ಮಣ್ಣಿನ ಆರೋಗ್ಯ ಕಾಪಾಡುವದು ಅತಿ ಮುಖ್ಯ
ಇಂಡಿ : ಮನುಷ್ಯ ಯಾವ ಋಣವನ್ನಾದರೂ ತೀರಿಸಬಹುದು.ಆದರೆಮಣ್ಣಿನಣ ಋಣ ತೀರಿಸುವದು ಎಂದಿಗೂ ಅಸಾದ್ಯ. ಹಾಗಾಗಿ ಮನುಷ್ಯರಷ್ಟೇ ಮಣ ್ಣನ ಆರೋಗ್ಯ ಕಾಪಾಡಿಕೊಳ್ಳುವದು ಮುಖ್ಯ. ಮಣ ್ಣದ್ದರೆ ಬದುಕು,ಮಣ್ಣೆಂದರೆ ಉತ್ತಮ ಭವಿಷ್ಯ ಎಂದು ಮಣ್ಣು ವಿಜ್ಞಾನ ಡಾ. ಬಾಲಾಜಿ ನಾಯ್ಕ ಹೇಳಿದರು.
ಪಟ್ಟಣದ ಕೃಷಿ ವಿಜ್ಞಾನಕೇಂದ್ರದಲ್ಲಿ ಕೊರಮಂಡಲ್ ಇಂಟರನ್ಯಾಷನಲ್ ಲಿಮಿಟೆಡ್ ವಿಜಯಪುರ ಇವರ ಸಹಯೋಗದೊಂದಿಗೆ ವಿಶ್ವ ಮಣ್ಣು ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಸಾವಯುವ ಕೃಷಿ ರೈತ ಎಸ್. ಟಿ. ಪಾಟೀಲ ಮಾತನಾಡಿ ನಮ್ಮ ಭವಿಷ್ಯವು ಆರೋಗ್ಯಕರ ಮಣ ್ಣನ ಮೇಲೆ ಅವಲಂಬಿತವಾಗಿದೆ ಮಣ್ಣಿಲ್ಲದೇ ಜಗತ್ತಿಗೆ ಆಹಾರ ಭದ್ರತೆಇಲ್ಲ.
ಆಹಾರವಿಲ್ಲದೇಜೀವನವಿಲ್ಲ ಹೀಗಾಗಿ ಆರೋಗ್ಯಕರ, ಸುಸ್ಥಿರ ಮಣ ್ಣನ ನಿರ್ವಹಣೆಯ ಪ್ರಾಮುಖ್ಯತೆ ತಿಳಿಸಲು ಪ್ರತಿ ವರ್ಷಡಿಸೆಂಬರ ೫ ರಂದು ವಿಶ್ವ ಮಣ ್ಣನ ದಿನವನ್ನುಆಚರಿಸಾಲುತ್ತದೆ. ಈ ವರ್ಷದ ೨೦೨೪ ರಘೋಷವಾಕ್ಯ“ಮಣ ್ಣನಕಾಳಜಿ : ಕ್ರಮಗಳು, ಪರಿಶೀಲಿಸಿ, ನಿರ್ವಹಿಸಿ” ಆಗಿದೆ. ಮಣ ್ಣನಗುಣ ಲಕ್ಷಣಗಳನ್ನು ಪರಿಶೀಲಿಸುವ ಅಗತ್ಯವನ್ನುಅದರಆರೋಗ್ಯ ಸುಧಾರಿಸುವ ಮಾರ್ಗವನ್ನು ಮತ್ತು ನಿತ್ಯ ನಿರ್ವಹಣೆಯ ಉಪಾಯಗಳನ್ನು ಒತ್ತಿ ಹೇಳುತ್ತದೆ ಎಂದು ತಿಳಿಸಿದರು.
ಡಾ. ಹೀನಾ ಎಂ.ಎಸ್. . ಡಾ. ಪ್ರಸಾದ ಎಂ. ಜಿ. ಡಾ. ಪ್ರೇಮ್ಚಂದ್ಯು. ಡಾ. ಪ್ರಕಾಶ ಜಿ. ಮಾತನಾಡಿದರು.
ಬಿ. ಎಸ್. ಬಿರಾದಾರ, ಎಂ. ಎಲ್. ದೇವರ , ಅಬ್ದುಲ ರಜಾಕ ಮಾರುಕಟ್ಟೆಅಧಿಕಾರಿ, ಕೊರಮಂಡಲ್ಇAಟರನ್ಯಾಷನಲ್ ಲಿಮಿಟೆಡ್ ವಿಜಯಪುರ, ರಂಜಿತಕುಮಾರ ಜಿ. ಟಿ. ವಲಯ ಪ್ರಬಂಧಕರು, ಕೊರಮಂಡಲ್ಇAಟರನ್ಯಾಷನಲ್ ಲಿಮಿಟೆಡ್, ಅನಿಲ ಬನಸೊಡೆ , ಶೈಲಶ್ರೀ ಜಾಧವ, ಅನಿಲ ಬನಸೋಡೆ, ಮತ್ತಿತರಿದ್ದರು.
ಕಾರ್ಯಕ್ರಮದಲ್ಲಿ೭೫ಕ್ಕೂ ಹೆಚ್ಚುಜನಆಸಕ್ತ ರೈತರು, ಯುವಕರು ಹಾಗೂ ಅಧಿಕಾರಿಗಳು ಭಾಗವಹಿಸಿದರು.
ಇಂಡಿ ಪಟ್ಟಣದ ಕೃಷಿ ವಿಜ್ಞಾನಕೇಂದ್ರದಲ್ಲಿ ವಿಶ್ವ ಮಣ್ಣು ದಿನಾಚರಣೆಯಲ್ಲಿ ಡಾ. ಬಾಲಾಜಿ ನಾಯಕ ಮಾತನಾಡಿದರು.



















