ಇಂಡಿ | ರಮಜಾನ್ ಹಬ್ಬದಲ್ಲಿ ಕಪ್ಪು ಪಟ್ಟಿ ಧರಸಿ ನಮಾಜ್..! ಕಾರಣ ಗೊತ್ತಾ..?
ಇಂಡಿ: ಕೇಂದ್ರ ಸರಕಾರ ಜಾರಿಗೆ ತರಲು ಬಯಸಿರುವ ವಕ್ಪ ಬೋರ್ಡು ಬಿಲ್ಲು ವಿರೋಧಿಸಿ ಸೋಮವಾರ ಮುಸ್ಲಿಂ ಬಾಂಧವರು ಬಲಗೈಗೆ ಕಪ್ಪ ಬಟ್ಟಿ ಧರಿಸಿ ನಮಾಜು ಬೋಧಿಸಿದರು.
ನಂತರ ಮಾತನಾಡಿದ ಮುಸ್ಲಿಂ ಧರ್ಮ ಗುರು ಶಾಕೀರ ಹುಸೇನ ಕಾಶ್ಮಿ, ಮಸೀದೆ, ದರ್ಗಾ, ಈದಗಾ, ಮದರಸಾ, ಸ್ಮಶಾನಭೂಮಿ ಇವುಗಳಿಗೆ ಧಕ್ಕೆ ತರುವ ಕಾನೂನು ಇದಾಗಿದೆ. ಹೀಗಾಗಿ ಸರಕಾರದ ವಿರುದ್ಧ ಸರಕಾರಕ್ಕೆ ತಿಳಿಸುವ ನೆಪದಲ್ಲಿ ಕಪ್ಪು ಬಟ್ಟೆ ಧರಿಸಿ ನಮಾಜು ಮಾಡಲಾಗಿದೆ ಎಂದರು.
ಅಂಜುಮನ್ ಸಂಸ್ಥೆಯ ಅಧ್ಯಕ್ಷ ಹಜಿಯಾಲಿ ಬಾಗವಾನ, ಕಾರ್ಯದರ್ಶಿ ಹುಸೇನಸಾಬ ಜಮಾದಾರ, ಜಾವೇದ ಮೋಮೀನ, ಅಬ್ದುಲ ರಹಮಾನ ಅರಬ, ಅಯೂಬ ಬಾಗವಾನ, ಅಬ್ದುಲ ರಶೀದ ಅರಬ, ಬಾಬುಸಾಬ ಸೌದಾಗರ, ಜುನಾದ್ದೀನ ಬಾಗವಾನ, ರೈಸ ಅಷ್ಟೆಕರ, ಯಾಸೀನ ತುರ್ಕಿ, ಮುಸ್ತಾಕ ಇಂಡಿಕರ, ಮಹಿಬೂಬ ಅರಬ, ಅಬ್ದುಲ ರಶೀದ ಮುಗಳಿ, ತುರಬ ಪಠಾಣ, ನಿಸಾರ ಬಾಗವಾನ, ರಾಜ ಅಹಮ್ಮದ ತುರಕರಗೇರಿ, ಮುಸ್ತಾಕ ನಾಯಿಕೊಡಿ. ಮಹಮ್ಮದ ಗುಲಬರ್ಗಾ, ಮಹಿಬೂಬ ಮಕಾನದಾರ ಮತ್ತಿತರಿದ್ದರು.
ಇಂಡಿ: ಕೇಂದ್ರ ಸರಕಾರ ಜಾರಿಗೆ ತರುವ ವಕ್ಪ ಬೋರ್ಡು ಬಿಲ್ಲು ವಿರೋಧಿಸಿ ಬಲಗೈಗೆ ಕಪ್ಪ ಬಟ್ಟಿ ಧರಿಸಿ ಮುಸ್ಲಿಂ ಬಾಂಧವರು ವಿರೋಧಿಸಿದರು.