ವಿಜಯಪುರ ನಗರದ ಡಾ.ಬಿ.ಆರ್.ಅಂಬೇಡ್ಕರ್ ಮಾರ್ಗದಲ್ಲಿ ಶ್ರೀ ಸಿದ್ಧೇಶ್ವರ ಮೆಡಿಕಲ್ ಶಾಖೆ ಉದ್ಘಾಟನೆ
ವಿಜಯಪುರ: ನಗರದ ಡಾ.ಬಿ.ಆರ್.ಅಂಬೇಡ್ಕರ್ ಮಾರ್ಗದಲ್ಲಿರುವ ಶ್ರೀ ಸುಂದರೇಶ್ವರ ದೇವಸ್ಥಾನದ ದ್ವಾರ ಬಾಗಿಲು ಮುಂಭಾಗದಲ್ಲಿರುವ ಅಂಗಡಿ ಕಾಪ್ಲೆಕ್ಸ್ ದಲ್ಲಿ ಶ್ರೀ ಸಿದ್ಧೇಶ್ವರ ಲೋಕಕಲ್ಯಾಣ ಟ್ರಸ್ಟ್ ನ ಶ್ರೀ ಸಿದ್ದೇಶ್ವರ ಮೆಡಿಕಲ್ ಶಾಖೆಯನ್ನು ನಗರ ಶಾಸಕರು ಹಾಗೂ ಸಿದ್ದೇಶ್ವರ ಸಂಸ್ಥೆ ಅಧ್ಯಕ್ಷರಾದ ಬಸನಗೌಡ ಪಾಟೀಲ ಯತ್ನಾಳ ರವರು ಭಾನುವಾರ ಉದ್ಘಾಟಿಸಿದರು.
ಸಾರ್ವಜನಿಕರಿಗೆ ಗುಣಮಟ್ಟಣದ ಹಾಗೂ ಯೋಗ್ಯ ದರದಲ್ಲಿ ಯಾವುದೇ ಔಷಧಿಯಾದರೂ ಒಂದೇ ಸೂರಿನಡಿ ದೊರೆಯುವಂತೆ ಶ್ರೀ ಸಿದ್ಧೇಶ್ವರ ಲೋಕಕಲ್ಯಾಣ ಟ್ರಸ್ಟ್ ನ ಶ್ರೀ ಸಿದ್ದೇಶ್ವರ ಮೆಡಿಕಲ್ ಮೂಲಕ ಅನುಕೂಲ ಮಾಡಿಕೊಡಲಾಗುತ್ತಿದೆ.
ಸಿದ್ದೇಶ್ವರ ಸಂಸ್ಥೆ ಉಪಾಧ್ಯಕ್ಷರಾದ ಸಂಗನಬಸಪ್ಪ ಸಜ್ಜನ, ಸಿದ್ಧಸಿರಿ ಮಲ್ಟಿ ಸ್ಟೇಟ್, ಮಲ್ಟಿ ಪರ್ಪೋಸ್ ಕೋ-ಆಪರೆಟಿವ್ ಸೊಸೈಟಿ ಲಿಮಿಟೆಡ್ ನಿರ್ದೇಶಕರಾದ ಪ್ರಭುಗೌಡ ದೇಸಾಯಿ, ಮಹಾನಗರ ಪಾಲಿಕೆ ಸದಸ್ಯರಾದ ಪ್ರೇಮಾನಂದ ಬಿರಾದಾರ, ರಾಜಶೇಖರ ಕುರಿಯವರ, ಜವಾಹಾರ ಗೋಸಾವಿ ಸೇರಿದಂತೆ ಮುಖಂಡರು, ಹಿತೈಷಿಗಳು, ಕಾರ್ಯಕರ್ತರು, ಅಭಿಮಾನಿಗಳು ಉಪಸ್ಥತರಿದ್ದರು.



















