ಇಂಡಿಯಲ್ಲಿ ಬಿಎಲ್‍ಡಿಈ ಸೌಹಾರ್ದ ಸಹಕಾರಿ ಸಂಘ ಉದ್ಘಾಟನೆ..
ಇಂಡಿ: ಪಟ್ಟಣದ ವಿಜಯಪೂರ ರಸ್ತೆಯಲ್ಲಿನ ಟಿಎಪಿಎಂಸ್ ಗೋಡಾವನ್ ಎದುರಿಗೆ ಬಿಎಲ್‍ಡಿಈ ಸೌಹಾರ್ದ ಸಹಕಾರಿ ಸಂಘದ 7ನೇ ಶಾಖೆಯನ್ನು ಸೋಮವಾರ ಬಂಥನಾಳ ಶ್ರೀಗಳ ಆಶೀರ್ವಾದ – ದೊಂದಿಗೆ ಇಂಡಿ ಶಾಸಕ ಯಶವಂತರಾಯಗೌಡ
ಪಾಟೀಲ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಯಶವಂತರಾಯಗೌಡ ಪಾಟೀಲ ಸಂಗನಬಸವ
ಶಿವಯೋಗಿಗಳು ಕಟ್ಟಿದ ಬಿಎಲ್‍ಡಿಈ ಸಂಸ್ಥೆ ಇಂದು
ಹೆಮ್ಮರವಾಗಿ ಬೆಳೆದಿದೆ. ಆ ಸಂಸ್ಥೆಯ ಅಡಿಯಲ್ಲಿ ಸೌಹಾರ್ದ ಸಂಘ ಸ್ಥಾಪಿಸಿದ್ದು ಶ್ಲಾಘನೀಯ. ಈ ಸೌಹಾರ್ದ ಅತ್ಯುನ್ನತವಾಗಿ ಬೆಳೆಯಲಿ ಎಂದು ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯ ಬಿಎಲ್‍ಡಿಈ ಸೌಹಾರ್ದ ಸಹಕಾರಿ ಅಧ್ಯಕ್ಷ ಸುನೀಲ್‍ಗೌಡ ಪಾಟೀಲ, ಸ್ಥಳೀಯ ಆಡಳಿತ ಮಂಡಳಿ ಅಧ್ಯಕ್ಷ ಶ್ರೀಪತಿಗೌಡ ಬಿರಾದಾರ ಮಾತನಾಡಿದರು. ಉಪಾಧ್ಯಕ್ಷ ಶರಣಬಸಪ್ಪ ಗುಡ್ಡಗಿ, ನಿರ್ದೇಶಕ ಮಹಾಂತೇಶ ಬಿರಾದಾರ, ಶಂಕರಗೌಡ ಪಾಟೀಲ, ಎಸ್.ಎಸ್.
ಕನಮಡಿ, ಇಲಿಯಾಸ ಬೋರಾಮಣಿ, ಜಾವೀದ್ ಮೋಮಿನ್ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಇಂಡಿ: ಪಟ್ಟಣದಲ್ಲಿ ಬಿಎಲ್‍ಡಿಇ ಸೌಹಾರ್ದ ಸಹಕಾರಿ ಸಂಘ 7ನೇ ಶಾಖೆ ಶಾಸಕ ಯಶವಂತರಾಗೌಡ ಪಾಟೀಲ ಹಾಗೂ ವಿಧಾನ ಪರಿಷತ್ ಸದಸ್ಯ ಸುನಿಲ್‍ಗೌಡ ಪಾಟೀಲ ಉದ್ಘಾಟಿಸಿದರು.