ಕಠಿಣ ಪ್ರಯತ್ನ ಮಾಡಿದ್ದಾದರೆ ಯಶಸ್ಸು ಕಟ್ಟಿಟ್ಟ ಬುತ್ತಿ : ಜಾಧವ
ಇಂಡಿ: ಇಂದಿನ ಯುವ ಪೀಳಿಗೆಯ ವಿದ್ಯಾರ್ಥಿಗಳು ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಲು ಕಾಲೇಜು ಶಿಕ್ಷಣ ಬಹುಮುಖ್ಯವಾಗಿದ್ದು, ಕಠಿಣ ಪ್ರಯತ್ನ ಮಾಡಿದ್ದಾದರೆ ಯಶಸ್ಸು ಕಟ್ಟಿಟ್ಟ ಬುತ್ತಿಯಾಗಿದೆ ಎಂದು ದೇವರಹಿಪ್ಪರಗಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ನಿವೃತ್ತ ದೈಹಿಕ ಶಿಕ್ಷಣ ನಿರ್ದೇಶಕ ಡಾ. ಅಶೋಕಕುಮಾರ ಜಾಧವ ಹೇಳಿದರು.
ಪಟ್ಟಣದ ಶಾಂತೇಶ್ವರ ವಿದ್ಯಾವರ್ಧಕ ಸಂಘದ ಜಿ.ಆರ್.ಗಾಂಧಿ ಕಲಾ, ವಾಯ್.ಎ.ಪಾಟೀಲ ವಾಣ ಜ್ಯ ಹಾಗೂ ಶಾಂತೇಶ್ವರ ವಿಜ್ಞಾನ ಪದವಿ ಮಹಾವಿದ್ಯಾಲಯದಲ್ಲಿ ನಡೆದ ೨೦೨೪-೨೫ ನೇ ಸಾಲಿನ ಶೈಕ್ಷಣ ಕ ವರ್ಷದ ಬಿಎ/ಬಿಕಾಂ/ಬಿಎಸ್ಸಿ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಸ್ವಾಗತ ಹಾಗೂ ಕ್ರೀಡಾ, ಸಾಂಸ್ಕೃತಿಕ ಹಾಗೂ ಎನ್.ಎಸ್.ಎಸ್ ರೆಡ್‌ಕ್ರಾಸ್ ಸ್ಕೌಟ್ಸ್ಸ ಘಟಕಗಳ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.
ಸಂಸ್ಕೃತಿ ಆಧಾರಿತ ಕೆಲವು ಕ್ರೀಡೆಗಳು ವ್ಯಕ್ತಿಯ ವ್ಯಕ್ತಿತ್ವ ನಿರ್ಮಿಸುವದರ ಜೊತೆಗೆ ದೈಹಿಕವಾಗಿ ಸದೃಢರನ್ನಾಗಿ ಮಾಡುತ್ತದೆ. ಕಲಿಕೆಯಲ್ಲಿ ಕುತೂಹಲಗಳಾಗಿದ್ದರೆ ವಿಚಾರ ಶಕ್ತಿ, ಆಸಕ್ತಿ, ಸಕಾರಾತ್ಮಕ ಚಿಂತನೆ ಹೆಚ್ಚಿಸುತ್ತದೆ. ನಾವೆಲ್ಲರೂ ಒಂದೇ ಎಂಬ ಭಾವನೆ ಬೆಳೆಯುತ್ತವೆ. ಪರೋಪಕಾರ ಗುಣಗಳನ್ನು ವಿದ್ಯಾರ್ಥಿಗಳು ಬೆಳೆಸಿಕೊಳ್ಳಬೇಕು ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದ ಸಂಸ್ಥೆಯ ಉಪಾಧ್ಯಕ್ಷ ನೀಲಕಂಠಗೌಡ ಪಾಟೀಲ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಅಡಗಿರುವ ವಿಶೇಷ ಪ್ರತಿಭೆಯನ್ನು ಹೊರಹಾಕಲು ನಮ್ಮ ಮಹಾವಿದ್ಯಾಲಯ ವೇದಿಕೆಯನ್ನು ಒದಗಿಸಿ ಕೊಟ್ಟಿದೆ. ಅದರ ಸದುಪಯೋಗವನ್ನು ಎಲ್ಲಾ ವಿದ್ಯಾರ್ಥಿಗಳು ಪಡೆದುಕೊಳ್ಳಬೇಕು ಎಂದರು.
ಸಂಸ್ಥೆಯ ನಿರ್ದೇಶಕ ಸಿದ್ದಣ್ಣ ತಾಂಬೆ ಮಾತನಾಡಿದರು.
ವೇದಿಕೆಯಲ್ಲಿ ಪ್ರಾಚಾರ್ಯ ಡಾ. ಎಸ್.ಬಿ.ಜಾಧವ, ಐಕ್ಯೂಎಸಿ ಸಂಯೋಜಕರಾದ ಡಾ.ಜಯಪ್ರಸಾದ ಡಿ ಹಾಗೂ ವಿದ್ಯಾರ್ಥಿ ಪ್ರತಿನಿಧಿ ಕುಮಾರಿ. ಲಕ್ಷಿö್ಮ ಜಾಡರ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಸಹ ಪ್ರಾಧ್ಯಾಪಕರಾದ ಡಾ. ಆನಂದ ನಡವಿನಮನಿ, ಸಹಾಯಕ ಪ್ರಾಧ್ಯಾಪಕ ಡಾ. ವಿಶ್ವಾಸ್ ಕೋರವಾರ, ಡಾ. ಪಿ.ಕೆ.ರಾಠೋಡ, ಡಾ. ಸುರೇಂದ್ರ ಕೆ, ಡಾ. ಸಿ.ಎಸ್.ಬಿರಾದಾರ, ಡಾ. ಶ್ರೀಕಾಂತ ರಾಠೋಡ, ಎಮ್.ಆರ್.ಕೋಣದೆ, ಗ್ರಂಥಪಾಲಕ ರಾಘವೇಂದ್ರ ಇಂಗನಾಳ, ಶೃತಿ ಪಾಟೀಲ, ಶ್ವೇತಾ ಕಾಂತ, ಪಂಕಜಾ ಕುಲಕಣ ð, ಶೃತಿ ಬಿರಾದಾರ, ಪರಶುರಾಮ ಅಜಮನಿ, ನಸ್ರೀನ ವಾಲಿಕಾರ, ಧಾನಮ್ಮ ಪಾಟೀಲ ಸೇರಿದಂತೆ ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಇದ್ದರು
ಬಿ.ಹೆಚ್.ಬಗಲಿ ನಿರೂಪಿಸಿದರು,. ಪ್ರೀಯಂಕಾ ಬಗಲಿ ಹಾಗೂ ಭಾಗ್ಯಶ್ರೀ ಬಿರಾದಾರ, ಸ್ವಾಗತಿಸಿದರು. ಶ್ರೀಶೈಲ ವಂದಿಸಿದರು.
ಇಂಡಿ: ಪಟ್ಟಣದ ಶಾಂತೇಶ್ವರ ವಿದ್ಯಾವರ್ಧಕ ಸಂಘದ ಜಿ.ಆರ್.ಗಾಂಧಿ ಕಲಾ, ವಾಯ್.ಎ.ಪಾಟೀಲ ವಾಣ ಜ್ಯ ಹಾಗೂ ಶಾಂತೇಶ್ವರ ವಿಜ್ಞಾನ ಪದವಿ ಮಹಾವಿದ್ಯಾಲಯದಲ್ಲಿ ನಡೆದ ೨೦೨೪-೨೫ ನೇ ಸಾಲಿನ ಶೈಕ್ಷಣ ಕ ವರ್ಷದ ಬಿಎ/ಬಿಕಾಂ/ಬಿಎಸ್ಸಿ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಸ್ವಾಗತ ಹಾಗೂ ಕ್ರೀಡಾ, ಸಾಂಸ್ಕೃತಿಕ ಹಾಗೂ ಎನ್.ಎಸ್.ಎಸ್ ರೆಡ್‌ಕ್ರಾಸ್ ಸ್ಕೌಟ್ಸ್ಸ ಘಟಕಗಳ ಉದ್ಘಾಟನಾ ಸಮಾರಂಭದಲ್ಲಿ ಡಾ. ಅಶೋಕಕುಮಾರ ಜಾಧವ ಮಾತನಾಡಿದರು.