ಭೂಮಾಪಕರ ಮೇಲಿನ ಹಲ್ಲೆ ಖಂಡಿಸಿ ಆಡಳಿತ ಸೌಧದ ಎದುರು ಧರಣಿ..!
ಇಂಡಿ : ಸರಕಾರಿ ರಸ್ತೆ ಅಳತೆ ಮಾಡಲು ಸಲುವಾಗಿ ತೆರಳಿದ ಭೂಮಾಪಕರ ಮೇಲೆ ನಡೆದಿರುವ ಘಟನೆ ಖಂಡಿಸಿ ತಾಲ್ಲೂಕು ಆಡಳಿತ ಸೌಧದ ಎದುರು ಇಂಡಿ, ಚಡಚಣ ಹಾಗೂ ಸಿಂದಗಿ ಭೂಮಾಪಕರ ಸಂಘಟನೆ ವತಿಯಿಂದ ಧರಣಿ ಪ್ರತಿಭಟನೆ ನಡೆಸುತ್ತಿದ್ದಾರೆ.
ಬುಧವಾರ ಪಟ್ಟಣದಲ್ಲಿರುವ ಆಡಳಿತ ಸೌಧದ ಎದುರು ಬೆಳಿಗ್ಗೆ ಯಿಂದಲೇ ಪ್ರತಿಭಟನೆ ನಡೆಸುತ್ತಿದು, ಹಲ್ಲೆ ಮಾಡಿದ ಆರೋಪಿಗಳನ್ನು ಕೂಡಲೇ ಬಂಧಿಸಿ ಎಂದು ತೀವ್ರವಾಗಿ ಪ್ರತಿಭಟನೆ ನಡೆಸಿ ತಹಶಿಲ್ದಾರ ಗ್ರೇಡ್-2 ಧನಪಾಲಶೆಟ್ಟಿ ದೇವೂರ ಅವರ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಿದರು.
ಹೌದು ಚಡಚಣ ತಹಶಿಲ್ದಾರ ಆದೇಶದ ಮೇರೆಗೆ ಮಂಗಳವಾರ ಲೋಣಿ ಬಿ.ಕೆ ಗ್ರಾಮದಿಂದ ಜೇವೂರ ರಸ್ತೆಯ ಮಾರ್ಗದ ಅಳತೆ ಮಾಡುವಾಗ ಕೆಲಸಕ್ಕೆ ಅಡ್ಡಿ ಪಡಿಸಿ ಏಕಾ-ಏಕಿ ಸರಕಾರಿ ಭೂಮಾಪಕ ಮಹಾಂತಪ್ಪ ಶ್ರೀಶೈಲ ಎಂಬುವರು ಮೇಲೆ ಮಾರಣಾಂತಿಕ ಹಲ್ಲೆ ನಡೆದಿದ್ದು ತೀವ್ರ ಖಂಡಿಸುತ್ತೆವೆ ಭೂಮಾಪಕರ ಸಂಘಟನೆ ಪದಾಧಿಕಾರಿಗಳು ನೋವನ್ನು ತೊಡಗಿಕೊಂಡರು.
ಇನ್ನೂ ಈ ಸಂದರ್ಭದಲ್ಲಿ ಇಂಡಿ ತಾಲ್ಲೂಕು ಭೂಮಾಪಕರ ಸಂಘದ ಅಧ್ಯಕ್ಷ ಯಮನೇಶ ಬಿರಾದಾರ ಮಾತನಾಡಿ ತಹಶಿಲ್ದಾರ ಆದೇಶದ ಮೇರೆಗೆ, ಕಾನೂನಿನ ಚೌಕಟ್ಟಿನಲ್ಲಿ ಕೆಲಸ ಮಾಡುತ್ತೀರುವ ಸರಕಾರಿ ಭೂಮಾಪಕರ ಮೇಲೆ ಹಲ್ಲೆ ಮಾಡಿದ್ದು, ತಾಲೂಕಿನಲ್ಲಿ ಅಮಾನವೀಯ ಘಟನೆ ನಡೆದಿದೆ. ಇದನ್ನು ತೀವ್ರ ವಾಗಿ ಖಂಡಿಸುತ್ತವೆ ಎಂದು ಹೇಳಿದರು. ಈ ರೀತಿಯ ಹಲ್ಲೆಯಿಂದ ಸರಕಾರಿ ನೌಕರಸ್ಥರು ಭಯಭೀತಿಯಿಂದ ಹಾಗೂ ಮಾನಸಿಕವಾಗಿ ಕುಗ್ಗಿದ್ದಾರೆ. ರಾಜ್ಯದಲ್ಲಿ ಸರಕಾರಿ ನೌಕರಸ್ಥರ ಮೇಲೆ ಪದೆ ಪದೆ ಇಂತಹ ಹಲ್ಲೆಗಳು ನಡೆಯುತ್ತಿರುವುದು ಬೇಜಾರಿನ ಸಂಗತಿ. ಈ ಕೂಡಲೇ ಹಲ್ಲೆ ಮಾಡಿರುವ ವ್ಯಕ್ತಿ ವಿಕಾಸ ಪಾಟೀಲ ಹಾಗೂ ಇತರರನ್ನು ಶೀಘ್ರವೇ ಬಂಧಿಸಿ ಕಾನೂನು ವ್ಯಾಪ್ತಯಡಿಯಲ್ಲಿ ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳಬೇಕು. ಅದಲ್ಲದೇ ಇಂತಹ ಘಟನೆ ನಡೆಯದಂತೆ ಅವಶ್ಯ ಕ್ರಮ ವಹಿಸಿ ನೌಕರರ ಮನೋಬಲ ಹೆಚ್ಚಿಸುವ ಕಾರ್ಯವಾಗಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಯಲ್ಲಪ್ಪ ಚಾಂದಕವಟೆ, ನವಿನ ನಾಯಕ, ಶ್ರೀನಿವಾಸ ಬಜಂತ್ರಿ,, ಸುರೇಶ ವಗ್ಗರ, ವಿಶ್ವನಾಥ ಬಂಕಲಗಿ, ವಿಶ್ವನಾಥ ಬಡಿಗೇರ, ಬಸವರಾಜ ನಾಡಗೌಡ, ಗೊಲ್ಲಾಳ ಖೈನೂರ, ಸುಭಾಷ್ ಲವಟೆ ಸೇರಿದಂತೆ ಇನ್ನೂ ಅನೇಕರು ಉಪಸ್ಥಿತರಿದ್ದರು.