ಮಸ್ಕಿ: ರಾಯಚೂರು ಜಿಲ್ಲೆಯ ಮಸ್ಕಿ ತಾಲೂಕ ತೀರ್ಥಭಾವಿ ಗ್ರಾಮದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಗ್ರಾಮ ಘಟಕವನ್ನು ಉದ್ಘಾಟನೆ ಮಾಡಲಾಯಿತು. ಗ್ರಾಮದ ನೂರಾರು ರೈತ ಕಾರ್ಯಕರ್ತರು ಶಾಲು ದೀಕ್ಷಾ ಮಾಡಿಕೊಂಡರು. ಈ ವೇಳೆ ನೆರೆದ ಅನ್ನದಾತರು ರೈತರ ಏಳಿಗೆಗಾಗಿ ಯಾವುದೇ ಕೆಲಸ ಕಾರ್ಯಗಳಿಗೆ, ಆಸೆ ಆಮಿಷಗಳಿಗೆ ಒಳಗಾಗದೆ, ಯಾವುದೇ ರಾಜಕೀಯ ಪಕ್ಷಗಳ ಒತ್ತಡಕ್ಕೆ ಮಣಿಯದೆ, ರೈತರ ಕೆಲಸ ಕಾರ್ಯಗಳನ್ನು ಮಾಡಿಕೊಡುತ್ತೇವೆಂದು ಪ್ರಮಾಣ ಮಾಡಿದರು.
ಉದ್ಘಾಟಕರಾಗಿ ಶರಣಪ್ಪ ಮರಳಿ ಜಿಲ್ಲಾ ಅಧ್ಯಕ್ಷರು. ರಾಮಯ್ಯ ಜವಳಗೇರ ಉಪಾಧ್ಯಕ್ಷರು. ನಿರುಪಾದೆಪ್ಪ ಅಡ್ಡಿ. ಮಾನಯ್ಯ ಅಂಕುಶದೊಡ್ಡಿ, ತಾಯಪ್ಪ ಮಸ್ಕಿ ತಾಲೂಕ ಅಧ್ಯಕ್ಷ, ತಿಮ್ಮಣ್ಣ ಬೋವಿ, ಆಲಮಪ್ಪ ಕಡೂಬರು, ಅಯ್ಯನಗೌಡ ತೀರ್ಥಭಾವಿ, ಬಸರಾಜಪ್ಪ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.