ಇಂಡಿ: ಡಿ – 5 ರ ವರೆಗೆ ಜಾನುವಾರುಗಳಿಗೆ ಲಸಿಕೆ ಅಭಿಯಾನ
ಇಂಡಿ : ತಾಲೂಕಿನಲ್ಲಿ ಜಾನುವಾರುಗಳಿಗೆ ಚರ್ಮ ಗಂಟುರೋಗ ವಿರುದ್ಧ ಉಚಿತ ಲಸಿಕಾ ಅಭಿಯಾನ ನ. ೨೫ ರಿಂದ ಡಿ.೫ ರ ವರೆಗೆ ಹಮ್ಮಿಕೊಳ್ಳಲಾಗಿದೆ ಎಂದು ಮುಖ್ಯ ಪಶು ವೈದ್ಯಾಧಿಕಾರಿ ಡಾ. ರಾಜಕುಮಾರ ಅಡಕಿ ಹೇಳಿದರು.
ಅವರು ಪಟ್ಟಣದ ಪಶು ವೈದ್ಯ ಸೇವಾ ಇಲಾಖೆಯಲ್ಲಿ ೨೧ ನೇ ಜಾನುವಾರು ಗಣತಿ ಪ್ರಾರಂಭದಲ್ಲಿ ಮಾತನಾಡಿದರು.
ತಾಲೂಕಿನಲ್ಲಿ ಚಳಿ ಹೆಚ್ಚಾಗಿದ್ದು ಚಳಿಗಾಲ ಆರಂಭವಾಗುತ್ತಿರುವದರಿAದ ನೊಣ ಸೊಳ್ಳೆಗಳು ಜಾಸ್ತಿಯಾಗಿ ರೋಗ ಉಲ್ಬಣವಾಗುವ ಸಾದ್ಯತೆ ಇದೆ. ರಾಜ್ಯದ ಕೆಲವು ಭಾಗಗಳಲ್ಲಿ ಚರ್ಮ ಗಂಟು ರೋಗ ಉಲ್ಬಣಗೊಂಡ ಹಿನ್ನೆಲೆಯಲ್ಲಿ ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ಮುನ್ನಚ್ಛರಿಕೆ ಕ್ರಮ ಕೈ ಕೊಂಡಿದೆ.
ಚರ್ಮ ಗಂಟು ರೋಗವು ವೈರಸ್ ನಿಂದ ಬರುವ ಸಾಂಕ್ರಾಮಿಕ ರೋಗವಾಗಿದ್ದು ರೋಗ ತಗುಲಿದ ಜಾನುವಾರುಗಳಲ್ಲಿ ಆರಂಭದಲ್ಲಿ ಜ್ವರ ಕಾಣ ಸಿಕೊಳ್ಳಲಿದ್ದು ಈ ರೋಗವು ನೋಣ ಸೊಳ್ಳೆ ಹಾಗೂ ಉಣ್ಣೆಗಳಿಂದ ಹರಡುವ ಸಾದ್ಯತೆಯಿದ್ದು ರೋಗದಿಂದ ಸಾವನ್ನು ಒಪ್ಪುವ ಸಾದ್ಯತೆ ಇದೆ. ಶೇ. ೨ ರಿಂದ ಶೇ ೫ ಜಾನುವಾರುಗಳು ಈ ರೋಗದಿಂದ ಸಾವನ್ನಪ್ಪುವ ಸಾಧ್ಯತೆ ಇದೆ.
ಈ ರೋಗ ದೇಶಾದ್ಯಂತ ಮೊದಲಿಗೆ ೨೦೨೨ ರ ನವೆಂಬರ್ ನಲ್ಲಿ ಕಾಣ ಸಿಕೊಂಡಿದ್ದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ೪೦೦ ಕ್ಕೂ ಅಧಿಕ ಜಾನುವಾರು ಮರಣ ಹೊಂದಿ ಹಾಲಿನ ಇಳುವರಿ ಗಣನೀಯವಾಗಿ ಕಡಿಮೆ ಯಾಗಿತ್ತು. ಚರ್ಮಗಂಟು ರೋಗಕ್ಕೆ ಲಸಿಕೆಯೊಂದೇ ಪರಿಹಾರವಾಗಿದ್ದು ಇಲಾಖೆ ತಾಲೂಕಿನಲ್ಲಿ ಈ ಹಿಂದೆ ಎಲ್ಲ ಜಾನುವಾರುಗಳಿಗೆ ಈಗಾಗಲೇ ಮೂರು ಬಾರಿ ಲಸಿಕೆ ಹಾಕಿದ್ದು ನಿಯಂತ್ರಣಕ್ಕೆ ಬಂದಿದೆ.
ನಾಲ್ಕು ತಿಂಗಳ ಮೇಲ್ಪಟ್ಟ ಎಲ್ಲ ಜಾನುವಾರುಗಳಿಗೆ ಈ ಹಿಂದೆ ಲಸಿಕೆ ಹಾಕಿಸಿದ್ದರೂ ಹೈನುಗಾರರು ಈ ಬಾರಿಯೂ ತಮ್ಮ ಜಾನುವಾರುಗಳಿಗೆ ಲಸಿಕೆ ಹಾಕಿಸುವಂತೆ ಸೂಚಿಸಲಾಗಿದೆ. ಮಾಹಿತಿಗೆ ಹತ್ತಿರದ ಪಶು ವೈದ್ಯಕೀಯ ಸಂಸ್ಥೆಗಳನ್ನು ಅಥವಾ ಹಾಲು ಉತ್ಪಾದಕರ ಸಹಕಾರಿ ಸಂಘದ ಸಂಸ್ಥೆಗಳನ್ನು ಸಂಪರ್ಕಿಸುವಂತೆ ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ಸಹಾಯಕ ನಿರ್ದೇಶಕ ರಾಜಕುಮಾರ ಅಡಕಿ ತಿಳಿಸಿದ್ದಾರೆ.
ಪುರಸಭೆ ಅಧ್ಯಕ್ಷ ಲಿಂಬಾಜಿ ರಾಠೋಡ ಗಣತಿಗೆ ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ ಡಾ. ಪ್ರಕಾಶ ಮಿರ್ಜಿ,ಡಾ. ರಾಜಶೇಖರ ಕಾರಜೋಳ,ಡಾ. ರವಿಶಂಕರ ಬಿರಾದಾರ,ಡಾ. ಅನಿತಾ ಹೊಟಕರ,ಸಿಬ್ಬಂದಿಗಳಾದ ಎಸ್.ಐ.ಮೂಡಲಗಿ, ರಮೇಶ ನರಳೆ,ರಾಮಣ್ಣ ಉಪ್ಪಾರ, ಜಾವೇದ ಬಾಗವಾನ,ರವಿ ಮಲಕಣ್ಣನವರ, ಜಿ.ಆಯ್.ಕರಣೆ, ವಿಶ್ವನಾಥ ಮೊಕಲಾಜಿ ಮತ್ತಿತರಿದ್ದರು.