ಲಿಂಗಸೂಗೂರು: ಅಕ್ರಮವಾಗಿ ಮಧ್ಯ ಮಾರಾಟ ಮಾಡುತ್ತಿದ್ದ ಇಬ್ಬರನ್ನು ಪೊಲೀಸರು ಬಂಧಿಸಿರುವ ಘಟನೆ ನಡೆದಿದೆ. ರಾಯಚೂರು ಜಿಲ್ಲೆಯ ಲಿಂಗಸೂಗೂರು ತಾಲೂಕಿನ ಮುದಗಲ್ ಪೊಲೀಸ್ ಠಾಣಾ ವ್ಯಾಪ್ತಿಯ ಜನತಾಪುರ ಗ್ರಾಮದಲ್ಲಿ ಘಟನೆ ಜರುಗಿದ್ದು, ಗ್ರಾಮದ ಅಗಸಿಯ ಮುಂದೆ ಸಂಗನಬಸಪ್ಪ ಚೌಡಿ ಹಾಗೂ ಹೇಮಾವತಿ ಎನ್ನುವವರು ಅಕ್ರಮವಾಗಿ ಸ್ಥಳೀಯರಿಗೆ ಮಧ್ಯವನ್ನು ಮಾರಾಟ ಮಾಡುತ್ತಿದ್ದರು.
ಖಚಿತ ಮಾಹಿತಿ ಮೇರೆಗೆ PSI ಪ್ರಕಾಶ್ ರೆಡ್ಡಿ ಡಂಬಳ್ ಹಾಗೂ ಸಿಬ್ಬಂದಿಗಳು ದಾಳಿ ನಡೆಸಿ ಆರೋಪಿಗಳಿಂದ 27 ಓರಿಜಿನಲ್ ಚಾಯ್ಸ್ ಮಧ್ಯದ ಪೌಚ್ಗಳನ್ನು ಪೊಲೀಸರು ವಶಪಡಿಸಿಕೊಂಡು ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.