ರಾಯಚೂರು : ಕಳೆದ 15 ದಿನಗಳಿಂದ ಕಲುಷಿತ ನೀರು ಪೂರೈಕೆ ಮೂವರ ಸಾವಿಗೆ ಕಾರಣವಾದ ಅಧಿಕಾರಿಗಳನ್ನು ಸೇವೆಯಿಂದ ವಜಾಗೊಳಿಸಬೇಕು ಹಾಗೂ ಅವರ ಮೇಲೆ ಕ್ರಿಮಿನಲ್ ಮೊಕದ್ದಮೆಯನ್ನು ದಾಖಲಿಸಿ ಆಡಳಿತ ಮಂಡಳಿಯನ್ನು ಸೂಪರ್ ಸೀಡ್ ಮಾಡಬೇಕು ಎಂದು ಒತ್ತಾಯಿಸಿ ದಲಿತ ಮಹಾಸಭಾ ಮುಖಂಡರು ಜಿಲ್ಲಾಡಳಿತ ಮೂಲಕ ಪೌರಾಡಳಿತ ಸಚಿವರಿಗೆ ಮನವಿ ಸಲ್ಲಿಸಿ ಒತ್ತಾಯಿಸಿದರು.
ನಗರದಲ್ಲಿರುವ ಎಲ್ಲಾ ಕೆರೆ ಕಾಲುವೆ ಮತ್ತು ರಾಜಾಕಾಲುವೆಗಳ ಒತ್ತುವರಿಯನ್ನು ತೆರುವುಗೊಳಿಸಿ ಸ್ವಚ್ಛಗೊಳಿಸಬೇಕು.ಮೃತರ ಕುಟುಂಬಕ್ಕೆ ತಲಾ ೨೫ ಲಕ್ಷ ಪರಿಹಾರ ನೀಡಬೇಕು. ಅಸ್ವಸ್ಥಗೊಂಡವರಿಗೆ ಅಸ್ಪೆತ್ರೆಯ ಖರ್ಚುವೆಚ್ಚಗಳನ್ನು ಸರಕಾರ ಜಿಲ್ಲಾಡಳಿತ ನಗರಾಭೆಯೇ ಭರಿಸಬೇಕು.ಕೂಡಲೇ ಸರ್ಕಾರ ನಗರಸಭೆಗೆ ವಿಭಾಗವಾರು ಅರ್ಹ ಖಾಯಂ ಸಿಬ್ಬಂದಿಯನ್ನು ನೇಮಿಸಬೇಕು ಎಂದು ಒತ್ತಾಯಿಸಿದರು. ಕಳೆದ ೫ ವರ್ಷಗಳ ಹಿಂದಿನದಿಂದ ಆಡಿಟ್ ಮಾಡಿಸಿ ನಗರಸಭೆಯಲ್ಲಿಯಾದ ಬ್ರಷ್ಟಾಚಾರದ ಬಗ್ಗೆ ತನಿಖೆ ನಡೆಸಬೇಕು.
ಕಲುಷಿತ ನೀರು ಪೂರೈಕೆ ಮಾಡಿದ ನಗರಸಭೆಯನ್ನು ಕೂಡಲೇ ಸೂಪರ್ ಸೀಡ್ ಮಾಡಬೇಕು ಹಾಗೂ ಸಂಬಂದಪಟ್ಟ ಅಧಿಕಾರಿಗಳನ್ನು ಸೇವೆಯಿಂದ ವಜಾಗೊಳಿಸಿ ಅವರ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಕೆ.ಈ ಕುಮಾರ,ಶಂಕರ ನಂದಿಹಾಳ ಇದ್ದರು.