ನ-24 ರಂದು ಬರಗುಡಿ ಗ್ರಾಮದಲ್ಲಿ ಆಂಗ್ಲ ಮಾಧ್ಯಮ ಶಾಲೆಯ ನೂತನ ಕಟ್ಟಡದ ಉದ್ಘಾಟನೆ
ಇಂಡಿ: ತಾಲೂಕಿನ ಬರಗುಡಿ ಗ್ರಾಮದಲ್ಲಿ ನ.೨೪ ರವಿವಾರದಂದು ಬೆಳಿಗ್ಗೆ ೯:೩೦ ಕ್ಕೆ ಶಾಲಾ ಆವರಣದಲ್ಲಿ ಹಜರತ ನಾಸೀರಜಂಗಸಾಹೇಬ ದರ್ಗಾ ಸಾಮಾಜಿಕ ಹಾಗೂ ಶೈಕ್ಷಣ ಕ ಕ್ಷೇಮಾಭಿವೃದ್ಧಿ ಸಂಘ(ರಿ) ಬರಗುಡಿ ಇವರ ಆಶ್ರಯದಲ್ಲಿ ನಡೆಯುತ್ತಿರುವ ಆಂಗ್ಲ ಮಾಧ್ಯಮ ಶಾಲೆಯ ನೂತನ ಕಟ್ಟಡದ ಉದ್ಘಾಟನಾ ಸಮಾರಂಭ ಜರುಗಲಿದೆ.
ಬಂಥನಾಳದ ವೃಷಭಲಿಂಗ ಮಹಾಶಿವಯೋಗಿಗಳು, ಬರಗುಡಿಯ ಸಜ್ಜಾದ-ಎ-ನಶೀನ್ ಹಜರತ್ ನಾಸೀರಜಂಗಸಾಹೇಬ ದರ್ಗಾದ ಮಹಿಬೂಬಸಾಹೇಬ ಇಂಗಳಗಿ, ನಂದ್ರಾಳದ ಸಜ್ಜಾದ-ಎ-ನಶೀನ್ ಬಾಬಡೆಸಾಬ ದರ್ಗಾದ ರಸೂಲಬಾನ ಶೇರಖಾನ ಬಿರಾದಾರ ಇವರು ಸಾನಿಧ್ಯ ವಹಿಸುವರು.
ವಿಜಯಪುರ ಲೋಕಸಭಾ ಸಂಸದರಾದ ರಮೇಶ ಜಿಗಜಿಣಗಿ ಜ್ಯೋತಿ ಬೆಳಗಿಸುವರು. ಇಂಡಿ ಮತಕ್ಷೇತ್ರದ ಶಾಸಕರಾದ ಯಶವಂತರಾಯಗೌಡ ಪಾಟೀಲ ಉದ್ಘಾಟಿಸುವರು. ಬರಗುಡಿಯ ಹ.ನಾ.ದ.ಸಾ.ಶೈ.ಕ್ಷೇ. ಸಂಘದ ಉಪಾಧ್ಯಕ್ಷ ವೆಂಕಟೇಶ ಕುಲಕಣ ð ಅಧ್ಯಕ್ಷತೆ ವಹಿಸುವರು.
ಹಿಂಗಣಿ ಗ್ರಾಪಂ ಅಧ್ಯಕ್ಷ ಪ್ರಕಾಶ ಪ್ಯಾಟಿ, ಅಹಿರಸಂಗ ಗ್ರಾಪಂ ಅಧ್ಯಕ್ಷ ಶಬಾನಾ ಹಸನ್ ಶೇಖ್, ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮೀತಿ ಅಧ್ಯಕ್ಷ ಇಲಿಯಾಸ್ ಅಹಮದ್ ಬೋರಾಮಣ , ಶಾಂತೇಶ್ವರ ಟ್ರಸ್ಟ್ ಕಮೀಟಿ ಅಧ್ಯಕ್ಷ ಕಾಸುಗೌಡ ಬಿರಾದಾರ, ಬಳ್ಳೊಳ್ಳಿ ಬ್ಲಾಕ್ ಕಾಂಗ್ರೆಸ್ ಕಮೀಟಿ ಅಧ್ಯಕ್ಷ ಕಲ್ಲನಗೌಡ ಬಿರಾದಾರ, ಇಂಡಿ ಬ್ಲಾಕ್ ಕಾಂಗ್ರೆಸ್ ಕಮೀಟಿ ಅಧ್ಯಕ್ಷ ಜಾವೀದ ಮೋಮಿನ, ಬೆಂಗಳೂರಿನ ಆಯುಕ್ತರ ಕಚೇರಿಯ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಈರಣ್ಣ ಆಶಾಪುರ, ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕಿ ಟಿ.ಎಸ್.ಕೋಲಾರ, ಇಂಡಿ ಉಪವಿಭಾಗಾಧಿಕಾರಿ ಅಬೀದ್ ಗದ್ಯಾಳ, ವಿಜಯಪುರ ಬಿಎಲ್‌ಡಿಇ ಆಸ್ಪತ್ರೆಯ ಹಿರಿಯ ಶಸ್ತ್ರ ಚಿಕಿತ್ಸಕ ಡಾ.ಮಂಜುನಾಥ ಕೋಟೆಣ್ಣವರ, ವಿಜಯಪುರದ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ವಿಶ್ರಾಂತ ಕಾರ್ಯಪಾಲಕ ಅಭಿಯಂತರರಾದ ಎಸ್.ಎಸ್.ಪಟ್ಟಣಶೆಟ್ಟಿ, ಇಂಡಿ ಕ್ಷೇತ್ರ ಶಿಕ್ಷಣಾಧಿಕಾರಿ ಟಿ.ಎಸ್.ಆಲಗೂರ, ಇಂಡಿ ಪುರಸಭೆ ಮುಖ್ಯಾಧಿಕಾರಿ ಮಹಾಂತೇಶ ಹಂಗರಗಿ, ಇಂಡಿ ಕ್ಷೇತ್ರ ಸಮನ್ವಯಾಧಿಕಾರಿ ಎಸ್.ಆರ್.ನಡುಗಡ್ಡಿ, ವಿಜಯಪುರ ಡೈಟ್ ಉಪನ್ಯಾಸಕ ಅಬ್ದುಲ್ ರೆಹಮಾನ್ ಮುಜಾವರ, ಅಹಿರಸಂಗ ಸರಕಾರಿ ಪ್ರೌಢಶಾಲಾ ಮುಖ್ಯಾಧ್ಯಾಪಕ ಜಯಪ್ರಕಾಶ ಸೊಡ್ಡಗಿ, ಅಮಗೊಂಡ ಪಾಟೀಲ, ಹುಸೇನಸಾಬ ಪಟೇಲ, ನಿವೃತ್ತ ಶಿಕ್ಷಕ ಎಂ.ವ್ಹಿ.ಬಗಲಿ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸುವರು ಎಂದು ಸಂಸ್ಥೆಯ ಆಡಳಿತ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.