ಇಂಡಿ : ನಗರದ ತಾಲೂಕು ಕಚೇರಿಯಲ್ಲಿ ಅಭಿಲೇಖಾಲಯದಲ್ಲಿನ ದಾಖಲೆಗಳು ಮತ್ತು ಸರ್ವೇ ದಾಖಲೆಗಳ ಡಿಜಿಟಲೀಕರಣದ ಭೂ ಸುರಕ್ಷಾ ಯೋಜನೆಗೆ ಶುಕ್ರವಾರ ಕಂದಾಯ ಉಪವಿಭಾಗ ಅಧಿಕಾರಿ ಅಬೀದ್ ಗದ್ಯಾಳ ಚಾಲನೆ ನೀಡಿದರು..
ತಾಲೂಕು ಆಡಳಿತ ಸೌಧದಲ್ಲಿ ಕಂದಾಯ ಉಪವಿಭಾಗಾಧಿಕಾರಿಗಳು ಅಬೀದ್ ಗದ್ಯಾಳ ಯೋಜನೆಗೆ ಚಾಲನೆ ನೀಡಿ ಮಾತನಾಡಿ ರೈತರು ತಮ್ಮ ಭೂ ದಾಖಲೆಗಳನ್ನು ಕಳೆದುಕೊಂಡು ಮತ್ತೆ ಪಡೆಯಲು ತಹಸೀಲ್ದಾರ ಕಚೇರಿಗೆ ಅಲೆದಾಡಿದರೂ ದಾಖಲೆಗಳು ದೊರೆಯುತ್ತಿರಲಿಲ್ಲ. ೪೦-೫೦ ವರ್ಷದ ಹಳೆಯ ಭೂ ದಾಖಲೆಗಳ ಪತ್ರದ ಕಾಗದ ಹಳೆಯದಾಗಿ ಹರಿದು ಹೋಗಿ ತನ್ನ ಅಸ್ತಿತ್ವ ಕಳೆದುಕೊಳ್ಳುತ್ತಿತ್ತು. ಇದನ್ನು ಚಿಂತಿಸಿ ಸರಕಾರ ಮುಂದಾಗಿದೆ ಎಂದು ತಿಳಿಸಿದರು.
ಭೂ ಸುರಕ್ಷಾ ಎಂಬ ಅಪ್ಲಿಕೇಶನ್ ನಲ್ಲಿ ನಿಮ್ಮ ಭೂ ದಾಖಲೆಯ ಸಂಖ್ಯೆಯನ್ನು ನೀಡಿದರೆ ಸಾಕು ಒಂದು ನಿಮಿಷದಲ್ಲಿ ನಿಮ್ಮ ಭೂ ದಾಖಲೆ ಪತ್ರಗಳನ್ನು ನೀಡುವ ಕ್ರಾಂತಿಕಾರಿ ಯೋಜನೆಯನ್ನು ಸರಕಾರ ಮಾಡಿದೆ. ಇಂದು ಡಿಜಟಲೀಕರಣ ಯೋಜನೆಗೆ ಅಧಿಕೃತವಾಗಿ ಚಾಲನೆ ನೀಡಿರುವದು ಸಂತಸದ ವಿಷಯ. ಈ ಯೋಜನೆಯಿಂದ ರೈತರು ಹಾಗೂ ಸಾರ್ವಜನಿಕರಿಗೆ ಅವರಿಗೆ ಬೇಕಾದ ಸಮಯದಲ್ಲಿ ದಾಖಲೆಗಳ ಪ್ರಿಂಟ್ ಗಳನ್ನು ಕೊಡಬಹುದು ಎಂದರು.
ರೈತರಿಗೆ ಸಮಸ್ಯೆಗಳನ್ನು ಪರಿಹರಿಸಲು ಕಂದಾಯ ಇಲಾಖೆಯಲ್ಲಿ ಡಿಜಿಟಲೀಕರಣ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಇಲ್ಲಿಯ ತನಕ ಕಂದಾಯ ಇಲಾಖೆಯಲ್ಲಿ ನೊಂದಣ ಯಾಗಿರುವ ಎಲ್ಲ ಭೂಮಿ ದಾಖಲಾತಿಗಳನ್ನು ಸ್ಕ್ಯಾನ್ ಮಾಡಿ ಕ್ಲೌಡ್ ನಲ್ಲಿ ಸಂಸ್ಕರಿಸಲಾಗುವ ಯೋಜನೆ ಇದಾಗಿದೆ ಎಂದರು.
ಈ ಸಂದರ್ಭದಲ್ಲಿ ಗ್ರೇಡ್ ೨ ತಹಸೀಲ್ದಾರ ಧನಪಾಲಶೆಟ್ಟಿ ದೇವೂರ, ಶಿರಸ್ತೆದಾರ ಎಸ್.ಆರ್.ಮುಜಗೊಂಡ, ರಾಜು ಮೂಗಿ, ಸಂಕೇತ ಪಾಟೀಲ, ಎಸ್.ಎಚ್.ಗುನ್ನಾಪುರ ಹಾಗೂ
ಮತ್ತಿತರಿದ್ದರು.
ಇಂಡಿ ನಗರದ ತಾಲೂಕು ಕಚೇರಿಯಲ್ಲಿ ಸರ್ವೇ ದಾಖಲೆಗಳ ಡಿಜಿಟಲೀಕರಣದ ಭೂ ಸುರಕ್ಷಾ ಯೋಜನೆಗೆ ಎಸಿ ಗದ್ಯಾಳರವರು ಚಾಲನೆ ನೀಡಿ ಮಾತನಾಡಿದರು.