ಪ್ರಕರಣ ದಾಖಲಿಸಲು ವಿಳಂಭ ಧೋರಣೆ ಖಂಡಿಸಿ ದಲಿತ ನೌಕರರ ಕುಟುಂಬಸ್ಥರಿಂದ ಧರಣಿ
ಇಂಡಿ : ದಲಿತ ನೌಕರರ ಮೇಲೆ ದೌರ್ಜನ್ಯ ಎಸಗಿದವರ ಮೇಲೆ ಪ್ರಕರಣ ದಾಖಲಿಸಿಕೊಳ್ಳಲು ಆಗ್ರಹಿಸಿ ದೌರ್ಜನ್ಯಕ್ಕೆ ಒಳಗಾದ ನೌಕರರ ಕುಟುಂಬಸ್ಥರು ಹಾಗೂ ಲೋಣಿ ಬಿಕೆ ಗ್ರಾಮದ ಮುಖಂಡರು ಡಿವೈಎಸ್ಪಿ ಕಚೇರಿ ಮುಂದೆ ಧರಣಿ ನಡೆಸಿದರು.
ಲೋಣಿ ಬಿಕೆ ಗ್ರಾಮದ ಶಾಂತನೀಕೇತನ ಪ್ರಾಥಮಿಕ ಶಾಲೆಯಲ್ಲಿ ಸಹ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿರುವ ಭಗವಾನಬುದ್ಧ ಬನಸೋಡೆ ಹಾಗೂ ರವೀಂದ್ರ ಕಾಂಬಳೆ ಎಂಬುವವರಿಗೆ ಅದೇ ಗ್ರಾಮದ ಗುರುಶಾಂತಪ್ಪ ಕಾಪಸೆ,ಬಾಪುರಾಯ ಲೋಣಿ ಹಾಗೂ ಇಬ್ಬರು ಸರ್ವೆಯರರು ಸೇರಿಕೊಂಡು ಸಾರ್ವಜನಿಕವಾಗಿ ಜಾತಿ ನಿಂದನೆ ಮಾಡಿ,ಹಲ್ಲೆ ಮಾಡಿದ್ದು ಜೀವ ಬೇದರಿಕೆ ಹಾಕಿದ್ದಾರೆ. ಈ ಕುರಿತು ಝಳಕಿ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದರೂ ಇಲ್ಲಿಯವರೆಗೆ ಪ್ರಕರಣ ದಾಖಲಿಸಿಕೊಂಡಿರುವುದಿಲ್ಲ ಎಂದು ಮನವಿಯಲ್ಲಿ ತಿಳಿಸಿದ್ದಾರೆ. ಪ್ರಕರಣ ದಾಖಲಿಸುವವರೆಗೆ ಧರಣಿಯಿಂದ ಹಿಂದೆ ಸರಿಯುವುದಿಲ್ಲ ಎಂದು ಅವರು ಮನವಿಯಲ್ಲಿ ತಿಳಿಸಿದ್ದಾರೆ.
ಸ್ಥಳಕ್ಕೆ ಡಿವೈಎಸ್ಪಿ ಭೇಟಿ : ಧರಣಿ ನಿರತ ಸ್ಥಳಕ್ಕೆ ಡಿವೈಎಸ್ಪಿ ಜಗದೀಶ ಅವರು ಭೇಟಿ ನೀಡಿ, ತಮ್ಮ ಪ್ರಕರಣವನ್ನು ಕೂಲಂಕೂಶವಾಗಿ ಪರಿಶೀಲಿಸಲಾಗುತ್ತದೆ. ತಾವು ಧರಣಿಯಿಂದ ಕೈ ಬಿಡಬೇಕು ಎಂದು ತಿಳಿಸಿದರು. ಪ್ರಕರಣ ದಾಖಲಾಗುವವರೆಗೆ ಧರಣಿಯಿಂದ ಹಿಂದೆ ಸರಿಯುವುದಿಲ್ಲ ಎಂದು ಧರಣಿ ನಿರತು ಪಟ್ಟು ಹಿಡಿದರು.
ಸೌಕತಅಲಿ ಸಜಾಗೀರದಾರ, ಪ್ರಕಾಶ ಝುಲಪಿ, ಶಿವಾನಂದ ಜಿತ್ತಿ, ಶ್ರೀಮಂತ ಝುಲಪಿ, ಗುರುಬಸಪ್ಪ ಝುಲಪಿ, ದಯಾನಂದ ಬಾಳಾಬಗಿ,ಮರೇಪ್ಪ ಬನಸೋಡೆ, ಖಾಜಪ್ಪ ಬನಸೋಡೆ, ಗುರುಸಿದ್ದ ಬನಸೋಡೆ, ಗಜಪ್ಪ ಬನಸೋಡೆ, ಶ್ರೀಶೈಲ ಬನಸೋಡೆ, ಶ್ರೀಶೈಲ ಉಟಗಿ, ಅಮಸಿದ್ದ ಝುಲಪಿ, ಖಾಜಾಸಾಬ ಪಠಾಣ, ಚಾಂದ ಅತ್ತಾರ ಮೊದಲಾದವರು ಧರಣಿಯಲ್ಲಿ ಇದ್ದರು.


















