ಅಕ್ರಮವಾಗಿ ಪಡಿತರ ಅಕ್ಕಿ ಸಾಗಾಟ, ಮೂವರ್ ಬಂಧನ..! ಎಲ್ಲಿ..? ಯಾವಾಗ ಗೊತ್ತಾ..?
ವಿಜಯಪುರ : ಅಕ್ರಮವಾಗಿ ಪಡಿತರ ಅಕ್ಕಿ ಸಂಗ್ರಹಿಸಿ ಸಾಗಾಟ ಮಾಡುವಾಗ ಖಚಿತ ಮಾಹಿತಿ ಆಧರಿಸಿ ಆಹಾರ ನಿರೀಕ್ಷಿಕ ಪರಮಾನಂದ ಹೂಗಾರ ಹಾಗೂ ಪಿಎಸ್ಐ ಎಸ್ ಬಿ ಪಾಟೀಲ ಅವರ ನೇತೃತ್ವದಲ್ಲಿ ಪೊಲೀಸರು ದಾಳಿಗೈದಿರುವ ಘಟನೆ ವಿಜಯಪುರ ಜಿಲ್ಲೆಯ ಚಡಚಣ ತಾಲ್ಲೂಕಿನ ಹಲಸಂಗಿ ಕ್ರಾಸ್ ಬಳಿ ನಡೆದಿದೆ. ಮುಸ್ತಾಕ್ ಶೇಖ್, ರಸೂಲ್ ಮೋಮಿನ್, ದಾವಲಸಾಬ್ ಶೇಖ್ ಬಂಧಿತ ಆರೋಪಿಗಳು. ಬಂಧಿತರು 87 ಸಾವಿರ ಮೌಲ್ಯದ 3 ಸಾವಿರ ಪಡಿತರ ಅಕ್ಕಿಯನ್ನು ಪಿಕ್ ಅಪ್ ವಾಹನದಲ್ಲಿ ಸಾಗಾಟ ಮಾಡುವಾಗ ಪೊಲೀಸರು ದಾಳಿಗೈದು ಅಕ್ಕಿ ಹಾಗೂ ವಾಹನವನ್ನು ಜಪ್ತಿಗೈದಿದ್ದಾರೆ. ಈ ಕುರಿತು ಝಳಕಿ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.