ಇಂಡಿ : ಸರಕಾರಿ ಆಸ್ಪತ್ರೆಗೆ ಬೆಳ್ಳಂ ಬೆಳಿಗ್ಗೆ ದಿಢೀರ್ ಬೇಟಿ ನೀಡಿದ ಕಂದಾಯ ಉಪವಿಭಾಗ ಅಧಿಕಾರಿ ಆಬೀದ್ ಗದ್ಯಾಳ ಅವರು, ವೈದ್ಯರಿಗೆ ಹಾಗೂ ಸಿಬ್ಬಂದಿಗಳಿಗೆ ತರಾಟೆ ತೆಗೆದುಕೊಂಡ ಘಟನೆ ಪಟ್ಟಣದ ತಾಲೂಕು ಸರಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಸೋಮವಾರ ನಡೆಯಿತು.
ಹೌದು ಆಸ್ಪತ್ರೆಗೆ ಬೇಟಿ ನೀಡಿದ ಅವರು ಸಿಬ್ಬಂದಿಗಳ ಹಾಜರಾತಿ ಮತ್ತು ಗೈರಾಗಿರುವ ಸಿಬ್ಬಂದಿಗಳ ಬಗ್ಗೆ ಪ್ರಶ್ನೆ ಮಾಡಿದರು. ಇಷ್ಟೊಂದು ಸಿಬ್ಬಂದಿಗಳು ಗೈರಾದರೆ ಹೇಗೆ ಅವರಿಗೆ ನೋಟಿಸ್ ಕೊಡಲು ಸೂಚಿಸಿದರು. ಇನ್ನೂ ಅದಲ್ಲದೇ ಔಷಧಿ ಕೇಂದ್ರಕ್ಕೆ ಬೇಟಿ ನೀಡಿದಾಗ ಅವಧಿ ಮುಗಿದ ಔಷಧಿಗಳು ಕಂಡು ಬಂದವು. ಅದಕ್ಕೆ ಇಂತಹ ನಿರ್ಲಕ್ಷ್ಯ ಮತ್ತು ಬೆಜವಾಬ್ದಾರಿ ವಹಿಸಿರುವ ಸಿಬ್ಬಂದಿ ವಿರುದ್ಧ ತೀವ್ರವಾಗಿ ತರಾಟೆ ತೆಗೆದುಕೊಳ್ಳದಲ್ಲದೇ ಖಡಕಾಗಿ ಎಚ್ಚರಿಕೆ ನೀಡಿದರು. ಇನ್ನೂ ವಿವಿಧ ವಾರ್ಡಗಳಿಗೆ ಬೇಟಿ ನೀಡಿ ಪರಿಶೀಲಿಸಿದ ನಂತರ ಸಂಪೂರ್ಣವಾಗಿ ಇಲಾಖೆ ಎಲ್ಲಾ ಸಿಬ್ಬಂದಿಗಳಿಗೆ ಮತ್ತು ವೈದ್ಯರಿಗೆ ಎಚ್ಚರಿಕೆ ನೀಡಿ ತುರ್ತು ಎಲ್ಲಾ ಸರಿಪಡಿಸಿಕೊಳ್ಳಲು ಸೂಚಸಿ, ಮತ್ತೊಮ್ಮೆ ಹೀಗಾಗಿ ದಂತೆ ನೋಡಿಕೊಳ್ಳಲು ಹೇಳಿದರು.
ಸರಕಾರಿ ಆಸ್ಪತ್ರೆಯಲ್ಲಿ ಬಹಳ ನೀರಿಕ್ಷೀಯಿಟ್ಟು ನಾಗರಿಕರು ಬರುತ್ತಾರೆ. ಆ ನಿರೀಕ್ಷೆಗಳಿಗೆ ತಕ್ಕಂತೆ ಅಧಿಕಾರಿಗಳು ಕ್ರಿಯಾಶಿಲವಾಗಿ ಕೆಲಸ ಮಾಡಬೇಕು. ಉದಾಸೀನ, ಬೇಜವಾಬ್ದಾರಿಯನ್ನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ. ಸೂಕ್ತ ಕ್ರಮ ಎದುರಿಸಬೇಕಾಗುತ್ತದೆ. ಜನರ ನಿರೀಕ್ಷೆಗಳಿಗೆ ತಕ್ಕಂತೆ ಚುರುಕಾಗಿ, ದಕ್ಷವಾಗಿ ಕಾರ್ಯ ನಿರ್ವಹಿಸಿ ಎಂದು ಎಚ್ಚರಿಕೆಯ ಮಾತುಗಳ ಜತೆಗೆ ತಿಳಿ ಹೇಳಿದರು.