ಜಿಲ್ಲೆ ವಿಭಜನೆಯಾದ್ರೆ ಸಿಂದಗಿ ಜಿಲ್ಲೆಯಾಗಲಿ : ವಕೀಲರ ಸಂಘದ ಒತ್ತಾಯ..!
ಸಿಂದಗಿ : ಇಂಡಿ ಪ್ರತ್ಯೇಕ ಜಿಲ್ಲೆ ಸೃಜಿಸುವ ಹಿನ್ನೆಲೆಯಲ್ಲಿ ಸಿಂದಗಿ ತಾಲ್ಲೂಕು ಪಂಚಾಯತ ಸಭಾಭವನದಲ್ಲಿ ಏರ್ಪಡಿಸಿದ ಜನಾಭಿಪ್ರಾಯ ಸಂಗ್ರಹದಲ್ಲಿ ಅಧ್ಯಕ್ಷತೆ ವಹಿಸಿರುವ ಉಪವಿಭಾಗ ಅಧಿಕಾರಿ ಅಬೀದ್ ಗದ್ಯಾಳ ಅವರಿಗೆ ಸಿಂದಗಿ ಜಿಲ್ಲಾ ಕೇಂದ್ರ ಮಾಡಬೇಕು ಎಂದು ವಕೀಲರ ಸಂಘದದಿಂದ ಮನವಿ ಸಲ್ಲಿಸಿದರು.
ವಿಜಯಪುರ ಜಿಲ್ಲೆ ಮತ್ತೊಮ್ಮೆ ವಿಭಜನೆಯಾದ್ರೆ, ಸಿಂದಗಿ ತಾಲ್ಲೂಕಿನ್ನು ಜಿಲ್ಲೆಯನ್ನಾಗಿ ಸೃಜಿಸಲುವಕೀಲರ ಸಂಘದ ಸಹೋದರ ಸಹೋದರಿಯರ ನಿಯೋಗದೊಂದಿಗೆ ಕಂದಾಯ ಉಪವಿಭಾಗಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.