ಕಮಲಾಪುರ ಸರಕಾರಿ ಡಿಗ್ರಿ ಕಾಲೇಜಿನ ವಿದ್ಯಾರ್ಥಿಗಳಿಗೆ ಸ್ವಾಗತ ಹಾಗೂ ವಿವಿಧ ಚಟುವಟಿಕೆಗಳ ಉದ್ಘಾಟನೆ
ಕಮಲಾಪುರ : ವಿದ್ಯಾರ್ಥಿ ಜೀವನ ಬಂಗಾರದ ಜೀವನ, ಸಮಯದ ಸದುಪಯೋಗ ಪಡೆದು ಸತ್ಪ್ರತೆಗಳಾಗಬೇಕು, ಉನ್ನತ ಮಟ್ಟದ ಗುರಿ ಸಾಧನೆಗೆ ಮುಂದಾಗಬೇಕು.ಈ ಮೂಲಕ ಹೆತ್ತವರ ಖುಣ ತೀರಿಸುವ ಕೆಲಸ ಮಾಡಬೇಕು ಎಂದು ಕಾಲೇಜು ಶಿಕ್ಷಣ ಇಲಾಖೆಯ ಜಂಟಿ ನಿರ್ದೆಶಕ ಡಾ.ಗೊಳ್ಳೆ ಶಿವಶರಣ ಹೇಳಿದರು.
ಕಮಲಾಪುರ ತಾಲೂಕಿನ ಸರಕಾರಿ ಪ್ರಥಮ ದರ್ಜೆ ಹಾಗೂ ಸ್ನಾತಕ ಮತ್ತು ಸ್ನಾತಕೋತ್ತರ ಕಾಲೇಜಿನಲ್ಲಿ ಮಂಗಳವಾರ ಹಮ್ಮಿಕೊಂಡ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಸ್ವಾಗತ ಹಾಗೂ ವಿವಿಧ ಚಟುವಟಿಕೆಗಳ ಉದ್ಘಾಟನಾ ಸಮಾರಂಭಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ಸತ್ಯ, ನ್ಯಾಯ, ಧರ್ಮದ ಗುಣಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದ ಅವರು ಜಿಲ್ಲೆಯ ಪ್ಋಇ ಕಾಲೇಜಿಗೆ ಭೇಟಿ ನೀಡಿ ಪರಿಶೀಲನೆ ಮಾಡಿ ಪರಿಹಾರ ಒದಗಿಸಲು ಪ್ರಯತ್ನಿಸುತ್ತೇನೆ,
ಪ್ರಾಚಾರ್ಯೆ ಡಾ. ಅಮೃತಾ ಕಟಕೆ ಮಾತನಾಡಿ ನಮ್ಮ ಕಾಲೇಜಿನಲ್ಲಿ ನುರಿತ ಅನುಭವಿ ಉಪನ್ಯಾಸಕರಿದ್ದು ನಿಮಗೆ ಅಗತ್ಯ ಗುಣಮಟ್ಟದ ಶಿಕ್ಷಣ ನೀಡುತ್ತಾರೆ, ಸದುಪಯೋಗ ಪಡಿಸಿಕೊಂಡು ಹೆಚ್ಚಿನ ಜ್ಞಾನ ಪಡೆದುಕೊಳ್ಳಬೇಕು ಎಂದರು.
ಸಹಾಯಕ ನಿರ್ದೆಶಕ ಡಾ.ರಾಜೇಂದ್ರ ಶಿಂಧೆ, ಕಮಲಾಪುರ ಕಸಾಪ ಅಧ್ಯಕ್ಷ ಸುರೇಶ ಲೇಂಗಟಿ, ಪ್ರಾಚಾರ್ಯೆ ಡಾ.ಅಮೃತಾ ಕಟಕೆ, ಡಾ.ಜಗದೇವಪ್ಪ ಧರಣಿ, ಡಾ. ರಮೇಶ ಪೊತೆ, ಸುಫಿಯಾ ಬೇಗಂ, .ಶಾಂತಾ ಅಸ್ಟಿಗೆ, ಡಾ.ನೀತಾ ಭೋಸ್ಲೆ, ಡಾ.ರವೀಂದ್ರ ಕುಂಬಾರ, ಡಾ.ಜ್ಯೋತಿ ಕಿರಣಗಿ, ಡಾ.ಶಾಮರಾವ, ಗೌಸಿಯಾ ಬೇಗಂ, ಡಾ.ಸವಿತಾ ಪಾಟೀಲ, ಶ್ರವಣಕುಮಾರಿ, ಡಾ.ಅವಿನಾಶ ಇತರರು ಇದ್ದರು.
ವಿದ್ಯಾರ್ಥಿನಿ ಶ್ರೀದೇವಿ ಪ್ರಾರ್ಥಿಸಿದರು, ಡಾ.ಜಗದೇವಪ್ಪ ಧರಣಿ ಪ್ರಾಸ್ತಾವಿಕವಾಗಿ ಮಾತನಾಡಿದರು, ಡಾ. ಮಹಮದ್ ಯೂನಿಸ್ ಸ್ವಾಗತಿಸಿದರು, ಜಗಪ್ಪ ತಳವಾರ ವಂದಿಸಿದರು.
ಕೋಟ್
ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಯುವ ಜನತೆ ವೈಜ್ಞಾನಿಕ ಮನೋಭಾವ ಬೆಳೆಸಿಕೊಳ್ಳಬೇಕು, ಶೋಷಿತರ, ಬಡವರ ಕಣ್ಣಿರುವ ಒರೆಸುವ ಕೆಲಸಕ್ಕೆ ಮುಂದಾಗಬೇಕು.