ಇಂಡಿ | ಜೈನ ಧರ್ಮೀಯರು ಶಾಂತಿ ಪ್ರಿಯರು : ಎ.ಸಿ ಅನುರಾಧಾ ವಸ್ತ್ರದ
ಇಂಡಿ : ಭಗವಾನ್ ಮಹಾವೀರರು ಅಹಿಂಸೆಯ ಪ್ರತಿಪಾದಕರಾಗಿದ್ದು, ವಿಶ್ವದಲ್ಲಿ ಶಾಂತಿ ಮತ್ತು ಅಹಿಂಸೆ ಬಯಸಿ ತ್ಯಾಗ, ತಪಸ್ಸು ಮಾಡಿರುವರು. ಈ ಆಧುನೀಕತೆಯಲ್ಲಿ ನಾವೆಲ್ಲ ಮಹಾವೀರರ ತತ್ವಾದರ್ಶಗಳನ್ನು ಅಳವಡಿಸಿಕೊಂಡು ಅಹಿಂಸಾ ಮಾರ್ಗದಲ್ಲಿ ನಡೆಯಬೇಕಾಗಿದೆ ಕಂದಾಯ ಉಪವಿಭಾಗ ಅಧಿಕಾರಿ ಅನುರಾಧಾ ವಸ್ತ್ರದ ಹೇಳಿದರು.
ಏ 10 ರಂದು ಗುರುವಾರ ತಾಲ್ಲೂಕು ಆಡಳಿತ ಸೌಧದಲ್ಲಿ ಹಮ್ಮಿಕೊಂಡಿದ್ದ ಮಹಾವೀರ ಜಯಂತಿ ಅಂಗವಾಗಿ 24 ನೇ ತೀರ್ಥಂಕರ ಭಗವಾನ್ ಮಹಾವೀರ ಭಾವಚಿತ್ರಕ್ಕೆ ಪುಷ್ಪಾರ್ಚಾಣೆ ಮಾಡಿ ಮಾತನಾಡಿದರು.
ಜೈನ ಧರ್ಮೀಯರು ಶಾಂತಿ ಪ್ರಿಯರು ಮತ್ತು ಅಹಿಂಸಾ ವಾದಿಗಳು. ಅವರ ನಡೆ-ನುಡಿ ಸಮಾಜಕ್ಕೆ ಮಾದರಿಯಾಗಿದೆ. ಆಧುನೀಕತೆಯಲ್ಲಿ ಶಾಂತಿ ಮತ್ತು ಅಹಿಂಸೆಯ ತತ್ವಗಳನ್ನು ಮುಂದುವರಿಸಿಕೊಂಡು ಹೋಗಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಉಪತಹಶೀಲ್ದಾರ ಆರ್ ಬಿ ಮೂಗಿ, ಕಂದಾಯ ನಿರೀಕ್ಷಕ ಎಚ್ ಎಸ್ ಗುನ್ನಾಪುರ, ಎಸ್ ಆರ್ ಗದ್ಯಾಳ, ಸಾಮಾಜಿಕ ಕಾರ್ಯಕರ್ತ ಚಂದ್ರಶೇಖರ ಹೊಸಮನಿ ಹಾಗೂ ಜೈನ ಸಮುದಾಯದ ಮುಖಂಡರು ಅಜೀತ ಧನಶೆಟ್ಟಿ, ಸನತ್ ಹಳ್ಳಿ, ಪ್ರಕಾಶ ಧನಶೆಟ್ಟಿ, ಮಹಾವೀರ ಧನಶೆಟ್ಟಿ, ವಿದ್ಯಾಸಾಗರ ಧನಶೆಟ್ಟಿ, ಲಕ್ಮಿಕಾಂತ್ ದುರ್ಗಿ, ಭರತ ವರ್ದಮಾನ, ದಯಾನಂದ ಹೊಸಮನಿ, ದತ್ತಾ ಬಂಡೆನವರ್, ಅಮರ ಬಾಸುತ್ಕರ್, ಕಿರಣ ಕಟ್ಟಿಮನಿ, ಪ್ರದೀಪ ಡೊಳ್ಳಿನ, ಸಂತೋಷ ಕಾಳೆ ಸೇರಿದಂತೆ ಅನೇಕ ಮುಖಂಡರು ಉಪಸ್ಥಿತರಿದ್ದರು.


















