ಬಿ.ಎಲ್.ಡಿ ಲೈಫ್ ಕೇರ್ ಪ್ರೊಡಕ್ಟ್ಸ್ ಗಳ ಘಟಕವಾದ ಆರೋಗ್ಯ ಫಾರ್ಮಸಿ ಉದ್ಘಾಟನೆ
ವಿಜಯಪುರ: ಬಿ.ಎಲ್.ಡಿ ಲೈಫ್ ಕೇರ್ ಪ್ರೊಡಕ್ಟ್ಸ್ ಗಳ ಘಟಕವಾದ ಆರೋಗ್ಯ ಫಾರ್ಮಸಿ ಉದ್ಘಾಟನೆ ಕಾರ್ಯಕ್ರಮ ಇಂದು ಸೋಮವಾರ ನಡೆಯಿತು.
ನಗರದ 770 ಲಿಂಗದ ಗುಡಿ ಹತ್ತಿರವಿರುವ ಬಿ.ಎಲ್.ಡಿ ಸೌಹಾರ್ದ ಸಹಕಾರಿ ಶಾಖೆಯ ನೆಲ ಅಂತಸ್ತಿನಲ್ಲಿ ಕಟ್ಟಡದಲ್ಲಿ ನಡೆದ ಕಾರ್ಯಕ್ರಮದಲ್ಲಿ ಜ್ಞಾನಯೋಗಾಶ್ರಮದ ಅಧ್ಯಕ್ಷ ಶ್ರೀ ಬಸವಲಿಂಗ ಸ್ವಾಮೀಜಿ ಸಾನಿಧ್ಯ ವಹಿಸಿ ಪೂಜೆ ನೆರವೇರಿಸಿದರು. ಅಲ್ಲದೇ, ಬಿ.ಎಲ್.ಡಿ ಲೈಫಕೇರ್ ತಯಾರಿಸಿರುವ ಹೈಜೀನ್ ಮತ್ತು ಹೆಲ್ತಕೇರ್ ಉತ್ಪನ್ನಗಳನ್ನು ಬಿಡುಗಡೆ ಮಾಡಿದರು.
ಬಳಿಕ ಮಾತನಾಡಿದ ಶ್ರೀಗಳು, ಬಿ.ಎಲ್.ಡಿ.ಇ ಸಂಸ್ಥೆ ಜನಪರ ಕಾರ್ಯಗಳ ಅತ್ಯುತ್ತಮ ಸೇವೆ ಮಾಡುತ್ತಿದೆ. ಶಿಕ್ಷಣ, ಆರೋಗ್ಯ ಕ್ಷೇತ್ರಕ್ಕೆ ಅಮೂಲಾಗ್ರ ಕೊಡುಗೆ ನೀಡಿರುವ ಸಂಸ್ಥೆಯ ಈಗ ಆರೋಗ್ಯ ಫಾರ್ಮಸಿ ಮೂಲಕ ಔಷಧ ಕ್ಷೇತ್ರಕ್ಕೂ ಆರೋಗ್ಯ ಸೇವೆಯನ್ನು ವಿಸ್ತರಿಸಿರುವುದು ಸಂತಸ ತಂದಿದೆ ಎಂದು ಹರ್ಷ ವ್ಯಕ್ತಪಡಿಸಿದರು.
ಇದಕ್ಕೂ ಮುಂಚೆ ಜಿಲ್ಲಾ ಆರೋಗ್ಯಾಧಿಕಾರಿ ಡಾ. ಸಂಪತ ಗುಣಾರೆ ಮತ್ತು ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ಶಿವಾನಂದ ಮಾಸ್ತಿಹೊಳಿ ಫಾರ್ಮಸಿ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಬಿ.ಎಲ್.ಡಿ.ಇ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಮತ್ತು ವಿಧಾನ ಪರಿಷತ ಶಾಸಕ ಸುನೀಲಗೌಡ ಪಾಟೀಲ, ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯದ ಸಮಕುಲಾಧಿಪತಿ ಡಾ. ವೈ. ಎಂ. ಜಯರಾಜ, ರಜಿಸ್ಟ್ರಾರ್ ಡಾ. ಆರ್. ವಿ. ಕುಲಕರ್ಣಿ, ಮೆಡಿಕಲ್ ಕಾಲೇಜಿನ ಪ್ರಾಚಾರ್ಯ ಡಾ. ಅರವಿಂದ ಪಾಟೀಲ, ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ರಾಜೇಶ ಹೊನ್ನುಟಗಿ, ಸಂಸ್ಥೆಯ ಆಡಳಿತಾಧಿಕಾರಿಗಳಾದ ವಿಲಾಸ ಬಗಲಿ, ಡಾ. ಅಶೋಕ ಎಂ. ಲಿಮಕರ, ಐ. ಎಸ್. ಕಾಳಪ್ಪನವರ, ವಚನಪಿತಾಮಹ ಡಾ. ಫ. ಗು. ಹಳಕಟ್ಟಿ ಸಂಶೋಧನೆ ಕೇಂದ್ರದ ಕಾರ್ಯದರ್ಶಿ ಡಾ. ಎಂ. ಎಸ್. ಮದಭಾವಿ, ಬಿ.ಎಲ್.ಡಿ.ಇ ಫಾರ್ಮಸಿ ಕಾಲೇಜಿನ ಪ್ರಾಚಾರ್ಯ ಡಾ. ಮಲ್ಲಿಕಾರ್ಜುನ ಶೆಟ್ಟಿ, ಸಂಸ್ಥೆಯ ಉಪ ಹಣಕಾಸು ಅಧಿಕಾರಿ ಯಲ್ಲಾಲಿಂಗ ಜನವಾಡ, ಹಣಕಾಸು ಅಧಿಕ್ಷಕ ಎಸ್. ಎಸ್. ಪಾಟೀಲ, ಆರೋಗ್ಯ ಫಾರ್ಮಸಿಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಶ್ರೀಪಾದ ಪೋತದಾರ, ಬಿ.ಎಲ್.ಡಿ ಸೌಹಾರ್ದ ನಿರ್ದೇಶಕ ವಿಜಯಕುಮಾರ ಕನಮಡಿ, ಸಿಇಓ ವಿಜಯಕುಮಾರ ಎಸ್. ಜತ್ತಿ,ನಾನಾ ಕಾಲೇಜುಗಳ ಪ್ರಾಚಾರ್ಯರು ಉಪಸ್ಥಿತರಿದ್ದರು.
And 2 BLD Arogya Pharmacy Inauguration
ವಿಜಯಪುರ ನಗರದಲ್ಲಿ ಬಿ.ಎಲ್.ಡಿ ಲೈಫ್ ಕೇರ್ ಪ್ರೊಡಕ್ಟ್ಸ್ ಗಳ ಘಟಕವಾದ ಆರೋಗ್ಯ ಫಾರ್ಮಸಿ ಉದ್ಘಾಟನೆ ಕಾರ್ಯಕ್ರಮದಲ್ಲಿ ಜ್ಞಾನಯೋಗಾಶ್ರಮದ ಅಧ್ಯಕ್ಷ ಶ್ರೀ ಬಸವಲಿಂಗ ಸ್ವಾಮೀಜಿ ಸಾನಿಧ್ಯ ನಾನಾ ಉತ್ಪನ್ನಗಳನ್ನು ಬಿಡುಗಡೆ ಮಾಡಿದರು. ಈ ಸಂದರ್ಭದಲ್ಲಿ ಬಿ.ಎಲ್.ಡಿ.ಇ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಮತ್ತು ವಿಧಾನ ಪರಿಷತ ಶಾಸಕ ಸುನೀಲಗೌಡ ಪಾಟೀಲ, ಡಾ. ವೈ. ಎಂ. ಜಯರಾಜ, ಡಾ. ಆರ್. ವಿ. ಕುಲಕರ್ಣಿ, ಡಾ. ಅರವಿಂದ ಪಾಟೀಲ, ಡಾ. ರಾಜೇಶ ಹೊನ್ನುಟಗಿ, ವಿಲಾಸ ಬಗಲಿ, ಡಾ. ಅಶೋಕ ಎಂ. ಲಿಮಕರ, ಐ. ಎಸ್. ಕಾಳಪ್ಪನವರ, ಶ್ರೀಪಾದ ಪೋತದಾರ ಮುಂತಾದವರು ಉಪಸ್ಥಿತರಿದ್ದರು.