾಂತೇಶ್ವರ ಮಂಗಳ ಕಾರ್ಯಾಲಯದಲ್ಲಿ ಬೆಳಗ್ಗೆ ೧೧:೦೦ ಗಂಟೆಗೆ ಕರೆಯಲಾಗಿದೆ ಎಂದು ಲಿಂಗಾಯತ್ ಪಂಚಮಸಾಲಿ ಸಮಾಜದ ತಾಲೂಕ ಅಧ್ಯಕ್ಷ ವಿ.ಎಚ್.ಬಿರಾದರ ತಿಳಿಸಿದ್ದಾರೆ.
ಅಂದು ತಾಲೂಕಿನ ಪ್ರತಿ ಗ್ರಾಮದಿಂದ ಹಿಂದೂ ಸಂಘಟಕರು ಹಾಗೂ ಪಂಚಮಸಾಲಿ ಸಮಾಜದ ಯುವಕರು ಹಿರಿಯರು ಭಾಗವಹಿಸಿ ಪೂರ್ವಭಾವಿ ಸಭೆಯಲ್ಲಿ ಚರ್ಚೆ ನಡೆಸಿ ನಂತರ ಪ್ರತಿಭಟನೆಯ ನಿರ್ಧಾರ ಕೈಗೊಳ್ಳುವ ಕುರಿತು ಸಲಹೆ ಸೂಚನೆ ನೀಡಬೇಕೆಂದರು.
ಪೂರ್ವಸಭೆಗೆ ಕೂಡಲಸಂಗಮ ಲಿಂಗಾಯತ ಪಂಚಮಸಾಲಿ ಪೀಠದ ಜಗದ್ಗುರು ಬಸವ ಜಯ ಮೃತುಂಜಯ ಸ್ವಾಮೀಜಿ ಆಗಮಿಸಲಿದ್ದಾರೆ ಎಂದು ತಿಳಿಸಿದರು.
ಇಂಡಿ: ವಿ.ಎಚ್.ಬಿರಾದಾರ ಭಾವಚಿತ್ರ