ರಂಗೇರಿದ ಇಂಡಿ ಚುನಾವಣಾ ಅಖಾಡ.!
ಇಂಡಿ : 2023ರ ವಿಧಾನಸಭೆ ಚುನಾವಣೆ ನಿಮಿತ್ಯ ರಾಷ್ಟಿಯ ಪಕ್ಷ ಬಿಜೆಪಿ ನಿನ್ನೆ ತಡರಾತ್ರಿ ಬಿಡುಗಡೆಗೊಳಿಸಿದ ಎರಡನೇ ಪಟ್ಟಿಯಲ್ಲಿ ಇಂಡಿ ಮತಕ್ಷೇತ್ರದ ಅಭ್ಯರ್ಥಿಯಾಗಿ ಕಾಸುಗೌಡ ಬಿರಾದಾರ ಅವರನ್ನು ಘೋಷಣೆ ಮಾಡಿದೆ. ಬಿಜಪಿ ಹೈಕಮಾಂಡ ಕೊನೆಗೂ ಅಳೆದು ತೂಗಿ ಇಂಡಿ ಮತಕ್ಷೇತ್ರದ ಅಭ್ಯರ್ಥಿ ಯಾಗಿ ಕಾಸುಗೌಡ ಬಿರಾದಾರ ಟೀಕೇಟ ಘೋಷಣೆ ಮಾಡಿದ್ದು, ಮತಕ್ಷೇತ್ರದಲ್ಲಿ ಚುನಾವಣೆ ಕಾವು ಹೆಚ್ಚಾಗುತ್ತಿದೆ.
ಕರ್ನಾಟಕ ವಿಧಾನಸಭಾ ಚುನಾವಣೆಗೆ ಬಿಜೆಪಿ ಇಂದು 23 ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ನಿನ್ನೆಯಷ್ಟೆ 189 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿತ್ತು. ಮೊದಲನೆಯ ಪಟ್ಟಿಯಲ್ಲಿ ಇಂಡಿ ಮತಕ್ಷೇತ್ರದ ಅಭ್ಯರ್ಥಿ ಹೆಸರು ಬಾಕಿ ಉಳಿದಿತ್ತು. ಆದರೆ ನಿನ್ನೆ ತಡ ರಾತ್ರಿ ಟಿಕೇಟು ಘೋಷಣೆ ಯಾಗುತ್ತಿದ್ದಂತೆ ಕಾರ್ಯಕರ್ತರಲ್ಲಿ ಖುಷಿ ತಂದಿದ್ದು ಪ್ರಚಾರಕ್ಕಾಗಿ ಸಕ್ರಿಯವಾಗಿತ್ತಿದ್ದಾರೆ.
ಮೊದಲಿನಿಂದಲೂ ಇಂಡಿ ಮತ ಕ್ಷೇತ್ರ ಹಲವಾರು ವಿಶೇಷತೆಗಳಿಗೆ ಹೆಸರುವಾಸಿಯಾಗಿದೆ
ಹೀಗಾಗಿ ಇಂಡಿ ಮತಕ್ಷೇತ್ರ ರಾಜ್ಯಮಟ್ಟದಲ್ಲಿ ಚರ್ಚಿತವಾಗುವದು ನಿಶ್ಚಿತವಾಗಿದೆ. ಬಿಜೆಪಿ ತನ್ನ ಅಭ್ಯರ್ಥಿ ಘೋಷಣೆ ಮಾಡಿರುವದರಿಂದ ಇಂಡಿ ಮತಕ್ಷೇತ್ರರಂಗೇರಲಿದೆ.