ತಾಲೂಕು ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಸಭೆ ಆಯೋಜನೆ
ತಿಕೋಟಾ: ಇಂದು ದಿನಾಂಕ ೦೬.೦೮.೨೦೨೫ ರಂದು ಲೋಹಗಾಂವ ಗ್ರಾಮದಲ್ಲಿ ತಾಲೂಕು ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಸಭೆಯಲ್ಲಿ ತಾಲೂಕು ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಅಧ್ಯಕ್ಷರಾದ ಗುರುಪಾದಗೌಡ ಸಿದ್ದನಗೌಡ ದಾಶ್ಯಾಳ ಇವರು ಹೆಣ್ಣು ಮಕ್ಕಳಿಗೆ ಶಿಕ್ಷಣ ಒದಗಿಸಲೂ ಸಹ ಹಿಂದೇಟು ಹಾಕುವಂತಹ ವ್ಯವಸ್ಥೆ ಆಗಿನ ಕಾಲದಲ್ಲಿತ್ತು. ಈ ನಿಟ್ಟಿನಲ್ಲಿ ಆರ್ಥಿಕ ಅಸಮಾನತೆ, ಸಾಮಾಜಿಕ ಅಸಮಾನತೆ, ಲಿಂಗ ಅಸಮಾನತೆ ಮತ್ತು ಶೈಕ್ಷಣಿಕ ಅಸಮಾನತೆ ವ್ಯವಸ್ಥೆಯನ್ನು ಹೋಗಲಾಡಿಸಲು ಮತ್ತು ಉತ್ತಮ ಗುಣಮಟ್ಟದ ಜೀವನ ನಡೆಸಲು ಸರ್ಕಾರ ಹತ್ತು ಹಲವಾರು ಕಾರ್ಯಕ್ರಮಗಳನ್ನು ಜಾರಿಗೆ ತಂದಿದೆ. ಅಷ್ಟೇ ಅಲ್ಲದೆ ಗ್ರಾಮೀಣ ಮಟ್ಟದಲ್ಲಿ ಇನ್ನೂ ಅಭಿವೃದ್ಧಿ ತರುವ ನಿಟ್ಟಿನಲ್ಲಿ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದೆ ಎಂದು ಹೇಳಿದ್ದಾರೆ.
ಈ ವೇಳೆ ಮಾತನಾಡಿದ ಅಧ್ಯಕ್ಷರು, ಪ್ರತಿ ಮನೆಮನೆಗೂ ಜನಪರ ಯೋಜನೆಯಂತಹ ಗ್ಯಾರಂಟಿ ಯೋಜನೆಗಳನ್ನು ತಲುಪಿಸಲು ರಾಜ್ಯ, ಜಿಲ್ಲೆ ಮತ್ತು ತಾಲೂಕು ಮಟ್ಟಗಳಲ್ಲಿ ಗ್ಯಾರಂಟಿ ಯೋಜನೆಯ ಸಮಿತಿಗಳನ್ನು ಅನುಷ್ಠಾನ ಮಾಡಲಾಗಿದೆ. ಬಡತನದಿಂದ ಬಳಲುತ್ತಿರುವ ಕುಟುಂಬಗಳಿಗೆ ಆಹಾರ ಭದ್ರತೆ ಒದಗಿಸಲು ಮತ್ತು ಯಾರೊಬ್ಬರೂ ಸಹ ಹಸಿವಿನಿಂದ ಬಳಲಬಾರದು ಎಂಬ ಉದ್ದೇಶದಿಂದ ಅಂತಹವರಿಗೆ ಸರ್ಕಾರವು ಅನ್ನಭಾಗ್ಯ ಯೋಜನೆಯನ್ನು ಜಾರಿಗೆ ತಂದಿತು. ಇದೇ ನಿಟ್ಟಿನಲ್ಲಿ ಮಹಿಳೆಯರು ಸ್ವಾವಲಂಬಿಗಳಾಗಬೇಕು ಮತ್ತು ಆರ್ಥಿಕವಾಗಿ ಅಭಿವೃದ್ಧಿ ಹೊಂದಬೇಕು, ಸಮಾಜದಲ್ಲಿ ಅವರಿಗೂ ಸಹ ಗೌರವ ಸಲ್ಲಲಿ ಎಂಬ ಉದ್ದೇಶದಿಂದ ಗ್ಯಾರಂಟಿ ಯೋಜನೆಯ ಮೂಲಕ ಪ್ರತಿ ಕುಟುಂಬದ ಯಜಮಾನಿಗೆ ಪ್ರತಿ ಮಾಹೆ ರೂ. ೨೦೦೦/- ಗಳನ್ನು ವಿತರಿಸುವ ಮಹತ್ತರ ಯೋಜನೆಯನ್ನು ಜಾರಿಗೆ ತಂದಿದೆ. ಜೊತೆಗೆ ಶಕ್ತಿ ಯೋಜನೆ, ಗೃಹ ಜ್ಯೋತಿ ಮತ್ತು ಯುವನಿಧಿಗಳಂತಹ ಮಹತ್ವಾಕಾಂಕ್ಷಿ ಕಾರ್ಯಕ್ರಮಗಳನ್ನು ಸರ್ಕಾರ ಜಾರಿಗೆ ತಂದಿದೆ. ಬಡಜನರ ಜೀವನವು ಅತ್ಯಂತ ಸುಖಕರವಾಗಿ ನಡೆಯುತ್ತಿದೆ, ಸಾಕಷ್ಟು ಕಷ್ಟಗಳನ್ನು ಅನುಭವಿಸಿದ ಕುಟುಂಬಗಳು ಈಗ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ ಇದಕ್ಕೆ ಪಂಚ ಗ್ಯಾರಂಟಿಗಳೇ ಕಾರಣ. ನಿರುಧ್ಯೋಗಿ ಯುವ ಜನತೆಯ ಬಾಳಲ್ಲಿ ಬೆಳಕಾಗುವ ಉದ್ದೇಶದಿಂದ ಯುವನಿಧಿ ಯೋಜನೆ ಜಾರಿಗೆ ತರಲಾಗಿದೆ. ಈ ಯೋಜನೆಯನ್ನು ಕೇವಲ ನಾಮಕಾವಸ್ತೆ ಜಾರಿಗೆ ತರದೇ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಇದರ ಲಾಭ ಸಿಗುವಂತೆ ಮಾಡುವುದೇ ಇದರ ಉದ್ದೇಶ. ನಮ್ಮ ತಾಲೂಕಿನ ಅನುಷ್ಠಾನ ಸಮಿತಿಯು ತುಂಬಾ ಕ್ರೀಯಾಶೀಲವಾಗಿದ್ದು, ಸಮಸ್ಯೆಯನ್ನು ಹೇಳಿಕೊಂಡು ಬರುವ ಫಲಾನುಭವಿಗಳಿಗೆ ಕೇವಲ ೧೫ ನಿಮಿಷದಲ್ಲಿಯೇ ಪರಿಹಾರ ನೀಡುತ್ತಿದ್ದೇವೆ. ಸಮಸ್ಯೆಗಳನ್ನು ವ್ಯಾಟ್ಸಾಫ್ ಮೂಲಕ ಸಲ್ಲಿಸಿದರೂ ಸಹಿತ ೧೫ ನಿಮಿಷದಲ್ಲಿ ಪರಿಹಾರ ನೀಡಲಾಗುತ್ತಿದೆ. ಈ ಕಾರ್ಯಕ್ಕೆ ಸಾರ್ವಜನಿಕರೂ ಸಹ ಬೆಂಬಲ ನೀಡಬೇಕು. ಈ ಎಲ್ಲ ಯೋಜನೆಗಳು ಪರಿಣಾಮಕಾರಿಯಾಗಿ ಯಶಸ್ವಿಯಾಗಲು ಅಧಿಕಾರಿಗಳ ಪಾತ್ರ ಬಹಳ ಮಹತ್ತರವಾದದ್ದು. ಅಧಿಕಾರಿಗಳು ಜವಾಬ್ದಾರಿಯುತವಾಗಿ ತಮ್ಮ ಕರ್ತವ್ಯ ನಿರ್ವಹಿಸಿದ್ದಕ್ಕೆ ಜಿಲ್ಲೆಯಲ್ಲಿಯೇ ಗ್ಯಾರಂಟಿ ಯೋಜನೆಗಳ ಅನುಷ್ಠಾನದಲ್ಲಿ ತಿಕೋಟಾ ತಾಲೂಕು ಪ್ರಥಮ ಹಂತದಲ್ಲಿದೆ ಇದು ನಮಗೆ ಹೆಮ್ಮೆಯ ವಿಷಯ. ಗ್ರಾಮ ಪಂಚಾಯಿತಿಯು ಒಂದು ಸ್ಥಳೀಯ ಸರ್ಕಾರ ಸ್ಥಳೀಯ ಮಟ್ಟದಲ್ಲಿ ಆಡಳಿತ ವರ್ಗ ಮತ್ತು ಅಧಿಕಾರಿ ವರ್ಗ ಇಬ್ಬರು ಸಹ ಸಮನ್ವಯ ಸಾಧಿಸಿ ಉತ್ಸಾಹದಿಂದ ತಮ್ಮ ಕರ್ತವ್ಯ ನಿರ್ವಹಿಸಿದಲ್ಲಿ ಗ್ರಾಮಗಳು ಅಭಿವೃದ್ಧಿಯತ್ತ ಸಾಗುತ್ತದೆ ಎಂದರು.
ಮಾನ್ಯ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲಸೌಲಭ್ಯ ಅಭಿವೃದ್ದಿ ಸಚಿವರು ಮತ್ತು ವಿಜಯಪುರ ಜಿಲ್ಲೆಯ ಉಸ್ತುವಾರಿ ಸಚಿವರಾದ ಡಾ. ಎಂ. ಡಿ. ಪಾಟೀಲ ರವರು ವಿಜಯಪುರ ಜಿಲ್ಲೆಗೆ ನೀರಾವರಿ ಯೋಜನೆ, ಕೋಟಿ ವೃಕ್ಷ ಅಭಿಯಾನ, ಶಿಕ್ಷಣ ಹಾಗೂ ಔದ್ಯೋಗಿಕರಣದಂತಹ ಯೋಜನೆಗಳನ್ನು ಜಾರಿಗೆ ತಂದಿರುವ ಪರಿಣಾಮ ಜಿಲ್ಲೆಯ ರೈತರು ಹಾಗೂ ಸಾರ್ವಜನಿಕರಿಗೆ ಉದ್ಯೋಗ ಅವಕಾಶ ದೊರಕಿದೆ ಮತ್ತು ಆರ್ಥಿಕ ಸ್ಥಿತಿಗತಿ ಸುಧಾರಿಸಿದೆ ಜೊತೆಗೆ ಗ್ರಾಮೀಣ ಜನರು ನೆಮ್ಮದಿಯ ಬದುಕು ಕಟ್ಟಿಕೊಂಡಿದ್ದಾರೆ ಎಂದರು .
ಈ ವೇಳೆ ವಿಜಯಪುರದಿಂದ ಇಟ್ಟಂಗಿಹಾಳ ಲೋಹಗಾಂವ ಮಾರ್ಗವಾಗಿ ತಿಕೋಟಾ ವರೆಗೂ ಬೆಳಿಗ್ಗೆ ಎರಡು ಬಸ್ಸು ಮತ್ತು ಮಧ್ಯಾಹ್ನ ಎರಡು ಬಸ್ಸುಗಳನ್ನು ಎರಡು ಟ್ರಿಪ್ ರಂತೆ ಬಸ್ ಗಳನ್ನು ಬಿಡಲು ಇಲ್ಲಿನ ಶಾಲಾ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರ ಮನವಿ ಸಲ್ಲಿಸಿದ್ದರಿಂದ ಈ ಬೇಡಿಕೆಯನ್ನು ಕೂಡಲೇ ಪರಿಹರಿಸಲು ಗ್ಯಾರಂಟಿ ಯೋಜನೆಯ ತಾಲೂಕು ಮಟ್ಟದ ಸಮಿತಿಯ ಅಧ್ಯಕ್ಷರು ಖುದ್ದಾಗಿ ದೂರವಾಣಿ ಕರೆ ಮಾಡುವ ಮೂಲಕ ಜಿಲ್ಲಾ ವಿಭಾಗೀಯ ನಿಯಂತ್ರಣಾಧಿಕಾರಿಗಳು ವಿಜಯಪುರ ಇವರಿಗೆ ಸೂಚಿಸಿದರು.
ಈ ಸಂದರ್ಭದಲ್ಲಿ ತಾಲೂಕು ಯೋಜನಾಧಿಕಾರಿಗಳಾದ ಆಯೇಷಾ ಸಾಲೋಟಗಿ, ಗ್ಯಾರಂಟಿ ಯೋಜನೆಯ ಸದಸ್ಯರಾದ ಗಂಗೂಬಾಯಿ ಮಡದಾನ, ಮುತ್ತು ಹಿರೇಮಠ, ಥಾವರು ಮೇಗು ರಾಠೋಡ, ಗ್ರಾ. ಪಂ. ಅಧ್ಯಕ್ಷರಾದ ಕಮಲಾಬಾಯಿ ಪಿಂಟು ಲಮಾಣಿ, ಗ್ರಾ.ಪಂ. ಉಪಾಧ್ಯಕ್ಷರಾದ ಯಶವಂತ ಖರಾತ, ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳಾದ ಎಸ್. ಎಸ್ ಮ್ಯಾಗೇರಿ, ಗ್ರಾ.ಪಂ. ಅಭಿವೃದ್ಧಿ ಅಧಿಕಾರಿಗಳಾದ ಪದ್ಮಿನಿ ಬಿರಾದಾರ, ತಾಲೂಕು ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ವಿಷಯ ನಿರ್ವಾಹಕರಾದ ರೀತಾ ಮೌರ್ಯ, ಗ್ರಾ. ಪಂ. ಸದಸ್ಯರಾದ ಅಪ್ಪಾರಾಯಗೌಡ ಬಗಲಿ, ರಾಜು ಬಿರಾದಾರ, ಅಶೋಕ ರಾಠೋಡ ಹಾಗೂ ಗ್ರಾಮ ಪಂಚಾಯಿತಿ ಸರ್ವ ಸದಸ್ಯರು, ತಾಲೂಕು ಮಟ್ಟದ ಅನುಷ್ಠಾನ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿಯವರು, ಸಾರ್ವಜನಿಕರು ಹಾಗೂ ಇತರರು ಉಪಸ್ಥಿತರಿದ್ದರು.