ಇಂಡಿ | 15 ದಿನ ಉಚಿತ ಕರಾಟೆ ಶಿಬಿರ
ಇಂಡಿ -ವಿಜಯಪುರ ಜಿಲ್ಲಾ ಜೂಡೋ ಅಸೋಸಿಯೇಷನ್ ವತಿಯಿಂದ 15 ದಿನಗಳವರೆಗೆ ಕರಾಟೆ ಮತ್ತು ಜುಡೋ ಬೇಸಿಗೆ ಶಿಬಿರ ನಡೆಸಲಾಗುತ್ತದೆ.
ಮೇ 15ರಂದು ಇಂಡಿ ಪಟ್ಟಣದ ಕೆಇಬಿ ತಾಂಡಾದಲ್ಲಿ ಈ ಶಿಬಿರ ಆರಂಭಗೊಳ್ಳಲಿದ್ದು ಯುವಕ ಯುವತಿಯರು, ಆಸಕ್ತಿ ಇರುವ ವಿದ್ಯಾರ್ಥಿಗಳು ಈ ಶಿಬಿರದಲ್ಲಿ ಪಾಲ್ಗೊಳ್ಳಬಹುದು, ವಯಸ್ಸಿನ ಇತಿಮತಿ ಇರುವುದಿಲ್ಲ. ಮೇ 15ರಿಂದ ಬೆಳಗ್ಗೆ 6: 15 ನಿಮಿಷದಿಂದ 7: 15ರವರೆಗೆ ಹಾಗೂ ಸಾಯಂಕಾಲ 6 ರಿಂದ 7.30 ರವರೆಗೆ ಶಿಬಿರ ಇರುತ್ತದೆ.
ಹೆಚ್ಚಿನ ಮಾಹಿತಿಗಾಗಿ ದೂರವಾಣಿ 8951947679, ಹಾಗೂ 9632624103 ಸಂಖ್ಯೆಗೆ ಸಂಪರ್ಕಿಸಬಹುದು