ಅಫಜಲಪುರ: ಗ್ರಾಮೀಣ ಭಾಗದ ಜನರ ಸಮಸ್ಯೆಗಳಿಗೆ ಸ್ಪಂದಿಸಿ ತಕ್ಷಣ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಮಹತ್ವಾಕಾಂಕ್ಷೆ ಯೋಜನೆ ಜಾರಿಗೆ ತಂದಿರುವ ವಿದ್ಯುತ್ ಅದಾಲತ್ ಸಹಕಾರಿಯಾಗಲಿದೆ ಎಂದು ಜೆಸ್ಕಾಂ ಎಇಇ ನಾಗರಾಜ ಹೇಳಿದರು.
ಅವರು ತಾಲೂಕಿನ ಶೇಷಗಿರಿ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ವಿದ್ಯುತ್ ಅದಾಲತ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಸರ್ಕಾರದ ಯೋಜನೆಗಳು ಜನರಿಗೆ ತ್ವರಿತವಾಗಿ ತಲುಪಬೇಕು. ಜನರ ಸಮಸ್ಯೆಗಳಿಗೆ ಅಧಿಕಾರಿಗಳು ತಕ್ಷಣ ಸ್ಪಂದಿಸಬೇಕೆಂಬ ಉದ್ದೇಶದಿಂದ ಇಂಧನ ಇಲಾಖೆ ಅಡಿಯಲ್ಲಿ ಪ್ರತಿ ತಿಂಗಳು ಮೂರನೇ ಶನಿವಾರ ಎಲ್ಲ ಜೆಸ್ಕಾಂ ವ್ಯಾಪ್ತಿಯಲ್ಲಿ ವಿದ್ಯುತ್ ಅದಾಲತ್ ನಡೆಯಲಿದೆ.
ಪರಿಶಿಷ್ಠ ಜಾತಿ ಪರಿಶಿಷ್ಟ ಪಂಗಡದವರಿಗೆ ಪ್ರತಿ ತಿಂಗಳು 75 ಯುನಿಟ್ ಉಚಿತ ವಿದ್ಯುತ್ ನೀಡಲಾಗುವುದು. ಮನೆಯಲ್ಲಿ ವಿದ್ಯುತ್ ಮೀಟರ್ ಇರದವರಿಗೆ ಬೆಳಕು ಯೋಜನೆ ಅಡಿಯಲ್ಲಿ ಮೀಟರ ಕೊಡುವ ಯೋಜನೆ ಕೂಡ ಇಲಾಖೆಯಲ್ಲಿದೆ. ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು. ವಿದ್ಯುತ್ ಅದಾಲತ್ ಮೂಲಕ ಗ್ರಾಮೀಣ ವಿದ್ಯುತ್ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸಲು ವ್ಯವಸ್ಥೆ ಕಲ್ಪಿಸಲಾಗುತ್ತಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಕರಜಗಿ ಶಾಖಾಧಿಕಾರಿ ಪಾಂಡುರಂಗ
ಸುತಾರ, ಚಿದಾನಂದ ಕೊಳ್ಳಿ, ಕಾವ್ಯಾ, ಮಹಾದೇವಗೌಡ ಪೋಲಿಸ್ ಪಾಟೀಲ (ಶಿರನಾಳ) ಗ್ರಾಮ ಪಂಚಾಯತ್ ಸದಸ್ಯರಾದ ಪರಮೇಶ್ವರ ವಳಸಂಗ, ಸಂತೋಷ ಅವಟೆ, ಶ್ರೀಶೈಲ ಚಾಂಬರ, ಮುಖಂಡರಾದ ಅಂಬೋಜಿ ಮಂಗಳೂರ, ಅಂಬಣ್ಣ ಅಂಕಲಗಿ, ಕಾಶೀನಾಥ ಯಾದವಾಡ, ಅಶೋಕ ಹಿಳ್ಳಿ, ದತ್ತಾತ್ರಯ ಮಾತನಳ್ಳಿ, ಜೆಸ್ಕಾಂ ಸಿಬ್ಬಂದಿಳಾದ ಚಂದ್ರಕಾಂತ ಹಳಗೋದಿ, ನಿಂಗಪ್ಪ ನಾವಾಡಿ, ಸಂಗು ಚಿಕ್ಕಮಣೂರ ರಾಜಕುಮಾರ ಅಂಬಿಗರ,(ನಾವಾಡಿ) ಸೇರಿದಂತೆ ಗ್ರಾಮಸ್ಥರಿದ್ದರು.
ವರದಿ: ಉಮೇಶ್ ಅಚಲೇರಿ ವಾಯ್ಸ್ ಆಫ್ ಜನತಾ ಕಲಬುರಗಿ: