ನಾಮಕವಸ್ಥೆಗಷ್ಟೆ ಇಂಡಿ ಕೇಂದ್ರ ಗ್ರಂಥಾಲಯ..! ಹೆಚ್ಚಿನ ದಿನ ಪತ್ರಿಕೆ ಒದಗಿಸಿಲು ಮನವಿ..!
ಇಂಡಿ : ಪ್ರತಿ ದಿನ ಗ್ರಂಥಾಲಯಕ್ಕೆ ವಿದ್ಯಾರ್ಥಿಗಳು ಜ್ಞಾನರ್ಜನೆಗಾಗಿ, ಸ್ಪರ್ಧಾತ್ಮಕ ಪರೀಕ್ಷೆಗೆ ಸಿದ್ಧತೆ ನಡೆಸುವ ನಿರುದ್ಯೋಗ ಅಭ್ಯರ್ಥಿಗಳು ಮತ್ತು ಸಾರ್ವಜನಿಕರು ದಿನ ಪತ್ರಿಕೆ ಓದಲು ಬರುತ್ತಾರೆ. ಆದರೆ ಈ ಗ್ರಂಥಾಲಯದಲ್ಲಿ ಪೂರ್ಣ ಪ್ರಮಾಣದ ಕನ್ನಡ ದಿನ ಪತ್ರಿಕೆ ಇಲ್ಲವಾದ್ದರಿಂದ ತೊಂದರೆಯಾಗುತ್ತಿದ್ದು, ನಾಮಕವಸ್ಥೆಗಷ್ಟೇ ಇಂಡಿ ಕೇಂದ್ರ ಗ್ರಂಥಾಲಯವಾಗಿದೆ ಎಂದು ಪ್ರಶಾಂತಗೌಡ ಪಾಟೀಲ ದೂರಿದರು.
ಪಟ್ಟಣದಲ್ಲಿರುವ ಸಾರ್ವಜನಿಕ ಕೇಂದ್ರ ಗ್ರಂಥಾಲಯದಲ್ಲಿ ಕೇವಲ ಎರಡು, ಮೂರು ದಿನ ಪತ್ರಿಕೆ ಮಾತ್ರ ಪೂರೈಕೆಯಾಗುತ್ತಿವೆ. ಇನ್ನೂಳಿದ ಯಾವುದೇ ಕನ್ನಡ ದಿನ ಪತ್ರಿಕೆ ಪೂರೈಕೆಯಾಗದೆ ಇರುವುದು ವಿಷಾದಕರ, ಕೂಡಲೇ ಇನ್ನೂಳಿದ ಕನ್ನಡ ದಿನ ಪತ್ರಿಕೆ ಪೂರೈಸಲು ಉಪನಿರ್ದೇಶಕ ಜಿಲ್ಲಾ ಕೇಂದ್ರ ಗ್ರಂಥಾಲಯ ಅಧಿಕಾರಿಗಳಿಗೆ ಮನವಿ ಸಲ್ಲಿಸಿ ಮಾತನಾಡಿದರು.
ಸರಕಾರದ ಉದ್ಯೋಗ ನೇಮಕಾತಿ, ಉನ್ನತ ಶಿಕ್ಷ ಣ ಪ್ರವೇಶ ಸೇರಿದಂತೆ ಪ್ರತಿಯೊಂದಕ್ಕೂ ಸ್ಪರ್ಧಾತ್ಮಕ ಪರೀಕ್ಷೆಗಳ ಮೂಲಕವೇ ಆಯ್ಕೆ ನಡೆಯುತ್ತಿದೆ. ಬಡ ವಿದ್ಯಾರ್ಥಿಗಳು, ನಿರುದ್ಯೋಗ ಅಭ್ಯರ್ಥಿಗಳು ದುಬಾರಿ ಬೆಲೆಯ ಪುಸ್ತಕಗಳನ್ನು ಕೊಂಡು ಓದಲು ಸಾಧ್ಯವಿಲ್ಲ, ಆದ್ದರಿಂದ ಇನ್ನೂ ಹೆಚ್ಚಿನ ಸ್ಪರ್ಧಾತ್ಮಕ ಪುಸ್ತಕಗಳ ಜೊತೆಗೆ ಪ್ರಜಾಪ್ರಗತಿ, ಉದಯವಾಣಿ, ಹೊಸ ದಿಗಂತ, ಸಯುಂಕ್ತ ಕರ್ನಾಟಕ ಜೊತೆಗೆ ಇನ್ನಿತರ ಕನ್ನಡ ದಿನ ಪತ್ರಿಕೆ ಪೂರೈಸಲು ಮನವಿ ಮಾಡಿಕೊಂಡರು. ನಿರ್ಲಕ್ಷ್ಯ ಬೇಡ ದಿನ ಪತ್ರಿಕೆ ಪೂರೈಸುವ ಕಾರ್ಯ ಬೇಗ ನಡೆಯಬೇಕು ಎಂದು ಹೇಳಿದರು.