ಇಂಡಿ: ಅಕ್ರಮವಾಗಿ ಸೇಂದಿ ಸಾಗಾಟ ಮಾಡುತ್ತಿದ್ದ ಮಿನಿ ಆಟೋವನ್ನು ಅಬಕಾರಿ ಪೊಲೀಸರು ದಾಳಿ ನಡೆಸಿ ವಶಪಡಿಸಿಕೊಂಡ ಘಟನೆ ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ಹಳಗುಣಕಿ ಕ್ರಾಸ್ ಬಳಿ ನಡೆದಿದೆ. ಲಕ್ಷ್ಮಣ ಗಿರಿಮಲ್ಲ ಕನ್ನೂರ್ ಬಂಧಿತ ಆರೋಪಿಯಾಗಿದ್ದು, ಆರೋಪಿಯಿಂದ 15 ಲೀಟರ್ ಸೇಂದಿ, ಮಿನಿ ಮ್ಯಾಕ್ಸಿಮೋ ವಾಹನ ಜಪ್ತಿಮಾಡಲಾಗಿದೆ. ಇಂಡಿ ಅಬಕಾರಿ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.