ಇಂಡಿ ಜಿಲ್ಲೆಗಾಗಿ ದೃಡ ಸಂಕಲ್ಪ..!
ಇಂಡಿ ಪ್ರತ್ಯೇಕ ಜಿಲ್ಲೆಗೆ ಆಗ್ರಹ..! ಬ್ರಿಟಿಷ್ ಕಾಲದಲ್ಲಿಯೇ ಇಂಡಿ ಉಪವಿಭಾಗ ಕೇಂದ್ರವಾಗಿದೆ..!
ಇಂಡಿ: ಇಂಡಿಯನ್ನು ಪ್ರತ್ಯೇಕ ಜಿಲ್ಲೆಯನ್ನಾಗಿ ರಚನೆ ಮಾಡಿ ಘೋಷಣೆ ಮಾಡಬೇಕು ಹಾಗೂ
ಮುಂದುವರೆದು ಸಂವಿಧಾನದ ವಿಧಿ 371 (ಜೆ)ಗೆ
ಸೇರ್ಪಡೆಗೆ ಹಕ್ಕೊತ್ತಾಯಕ್ಕೆ ಆಗ್ರಹಿಸಿ ಇಂಡಿ ಜಿಲ್ಲಾ ಹೋರಾಟ ಸಮಿತಿ ಮತ್ತು ತಳವಾರ ಪರಿವಾರ ಸಮಾಜ ಸೇವಾ ಸಂಘದಿಂದ ಹಾಗೂ ವಿವಿಧ ಸಂಘಟನೆಗಳು ಪ್ರತಿಭಟಿಸಿ ಕಂದಾಯ ಉಪವಿಭಾಗ ಅಧಿಕಾರಿ ಅಬೀದ್ ಗದ್ಯಾಳ ಅವರ ಮೂಲಕ ಮುಖ್ಯ ಮಂತ್ರಿಗಳಿಗೆ ಮಂಗಳವಾರ ಮನವಿ ಸಲ್ಲಿಸಿದರು.
ಪಟ್ಟಣದ ಪ್ರವಾಸಿ ಮಂದಿರದಿಂದ ಹಲಗೆ ಬಾರಿಸುತ್ತಾ ಘೊಷಣೆಗಳನ್ನು ಕೂಗುತ್ತಾ ಪಾದಯಾತ್ರೆ ಮೂಲಕ ಡಾ. ಬಿ ಆರ್ ಅಂಬೇಡ್ಕರ್ ವೃತಕ್ಕೆ ತೆರಳಿ ತದನಂತರ ಹೃದಯಭಾಗದ ಬಸವೇಶ್ವರ ವೃತದ ಮೂಲಕ ಹಾದು ಆಡಳಿತ ಸೌಧಕ್ಕೆ ಆಗಮಿಸಿ ಕೆಲಕಾಲ ಪ್ರತಿಭಟಿಸಿ ಬರೆದ ಮನವಿ ಪತ್ರ ಸಲ್ಲಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಹೋರಾಟ ಸಮಿತಿ ಅಧ್ಯಕ್ಷ ಜೆಟ್ಟಪ್ಪ ರವಳಿ, ಭೀಮಣ್ಣ ಕವಲಗಿ, ಪ್ರಶಾಂತ ಕಾಳೆ, ನಿರ್ಮಲಾ ತಳಕೇರಿ, ಇಲಿಯಾಸ್ ಬೋರಾಮಣಿ ಹಾಗೂ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಾವೀದ್ ಮೋಮಿನ ಹಾಗೂ ಮತ್ತಿತರರು ಮಾತನಾಡಿ, ಈಗಾಗಲೆ ಜಿಲ್ಲಾ ಮಟ್ಟದ ಕೆಲವು ಇಲಾಖೆಗಳು ಇಂಡಿಯಲ್ಲಿ ಕಾರ್ಯ ನಿರ್ವಹಿಸಿ
ಸುತ್ತಿವೆ. ಅಲ್ಲದೆ ಜಿಲ್ಲೆಗೆ ಇರಬೇಕಾದ ಎಲ್ಲ ಮೂಲಭೂತ ಸೌಲಭ್ಯವನ್ನು ಇಂಡಿ ನಗರ ಹೊಂದಿದೆ. ಯೋಗ್ಯವಾದ
ಭೌಗೋಳಿಕ ಪ್ರದೇಶ ಮತ್ತು ಸರಕಾರಿ ಕಚೇರಿಗಳನ್ನು ಹೊಂದಿದ್ದು ಗಡಿ ಭಾಗದ ವಿಜಯಪುರ ಜಿಲ್ಲೆಯ ಇಂಡಿಯು ಅತೀ ಹಿಂದುಳಿದ ಪ್ರದೇಶಗಲ್ಲಿ ಒಂದಾಗಿದೆ. ಅಲ್ಲದೆ ಶೈಕ್ಷಣಿಕವಾಗಿ, ಆರ್ಥಿಕವಾಗಿ, ಸಾಮಾಜಿಕವಾಗಿ
ಹಿಂದುಳಿದೆ. ಆದರೆ ಎಲ್ಲ ವಿಧದಲ್ಲೂ ಪ್ರಗತಿ ಹೊಂದಬೇಕಾದರೆ ಇಂಡಿಯು ಆಡಳಿತ್ಮಕವಾಗಿ ಜಿಲ್ಲೆ ಮಾಡಿದಾಗ ಮಾತ್ರ ಸಾಧ್ಯ ಎಂದರು.
ಬ್ರಿಟಿಷರ ಕಾಲದಿಂದೂ ಇಂಡಿಯಲ್ಲಿ ಉಪವಿಭಾಗದ ಕಛೇರಿಗಳಿವೆ. ನೂತನವಾಗಿ ರಚನೆ ಮಾಡಿರುವ
ಅನ್ಯ ಜಿಲ್ಲೆಗಳಿಗೆ ಹೊಲಿಸಿದರೆ ಇಂಡಿ ಎಲ್ಲ ಚೌಕಟ್ಟಿನಲ್ಲಿ ಜಿಲ್ಲೆ ಮಾಡಲು ಸೂಕ್ತವಾಗಿದೆ. ಅಲ್ಲದೆ ನಮ್ಮ ಪಕ್ಕದಲ್ಲಿರುವ ಅಫಜಲಪುರತಾಲ್ಲೂಕು 371(ಜೆ) ವ್ಯಾಪ್ತಿಯಲ್ಲಿ ಬರುತ್ತದೆ. ಆದರೆ ನಾವು ಇದರಿಂದ ವಂಚಿತರಾಗಿದ್ದೇವೆ. ಆದ್ದರಿಂದ ಮುಖ್ಯಂಮತ್ರಿಗಳು ಕೂಡಲೆ ಇಂಡಿಯನ್ನು ಜಿಲ್ಲೆ ಮಾಡಲು ಆದೇಶಿಸಬೇಕು.
ಒಂದು ವೇಳೆ ವಿಳಂಬ ನೀತಿ ಅನುಸರಿಸಿದ್ದಲ್ಲಿ ಉಗ್ರ
ಹೊರಾಟ ಮಾಡಬೇಕಾಗುತ್ತದೆ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ತಳವಾರ ಪರಿವಾರ ಸಮಾಜದ ಅಧ್ಯಕ್ಷ ಧರ್ಮರಾಜ ವಾಲಿಕಾರ, ತಾ.ಪಂ ಮಾಜಿ ಅಧ್ಯಕ್ಷ ಶೇಖರ ನಾಯಕ, ಅಣ್ಣಪ್ಪ ಬಿದರಕೋಟಿ, ರುಕ್ಮುದ್ದಿನ ತದ್ದೆವಾಡಿ, ಪುರಸಭೆ ಮಾಜಿ ಅಧ್ಯಕ್ಷ ಶ್ರೀಕಾಂತ್ ಕುಡಿಗನೂರ, ಹುಚ್ಚಪ್ಪ ತಳವಾರ, ಸದಾಶಿವ ಪ್ಯಾಟಿ, ಮೈಬೂಬ ಅರಬ್, ಗ್ರಾ.ಪಂ ಮಾಜಿ ಅಧ್ಯಕ್ಷ ರಾಜಶೇಖರ ಡಂಗಿ, ಜೆಟ್ಟಪ್ಪ ಮರಡಿ, ರಾಜು ಪಡಗಾನೂರ, ಮುನ್ನಾ ಡಾಂಗೆ, ಸತೀಶ್ ಕುಂಬಾರ ಹಾಗೂ ಇನ್ನೂ ಮುಖಂಡರು ಕಾರ್ಯಕರ್ತರು ಉಪಸ್ಥಿತರಿದ್ದರು.