ಗುಂದವಾನ ಗ್ರಾಮದಲ್ಲಿ 2 ಕೋಟಿ ರೂಪಾಯಿ ವೆಚ್ಚದ ಶಾಲಾ ಕಟ್ಟಡ ಉದ್ಘಾಟಿಸಿ..! ಕಾಂಗ್ರೆಸ್ ವಿರುದ್ಧ ಸಂಸದ ರಮೇಶ್ ಮಾತಾಡಿದ್ದು..?
ಇಂಡಿ: ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಮುಖಾಂತರ ಎರಡು ಕೋಟಿ ಹತ್ತು ಲಕ್ಷ ರೂಪಾಯಿ ವೆಚ್ಚದಲ್ಲಿ ೧೩ ಕೋಣೆಗಳ ಸುಸಜ್ಜಿತ ಶಾಲಾ ಕಟ್ಟಡ ನಿರ್ಮಾಣ ಮಾಡಿದ್ದು ನನ್ನ ಆತ್ಮಕ್ಕೆ ಸಂತೃಪ್ತಿ ತಂದಿದೆ ಎಂದು ವಿಜಯಪುರ ಸಂಸದ ರಮೇಶ ಜಿಗಜಿಣಗಿ ಹೇಳಿದರು.
ಬುಧವಾರ ತಾಲೂಕಿನ ಗುಂದವಾನ ಗ್ರಾಮದಲ್ಲಿ ಎನ್.ಎಚ್.ಎ ಅನುದಾನದದಡಿಯಲ್ಲಿ ನಿರ್ಮಿಸಿದ ನಮ್ಮೂರ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ನೂತನ ಕಟ್ಟಡದ ಉದ್ಘಾಟನಾ ಸಮಾರಂಭ ನೆರವೇರಿಸಿ ಅವರು ಮಾತನಾಡಿದರು.ರಾಷ್ಟ್ರೀಯ ಹೆದ್ದಾರಿಯವರು ೧ ಕೋಟಿ ೫೦ ಲಕ್ಷ ರೂಪಾಯಿಗಳ ಅಂದಾಜು ಮೊತ್ತ ಮಾಡಿ ಶಾಲಾ ಕಟ್ಟಡಕ್ಕೆ ಹಣ ನೀಡುವುದಾಗಿ ತಿಳಿಸಿದ್ದರು. ಗ್ರಾಮದ ಮುಖಂಡರು ಬಂದು ಗ್ರಾಮದಲ್ಲಿ ಉತ್ತಮ ಶಾಲೆ ಕಟ್ಟಲು ನೀವು ಅವಕಾಶ ಮಾಡಿಕೊಡಬೇಕು ಎಂದು ಕೇಳಿದಾಗ ನಾನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದವರೊಂದಿಗೆ ಮಾತನಾಡಿ ಎರಡು ಕೋಟಿ ಹತ್ತು ಲಕ್ಷ ರೂಪಾಯಿಗಳ ಅನುದಾನವನ್ನು ಬಿಡುಗಡೆ ಮಾಡಿಸಿದ್ದೇನೆ. ಗ್ರಾಮೀಣ ಭಾಗದಲ್ಲಿಯೂ ಸಹ ನಗರ ಪ್ರದೇಶಗಳಲ್ಲಿ ಇರುವಂತಹ ಕಟ್ಟಡ ನಿರ್ಮಾಣ ಮಾಡಿದ್ದು ವೈಯಕ್ತಿಕವಾಗಿ ನನಗೆ ಸಂತೋಷ ತಂದಿದೆ ಎಂದರು.
ಈ ಶಾಲಾ ಕಟ್ಟಡ ಲೋಕಾರ್ಪಣೆ ಕಾರ್ಯಕ್ರಮ ಅದ್ದೂರಿಯಾಗಿ ಆಗÀಬೇಕಿತ್ತು. ಆದರೆ ಕೆಲವರು ಅದಕ್ಕೆ ಅಡ್ಡುಗಾಲು ಹಾಕಿ ಕಾರ್ಯಕ್ರಮ ಮಾಡಲೇಬಾರದು ಎಂದು ಗುಂದವಾನ ಗ್ರಾಮದ ಹಲವರಿಗೆ, ಪಂಚಾಯತ್‌ನವರಿಗೆ ಹೇಳಿದ ಪರಿಣಾಮ ಇಲ್ಲಿ ಹೆಚ್ಚಿನ ಜನ ಸೇರಲಿಲ್ಲ ಎಂದೂ ಸಹ ನನಗೆ ಗೊತ್ತಿದೆ. ಅಭಿವೃದ್ಧಿಯಲ್ಲಿ ಎಂದೂ ರಾಜಕಾರಣ ಮಾಡಬಾರದು. ಅದನ್ನು ಮೊದಲು ವಿರೋಧಿಗಳು ಅರಿತುಕೊಳ್ಳಬೇಕು. ನಾನು ಈ ಕಾರ್ಯ ಮಾಡಿದ್ದು ನನಗೆ ಸಂತಸ ತಂದಿದೆ. ಜಿಲ್ಲೆಗೆ ಒಂದು ಲಕ್ಷ ಹತ್ತು ಸಾವಿರ ಕೋಟಿ ರೂಪಾಯಿ ಅನುದಾನ ತಂದರು ಸಹ ನಾನು ನನ್ನ ಭಾವಚಿತ್ರವನ್ನು ಎಲ್ಲಿ ಹಚ್ಚಿಕೊಂಡಿಲ್ಲ. ನನಗೆ ಜನರ ಸೇವೆ ಮಾಡುವುದೊಂದೇ ಗುರಿ, ಆ ಕಾರ್ಯಗಳೇ ಇದನ್ನು ಜಿಗಜಿಣಗಿ ಅವರು ಮಾಡಿದ್ದು ಎಂದು ಹೇಳುತ್ತವೆ, ಆದರೆ ಕೆಲವರಿಗೆ ನಾನು ಮಾಡಿದ ಅಭಿವೃದ್ಧಿ ಕಾರ್ಯಗಳು ಆಗಿ ಬರುತ್ತಿಲ್ಲ, ಹೀಗಾಗಿ ನಾನು ಕಾರ್ಯಕ್ರಮ ಮಾಡಬೇಕೆಂದರೆ ಅಡ್ಡಗಾಲು ಹಾಕುತ್ತಿದ್ದಾರೆ ಎಂದು ಆರೋಪಿಸಿದರು.
ನಾನು ಕಳೆದ ಬಾರಿ ಚುನಾವಣೆಯಲ್ಲಿ ಇದು ನನ್ನ ಕೊನೆಯ ಚುನಾವಣೆ ಎಂದು ಹೇಳಿದ್ದೆ, ಆದರೆ ಪಕ್ಷದ ಮುಖಂಡರು ಕಾರ್ಯಕರ್ತರು ಆ ಮಾತಿಗೆ ಒಪ್ಪಿಗೆ ನೀಡುತ್ತಿಲ್ಲ. ನನಗೂ ಸಹ ಇನ್ನೂ ಮುಂದೆ ಗುರಿ ಇದೆ. ಮುಂದೆಯೂ ಪಕ್ಷ ಬಯಸಿದರೆ ಮತ್ತೆ ಅಖಾಡಕ್ಕೆ ಧುಮ್ಮಿಕ್ಕಲಿದ್ದೇನೆ ಎಂದರು.
ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ ಬಿಜೆಪಿ ಮುಖಂಡ ಕಾಸುಗೌಡ ಬಿರಾದಾರ ಗ್ರಾಮದ ಅತ್ತಾರ ಪಟೇಲ ಮಾತನಾಡಿ, ಸಂಸದರು ಇಂತಹ ಅಭೂತಪೂರ್ವ ಕಾರ್ಯ ಮಾಡಿದ್ದಾರೆ. ಇಂತಹ ಸಂಸದರನ್ನು ಪಡೆದ ನಾವೇ ಧನ್ಯರು, ಇಂತಹ ಅಭಿವೃದ್ಧಿ ಕಾರ್ಯಗಳ ಪೂಜೆಗೂ ಸಹ ಅಡ್ಡಗಾಲು ಹೊಡೆಯುವ ರಾಜಕಾರಣ ಮಾಡುತ್ತಿರುವುದು ಮನಸ್ಸಿಗೆ ನೋವು ತಂದಿದೆ ಎಂದರು.
ವೇದಿಕೆಯಲ್ಲಿ ಚಡಚಣ ಕ್ಷೇತ್ರ ಶಿಕ್ಷಣಾಧಿಕಾರಿ ಹೆಚ್.ಎ. ನಾಯಕ, ಜ್ಞಾನೇಶ್ವರ ಠೋಕೆ, ಎಲ್.ಡಿ. ವಾಲೀಕಾರ ಸಿದ್ದಲಿಂಗ ಖಾನಾಪುರ, ಮಹಾದೇವ ಕದರಿ, ಎ.ಎಂ. ಪಾಟೀಲ, ಚಂದ್ರಕಾAತ ಪೂಜಾರಿ, ಸಿದ್ದನಗೌಡ ಪಾಟೀಲ, ಆರ್.ಎಸ್. ರುದ್ರವಾಡಿ ರಾಘವೇಂದ್ರ ಕಾಪಸೆ, ಸಾಹೇಬಗೌಡ ಚೌದರಿ, ಮಹಾದೇವಿ ವಾಲಿಕಾರ, ಎಂ.ಎA. ಗಬಸಾವಳಗಿ, ದೇವೇಂದ್ರ ಕುಂಬಾರ, ಸೇರಿದಂತೆ ಇನ್ನಿತರರು ಇದ್ದರು.
ಸಂವಿಧಾನಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರು ಮೃತರಾದಾಗ ಆಗಿನ ಕಾಂಗ್ರೇಸ್ ಸರಕಾರ ದೆಹಲಿಯಲ್ಲಿ ಅವರಿಗೆ ಹೂಳಲು ೬ ಅಡಿ ಸ್ಥಳ ನೀಡಲಿಲ್ಲ. ಈಗ ನಮ್ಮ ಬಿಜೆಪಿ ಸರಕಾರ ಅಂಬೇಡ್ಕರ್ ಅವರು ಹುಟ್ಟಿ ಬೆಳೆದ ಮನೆ ಸೇರಿದಂತೆ ಅವರು ಕಲಿತ ಶಾಲೆ, ಸೇರಿ ಒಟ್ಟು ೭ ಸ್ಥಳಗಳನ್ನು ನಮ್ಮ ಸರಕಾರ ಅಭಿವೃಧ್ಧಿಪಡಿಸಿ ಪ್ರೇಕ್ಷಣ Ãಯ ಸ್ಥಳವನ್ನಾಗಿಸಿದೆ. ೭೦ ವರ್ಷ ರಾಜಕಾರಣ ಮಾಡಿದ ಕಾಂಗ್ರೇಸ್ ಪಕ್ಷಕ್ಕೆ ದೇಶದ ಜನರಿಗೆ ಶುಧ್ಧ ಕುಡಿಯುವ ನೀರು ಕೊಡುವುದು ಸಾಧ್ಯವಾಗಿರಲಿಲ್ಲ. ಮೋದಿ ಸರಕಾರ ಈಗ ದೇಶಾದ್ಯಂತ ಜನರಿಗೆ ಶುಧ್ಧ ಕುಡಿಯುವ ನೀರಿನ ಪೂರೈಕೆ ಮಾಡುತ್ತಿದೆ.
ಕೇಂದ್ರ ಸರಕಾರದ ಅನುದಾನದ ಕಾಮಗಾರಿಗಳಿಗೆ ನನ್ನನ್ನು ಆಹ್ವಾನಿಸದೇ ನೀವೆ-ಕಾಮಗಾರಿಗಳ ಪೂಜೆ ಮಾಡಿದ್ದೀರಿ, ಆದರೆ ನಾನು ಕೆಲವೊಂದೇ ಅಭಿವೃಧ್ಧಿ ಕಾಮಗಾರಿಗಳಿಗೆ ಪೂಜೆ ಮಾಡಲು ಹೊರಟರೆ ಅದನ್ನು ಏಕೆ ತಡೆಯಲು ಪ್ರಯತ್ನಿಸುತ್ತೀರಿ? ಎಂದು ಪರೋಕ್ಷವಾಗಿ ತಿರುಗೇಟು ನೀಡಿದರು.
ರಮೇಶ ಜಿಗಜಿಣಗಿ, ಮಾಜಿ ಕೇಂದ್ರ ಸಚಿವ, ಹಾಲಿ ಸಂಸದ.
ಇಂಡಿ: ತಾಲೂಕಿನ ಗುಂದವಾನ ಗ್ರಾಮದಲ್ಲಿ ಎನ್.ಎಚ್.ಎ ಅನುದಾನದದಡಿಯಲ್ಲಿ ನಿರ್ಮಿಸಿದ ನಮ್ಮೂರ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ನೂತನ ಕಟ್ಟಡದ ಉದ್ಘಾಟನಾ ಸಮಾರಂಭ ನೆರವೇರಿಸಿ ಸಂಸದ ರಮೇಶ ಜಿಗಜಿಣಗಿ ಮಾತನಾಡಿದರು.