ಇಂಡಿ | ಬಾವಿಯಲ್ಲಿ ಬಿದ್ದ ಬಾಲಕಿ,ದೇಹ ಪತ್ತೆಗಾಗಿ ಚುರುಕು ಕಾರ್ಯಾಚರಣೆ ನಡೆಸಿದ ಅಗ್ನಿಶಾಮಕ ದಳ..
ಇಂಡಿ : ಆಟವಾಡಲು ಹೋಗಿದ ಬಾಲಕಿಯೋರ್ವಳು ಬಾವಿಯಲ್ಲಿ ಬಿದ್ದಿರುವ ಘಟನೆ ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ರಾವು ನಾಯಕ ತಾಂಡಾದಲ್ಲಿ ನಡೆದಿದೆ. ಅರ್ಚನಾ ದೀಪಕ ರಾಠೋಡ (8) ಬಾವಿಯಲ್ಲಿ ಬಿದ್ದಿದ್ದಾಳೆ. ಇನ್ನು ಬಾಲಕಿ ಬಾವಿಯಲ್ಲಿ ಬಿದ್ದಿರುವ ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿಗಳು ಆಗಮಿಸಿ ರಕ್ಷಣಾ ಕಾರ್ಯಾಚರಣೆ ಮಾಡುತ್ತಿದ್ದಾರೆ. ಆದ್ರೇ, ಇಲ್ಲಿಯವರೆಗೂ ಅರ್ಚನಾಳ ದೇಹ ಪತ್ತೆಯಾಗಿಲ್ಲ. ಸ್ಥಳದಲ್ಲಿ ಚುರುಕಾಗಿ ಕಾರ್ಯಾಚರಣೆ ನಡೆಯುತ್ತಿದೆ. ಇಂಡಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ಸಂಭವಿಸಿದೆ.