ಚವನಭಾವಿ ಗ್ರಾಮದಲ್ಲಿ ಕಳೆದ ಎರಡು ತಿಂಗಳಿಂದ ಶುದ್ದ ಕುಡಿಯುವ ನೀರಿನ ಘಟಕ ಸ್ಥಗಿತವಾಗಿದ್ದು ಗ್ರಾಮಸ್ಥರಿಗೆ ಇದರಿಂದ ತೊಂದರೆಯಾಗಿದ್ದು ಕೂಡಲೇ ಶುದ್ದೀಕರಣ ಘಟಕ ಪುನಾರಂಭಕ್ಕೆ ಒತ್ತಾಯ
ಚವನಭಾವಿ ಗ್ರಾಮದ ಶುದ್ದ ಕುಡಿಯುವ ನೀರಿನ ಘಟಕ ಸ್ಥಗಿತದಿಂದ ಗ್ರಾಮಸ್ಥರಿಗೆ ತೊಂದರೆ.
ವರದಿ : ಬಸವರಾಜ ಕುಂಬಾರ, ಮುದ್ದೇಬಿಹಾಳ ವಿಜಯಪುರ
ಮುದ್ದೇಬಿಹಾಳ : ಶುದ್ಧೀಕರಣ ಕುಡಿಯುವ ನೀರಿನ ಘಟಕಕ್ಕೆ ಸರಕಾರ ಸಾಕಷ್ಟು ಅನುದಾನ ಖರ್ಚು ಮಾಡಿ ಘಟಕವನ್ನು ನಿರ್ಮಿಸಿದ್ದಾರೆ ಇದರ ಪ್ರಯೋಜನಕ್ಕೆ ಬರಲಿಲ್ಲ ಎಂದರೆ ಸಂಬಂದ ಪಟ್ಟ ಇಲಾಖೆ ಅಧಿಕಾರಿಗಳು ಗಮನಿಸಬೇಕಾಗುತ್ತದೆ.
ತಾಲ್ಲೂಕಿನ ಅಡವಿ ಸೋಮನಾಳ ಪಂಚಾಯತ ವ್ಯಾಪ್ತಿಯ ಚವನಭಾವಿ ಗ್ರಾಮದಲ್ಲಿ ಕಳೆದ ಎರಡು ತಿಂಗಳಿಂದ ಶುದ್ದ ಕುಡಿಯುವ ನೀರಿನ ಘಟಕ ಸ್ಥಗಿತವಾಗಿದ್ದು ಗ್ರಾಮಸ್ಥರಿಗೆ ಇದರಿಂದ ತೊಂದರೆಯಾಗಿದ್ದು ಕೂಡಲೇ ಶುದ್ದೀಕರಣ ಘಟಕ ಪುನಾರಂಭಕ್ಕೆ ಒತ್ತಾಯಿಸಿದ್ದಾರೆ.
ಈ ಕುರಿತು ಈಗಾಗಲೇ ತಾಪಂ ಇಒ, ಗ್ರಾಪಂ ಪಿಡಿಒ,ನೈರ್ಮಲ್ಯ ಮತ್ತು ಕುಡಿಯುವ ನೀರು ಸರಬರಾಜು ಅಧಿಕಾರಿಗಳ ಗಮನಕ್ಕೆ ತಂದರೂ ನೀರು ಶುದ್ದೀಕರಣ ಘಟಕ ರಿಪೇರಿ ಮಾಡಲು ಯಾವುದೇ ಕ್ರಮ ಕೈಗೊಳ್ಳದೆ ಇರುವುದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ.
ಚವನಭಾವಿ ಗ್ರಾಮದ ವಾಟರ್ ಫಿಲ್ಟರ್ ಸುತ್ತಮುತ್ತಲಿನ ಏಳೆಂಟು ಗ್ರಾಮಗಳಾದ ಚವನಭಾವಿ ಅಡವಿ ಸೋಮನಾಳ, ಅಡವಿ ಹುಲಗಬಾಳ,ತಾಂಡಾ, ಡೊಂಕಮಡು , ಕ್ಯಾತನಡೋಣಿ, ತಾಂಡಾ, ಮಲಗಲದಿನ್ನಿ ಗ್ರಾಮಗಳಿಗೆ ಆಸರೆಯಾಗಿತ್ತು ಮಾತ್ರವಲ್ಲದೆ ಹುಣಸಗಿ ಗಡಿ ತಾಲೂಕಿನ ಗ್ರಾಮಸ್ಥರು ಸಹ ನೀರು ಒಯ್ಯುತ್ತಿದ್ದರು .ಸದ್ಯ ಅಕಾಲಿಕ ಮಳೆಯಿಂದ ಕುಡಿಯುವ ನೀರು ಸರಬರಾಜು ವ್ಯತ್ಯಯವಾಗುತ್ತಿದೆ ಶುದ್ದ ನೀರಿಗಾಗಿ ಘಟಕ ಪುನಾರಂಭ ಮಾಡಬೇಕು ರಿಪೇರಿ ಮಾಡಲು ಸಂಬಂಧಿಸಿದ ಇಲಾಖೆಯವರು ಹಿಂದೇಟು ಹಾಕುತ್ತಿರುವುದೇಕೆ ? ಎಂಬ ಪ್ರಶ್ನೆ ಜನರಲ್ಲಿ ಕಾಡುತ್ತಿದ್ದು ಕೂಡಲೇ ನೀರು ಶುದ್ದೀಕರಣ ಘಟಕ ರಿಪೇರಿಮಾಡಿ ಜನರಿಗೆ ಅನುಕೂಲ ಮಾಡಿಕೊಡಬೇಕು ಇಲ್ಲದೆ ಇದ್ದಲ್ಲಿ ಗ್ರಾಪಂ ಬೀಗ ಹಾಕಿ ಪ್ರತಿಭಟಿಸಬೇಕಾಗುತ್ತದೆ ಎಂದು ಗ್ರಾಮಸ್ಥರಾದ ಯಲ್ಲಪ್ಪ ಕಾರಕೂರ,ಶಿವಪ್ಪ ಕಾರಕೂರ, ಗದ್ದೆಪ್ಪ ಮದರಿ ಮಾಲಪ್ಪ ಮದರಿ,ಬಸವರಾಜ ಕುಂಬಾರ, ಹಣಮಂತ ಗೋಗಿ, ಹಣಮಂತ ಈಳಗೇರ, ಮಾಲಪ್ಪ ನಾಲತವಾಡ ಸಣಬಸಪ್ಪ ಕುಂಬಾರ, ರಾಮಣ್ಣ ಈಳಗೇರ,ಭೀಮಣ್ಣ ಹಡಪದ,ಸೇರಿದಂತೆ ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ.
ಚವನಭಾವಿ ಗ್ರಾಮದ ಶುದ್ಧೀಕರಣ ಘಟಕ ಸ್ಥಗಿತಗೊಂಡ ಸುಮಾರು ಎರಡೂ ತಿಂಗಳ ಆದರೂ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಿಗೆ ಗ್ರಾಮಸ್ಥರು ತ ತಿಳಿಸಿದರು ರಿಪೇರಿ ಮಾಡಿಲ್ಲ, ಶುದ್ದ ಕುಡಿಯುವ ನೀರಿನ ಘಟಕವನ್ನು ನಮ್ಮ ಗ್ರಾಮ ಪಂಚಾಯತಿಗೆ ಹಸ್ತಾಂತರ ಮಾಡಲಿಲ್ಲ ಹಂತ ಅಭಿವೃದ್ಧಿ ಅಧಿಕಾರ ಹೇಳುತ್ತಾರೆ.
ಈಗಾಗಲೇ ಹಲವು ಬಾರಿ ನೈರ್ಮಲ್ಯ ಮತ್ತು ಕುಡಿಯುವ ನೀರು ಸರಬರಾಜು ಇಲಾಖೆಗೆ ಅಧಿಕಾರಿಗಳಿಗೆ ಗ್ರಾಪಂ ವತಿಯಿಂದ ಪತ್ರ ಬರೆಯಲಾಗಿದೆ ಎಂದು ಹೇಳಿದರು. ನಿರ್ಮಲಾ ತೋಟದ ಗ್ರಾಪಂ ಅಡವಿ ಪಿಡಿಒ
ಗ್ರಾಮದಲ್ಲಿ ಶುದ್ದ ಕುಡಿಯುವ ನೀರಿನ ಘಟಕ ವನ್ನು ಕೂಡಲೇ ರಿಪೇರಿ ಸಮಸ್ಯೆಯನ್ನು ಬಗೆಹರಿಸಲಿದ್ದರೆ ಗ್ರಾಮ ಪಂಚಾಯತಿಗೆ ಕಚೇರಿಗೆ ಬೀಗ ಹಾಕಿ ಪ್ರತಿಭಟನೆ ಎಚ್ಚರಿಕೆ ನೀಡಿದ್ದಾರೆ.
ಯಲ್ಲಪ್ಪ ಕಾರಕೂರ ಯುವ ಮುಖಂಡ ಚವನಭಾವಿ.