ಇಂಪ್ರೆಶನ್-೨೦೨೫’ ಮಾಧ್ಯಮ ಹಬ್ಬ..!
ವಿಜಯಪುರ: ತುಮಕೂರು ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ ಹಾಗೂ ವಿವಿ ಕಲಾ ಕಾಲೇಜಿನ ಪತ್ರಿಕೋದ್ಯಮ ವಿಭಾಗ ಜಂಟಿಯಾಗಿ ಹಮ್ಮಿಕೊಂಡಿದ್ದ ‘ಇಂಪ್ರೆಶನ್-೨೦೨೫’ ಮಾಧ್ಯಮ ಹಬ್ಬದಲ್ಲಿ ಮಹಿಳಾ ವಿವಿಯ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ವಿದ್ಯಾರ್ಥಿನಿಯರು “ಸಮಗ್ರ ಛಾಂಪಿಯನ್‌ಶಿಪ್” ಗಳಿಸಿದ್ದಾರೆ.
ತುಮಕೂರಿನಲ್ಲಿ ಎರಡು ದಿನಗಳ ಕಾಲ ನಡೆದ ‘ಇಂಪ್ರೆಶನ್-೨೦೨೫’ ಮಾಧ್ಯಮ ಹಬ್ಬದಲ್ಲಿ ಮಾಧ್ಯಮಕ್ಕೆ ಸಂಬAಧಿಸಿದ ಹಲವಾರು ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ರಾಜ್ಯದ ವಿವಿಧ ವಿಶ್ವವಿದ್ಯಾಲಯ ಮತ್ತು ಕಾಲೇಜುಗಳ ೩೦ಕ್ಕೂ ಹೆಚ್ಚು ತಂಡಗಳು ಈ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದವು. ಈ ಸ್ಪರ್ಧೆಗಳಲ್ಲಿ ಮಹಿಳಾ ವಿವಿಯ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ವಿದ್ಯಾರ್ಥಿನಿಯರು ಹಲವು ಬಹುಮಾನಗಳನ್ನು ಗಳಿಸಿದ್ದಾರೆ.
ಬಹುಮಾನಗಳ ವಿವರ: ಜ್ಯೋತಿ ಎಸ್,- ಟಿವಿ ಸುದ್ದಿ ನಿರೂಪಣೆಯಲ್ಲಿ (ಪ್ರಥಮ), ಶಿಲ್ಪಾ ಪವಾರ- ಪುಟ್ಟಕತೆಯಲ್ಲಿ (ಪ್ರಥಮ), ಅಸ್ಮಾ ಪಲ್ಠನ್- ರೀಲ್ಸ್ ನಿರ್ಮಾಣದಲ್ಲಿ (ಪ್ರಥಮ), ಜ್ಯೋತಿ ಎಸ್- ಪಿಟಿಸಿಯಲ್ಲಿ (ತೃತೀಯ), ಭಸಮ್ಮಾ ಹಾಗೂ ಜ್ಯೋತಿ ಎಸ್ ಚರ್ಚಾಸ್ಪರ್ಧೆಯಲ್ಲಿ (ದ್ವಿತೀಯ), ಮೇಘಪುಷ್ಪಾ, ವಿದ್ಯಾಶ್ರೀ, ಅನ್ನಪೂರ್ಣಾ, ರಾಜೇಶ್ವರಿ ಹಾಗೂ ರತ್ನಾಂಜಲಿ ಜಾಹೀರಾತು ನಿರ್ಮಾಣದಲ್ಲಿ (ತೃತೀಯ) ಸ್ಥಾನ ಪಡೆದಿದ್ದಾರೆ.
ಸಮಗ್ರ ಚಾಂಪಿಯನ್ ಗಳಿಸಿರುವ ವಿದ್ಯಾರ್ಥಿನಿಯರನ್ನು ಹಂಗಾಮಿ ಕುಲಪತಿ ಪ್ರೊ.ನಾಮದೇವಗೌಡ, ಕುಲಸಚಿವ ಶಂಕರಗೌಡ ಸೋಮನಾಳ ಹಾಗೂ ಮೌಲ್ಯಮಾಪನ ಕುಲಸಚಿವ ಪ್ರೊ.ಚಂದ್ರಶೇಖರ, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಮುಖ್ಯಸ್ಥ ಪ್ರೊ.ಓಂಕಾರ ಕಾಕಡೆ ಅಭಿನಂದಿಸಿದ್ದಾರೆ.
ಈ ವಿದ್ಯಾರ್ಥಿನಿಯರ ತಂಡದ ಜತೆಗೆ ಸಹಾಯಕ ಪ್ರಾಧ್ಯಾಪಕರಾದ ಡಾ.ತಹಮೀನಾ ನಿಗಾರ ಸುಲ್ತಾನಾ, ಸಂದೀಪ್, ಅತಿಥಿ ಉಪನ್ಯಾಸಕರಾದ ಸುಷ್ಮಾ ಪವಾರ, ಫಿಲೋಮಿನಾ ಮತ್ತು ಪವಿತ್ರಾ ಕಂಬಾರ ಇದ್ದರು ಎಂದು ವಿವಿ ಪ್ರಕಟಣೆ ತಿಳಿಸಿದೆ.