ಅಕ್ರಮ ಮಧ್ಯ ಮಾರಾಟ ನಿಷೇದಕ್ಕೆ ಅಗತ್ಯ ಕ್ರಮ ವಹಿಸಿ ಶಾಸಕ ಎಂಆರ್ ಮಂಜುನಾಥ್
ಹನೂರು :ಮಲೆ ಮಹದೇಶ್ವರ ಬೆಟ್ಟದಲ್ಲಿ ಸಂಪೂರ್ಣ ಮಧ್ಯ ಮಾರಾಟ ನಿಷೇದಕ್ಕೇ ಕ್ರಮ ಕೈಗೊಳ್ಳಲು ಶಾಸಕ ಎಂ ಆರ್ ಮಂಜುನಾಥ್ ಸೂಚಿಸಿದರು . ತಾಲೂಕಿನ ಪ್ರಸಿದ್ಧ ಯಾತ್ರಾ ಸ್ಥಳವಾದ ಶ್ರೀ ಮಲೆ ಮಹದೇಶ್ವರ ಬೆಟ್ಟದಲ್ಲಿ ಪ್ರಾಧಿಕಾರದ ಅಧಿಕಾರಿ ಗಳೊಂದಿಗೆ ಸಭೆ ಕರೆದು ಮಾತನಾಡಿ ನಮ್ಮ ಜಿಲ್ಲೆಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ಹೆಚ್ಚು ಹೊತ್ತು ನೀಡುತ್ತಿದ್ದೇವೆ .ಸಫಾರಿ ಯನ್ನು ಪ್ರಾರಂಭಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಮಲೈ ಮಹದೇಶ್ವರ ಬೆಟ್ಟದಲ್ಲಿ ಪ್ಲಾಸ್ಟಿಕ್ ಬಳಕೆಯನ್ನೂ ಸಂಪೂರ್ಣ ನಿಷೇಧಿಸಬೇಕು.
ತಾಳುಬೆಟ್ಟದಲ್ಲಿ ಮಧ್ಯ ಕಳ್ಳ ಸಾಗಣೆ ತಡೆಗಟ್ಟುವ ದೆಸೆಯಲ್ಲಿ ಕ್ರಮ ಕೈಗೊಳ್ಳಬೇಕು. ಖಾಸಗಿ ವಸತಿಗೃಹಗಳಲ್ಲಿ ನಡೆಯುವ ಅಕ್ರಮ ಗಳನ್ನು ತಡೆಗಟ್ಟಲು ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಪಂಚಾಯಿತಿ ವ್ಯಾಪ್ತಿಯಲ್ಲಿ ಆಗಿರುವ ಹಾಗೂ ಆಗಬೇಕಾಗಿರುವ ಕೆಲಸಗಳ ಬಗ್ಗೆ ಮಾಹಿತಿ ನೀಡಲು ಸೂಚಿಸಿದರು. ಬೆಟ್ಟದ ಸುತ್ತ ಮುತ್ತ ಶಾಲೆ ಮತ್ತು ಅಂಗನವಾಡಿಗಳಿಗೆ ಅಧಿಕಾರಿಗಳ ತಂಡವನ್ನು ರಚನೆ ಮಾಡಿ ಅಲ್ಲಿ ಎಲ್ಲಾ ರೀತಿಯ ಸೌಭ್ಯಗಳಿವೆಯ ಇಲ್ಲವೋ ಎಂಬುದನ್ನು ಗಮನವಹಿಸಬೇಕು.
ಈ ಕ್ಷೇತ್ರ ಸಂಪೂರ್ಣವಾಗಿ ಆರ್ಥಿಕವಾಗಿ ಹಿಂದುಳಿದ ಜನರಿದ್ದಾರೆ ಅವರನ್ನು ಅದರಿಂದ ಹೊರತರುವಂತ ಕೆಲಸವನ್ನು ಮಾಡಬೇಕು . ಮಧ್ಯ ಮಾರಾಟ ನಿಷೇಧ ಸೂಚನಾ ಫಲಕವನ್ನು ಅಲವಡಿ ಜನರಲ್ಲಿ ಅರಿವು ಮೂಡಿಸುವಸುವಂತೆ ಸೂಚಿಸಿದರು. ರಸ್ತೆಗಳ ಅಭಿವೃದ್ಧಿ ಹಾಗೂ ರಸ್ತೆಗಳ ಅಗಲೀಕರಣ ಮಾಡಲು ಅಗತ್ಯಕ್ರಮ ವಹಿಸಲು ತಿಳಿಸಿದರು . ದೇವಸ್ಥಾನ ಹತ್ತಿರ ಹೆಚ್ಚು ಸ್ಥಳವಕಾಶವನ್ನೂ ಕಲ್ಪಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಲ್ಲುವಂತೆ ತಿಳಿಸಿದರು. ಬೆಟ್ಟದ ಸುತ್ತ ಮುತ್ತವಿರುವ ಬೀದಿಬದಿ ವ್ಯಾಪಾರಿಗಳಿಗೆ ಸೂಕ್ತವಾದ ಸ್ಥಳ ಕಲ್ಪಿಸಲು ತಿಳಿಸಿದರು .
ಹಂದಿಗಳ ಹಾವಳಿ ಹೆಚ್ಚಾಗಿರುವುದರಿಂದ ಹಂದಿಗಳು ಮೋರಿ ಚರಂಡಿಗಳಲ್ಲಿ ಓಡಾಡುವುದರಿಂದ ಸಾಂಕ್ರಮಿಕ ರೋಗ ಹರಡುವ ಸಾಧ್ಯತೆ ಹೆಚ್ಚಾಗಿರುತ್ತದೆ ಅದನ್ನು ತಡೆಗಟ್ಟುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವಂತೆ ಸೂಚಿಸದರು. ಕಾಡು ಪ್ರಾಣಿಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವಂತಹ ಕೆಲಸ ಮಾಡಬೇಕು ಎಂಬುದನ್ನು ತಿಳಿಸಿದರು. ಸಿಸಿಟಿವಿ ಅಳವಡಿಕೆ ಅಗತ್ಯ ಕ್ರಮ ಕೈಗೊಳ್ಳಬೇಕು. ಈ ಸಂದರ್ಭದಲ್ಲಿಪ್ರಾಧಿಕಾರದ ಕಾರ್ಯದರ್ಶಿ ಸರಸ್ವತಿ, ಉಪಕಾರ್ಯದರ್ಶಿ ಚಂದ್ರಶೇಖರ್,ಪೊಲೀಸ್ ಇನ್ಸ್ಪೆಕ್ಟರ್ ನಂಜುಂಡಸ್ವಾಮಿ,
ಇ.ಓ.ಉಮೇಶ್ ,ಜಿಲ್ಲಾ ಪಂಚಾಯತ್ ಇಂಜಿನಿಯರ್ ಮಂಜು ಹಾಗೂ ಪಿಡಿಒ ಕಿರಣ್, ಹಾಜರಿದ್ದರು.