ಗ್ಯಾಸ್ ಅಕ್ರಮ ಕಂಡು ಬಂದಲ್ಲಿ ಅಂತವರ ವಿರುದ್ಧ ಕಠಿಣ ಕ್ರಮ ವಹಿಸಿ ವಿತರಕ ಪರವಾನಿಗೆನ್ನು ರದ್ದು ಪಡಿಸಲು ಹಾಗೂ ಗ್ರಾಹಕರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು
ವಿಜಯಪುರ : ಜಿಲ್ಲೆಯಲ್ಲಿ ಗ್ಯಾಸ ವಿತರಕರಿಂದ ಬಹಳಷ್ಟು ನ್ಯೂನತೆ ಕಂಡು ಬಂದಿದ್ದು, ಮುಂದಿನ ದಿನಗಳಲ್ಲಿ ಅಕ್ರಮ ಗ್ಯಾಸ ರಿಫಿಲ್ಲಿಂಗ್ ಕಂಡು ಬಂದಲ್ಲಿ ವಿತರಕರ ಹಾಗೂ ಗ್ರಾಹಕರ ಮೇಲೆ ನಿಗಾ ಇಡಲಾಗುವುದು ಒಂದು ವೇಳೆ ಅಕ್ರಮ ಕಂಡು ಬಂದಲ್ಲಿ ಅಂತವರ ವಿರುದ್ಧ ಕಠಿಣ ಕ್ರಮ ವಹಿಸಿ ವಿತರಕ ಪರವಾನಿಗೆನ್ನು ರದ್ದು ಪಡಿಸಲು ಹಾಗೂ ಗ್ರಾಹಕರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಶಂಕರ ಮಾರಿಹಾಳ ಹೇಳಿದರು.
ಇತ್ತೀಚೆಗೆ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣಧಲ್ಲಿ ಗ್ಯಾಸ ಸಿಲೆಂಡರ್ ವಿತರಕರ ಹಾಗೂ ಆಹಾರ ಇಲಾಖೆಯ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾನಾಡಿದರು ಅವರು ವಾಹನಗಳಿಗೆ ಜಿ.ಪಿ.ಎಸ್ ಅಳವಳಡಿಸಿದಂತೆ ಜಿಲ್ಲೆಯ ಎಲ್ಲ ಗ್ಯಾಸ ವಿತರಕರ ಸಿಂಲೆoಡರಗಳಿಗೂ ಕ್ಯೂ.ಆರ್ ಕೋಡ್ ಹಾಗೂ ಗ್ರಾಹಕರಿಗೆ ಕಂಜ್ಯೂಮರ ನಂಬರ್ ಟ್ಯಾಗ ಮಾಡಲಾಗುವು ವಿತಕರು ನೇರವಾಗಿ ಗ್ರಾಹಕರ ಮನೆಗೆ ವಿತರಿಸಿದ ಕುರಿತು ಕ್ಯೂ ಅರ್ ಕೋಡ್‌ನ್ನು ಸ್ಕಾö್ಯನ್ ಮಾಡಿ ಗ್ಯಾಸ ಸಿಲೆಂಡರ್ ಗ್ರಾಹಕರಿಗೆ ವಿತರಿಸಿದ ಕುರಿತು ಮಾಹಿತಿ ಲಭ್ಯವಾಗುವುದಲ್ಲದೆ ಅದನ್ನು ಅಳವಡಿಸುವುದರಿಂದ ಸಿಲೆಂಡರ್ ಮತ್ತೊಬ್ಬರಿಗೆ ವರ್ಗಾಯಿಸುವುದನ್ನು ತಪ್ಪಿಸಬಹುದಾಗಿದೆ ಇದರಿಂದ ವಿತರಕರಿಗೂ ಕೂಡ ಯಾವುದೇ ಸಮಸ್ಯ ಉದ್ಭವಿಸುವುದಿಲ್ಲ. ಗ್ರಾಹಕರಿಗೆ ಸಿಲೆಂಡರ್ ವಿತರಿಸಲು ಕ್ಯೂ ಆರ್ ಕೋಡ ಬಳಸವುದು ಕುರಿತು ನುರಿತ ತಜ್ಞರಾದ ಹುಬ್ಬಳ್ಳಿಯ ತ್ರಿನಿಟಿ ಕಂಪನಿಯ ಮುಖ್ಯಸ್ಥರಾದ ರಜನೀಶ ಗಂಜ್ಯಾಳ ಅವರು ತಮಗೆ ಸಂಪೂರ್ಣವಾದ ಮಾಹತಿ ವಿವವರಗಳನ್ನು ನೀಡಲಿದ್ದಾರೆ. ತಮಗೆ ಮಾಹತಿ ನೀಡಿದ ಮೇಲೆ ತಮಗೇನಾದರೂ ಸಲಹೆ ಸೂಚನೆಗಳಿದಲ್ಲಿ ಈ ಸಭೆಯ ಮುಖಾಂತರ ತಮ್ಮ ಸಮಸ್ಯಗಳಿಗೆ ಪರಿಹಾರ ಕಂಡುಕೊಳ್ಳಬಹುದಾಗಿದೆ. ಕಳೆದ ನಾಲ್ಕು ತಿಂಗಳಲ್ಲಿ ಸುಮಾರು ಅಕ್ರಮಗಳಲ್ಲಿ ರಿಫಿಲ್ಲಿಂಗ ದಂದೆಗಳಲ್ಲಿ ತೊಡಗಿದವರ ವಿರುದ್ಧ ಈಗಾಗಲೇ ೨೪ ಪ್ರಕರಣಗಳನ್ನು ದಾಖಲಿಸಲಾಗಿದೆ.
ಜಿಲ್ಲೆಯಲ್ಲಿ ಅಧಕೃತವಾಗಿ ಒಟ್ಟು ೩೭ ಗ್ಯಾಸ್ ವಿತರಕರಿದ್ದು ಜಿಲ್ಲಾಡಳಿತದೊಂದಿಗೆ ಸಹಕರಿಸುವಂತೆ ಅವರು ಕೊರಿದರು. ಪೈಲಟ್ ಯೊಜನೆಯಾಗಿ ನಗರದ ೩ ವಿತರಕರನ್ನು ಆಯ್ಕೆ ಮಾಡಲಾಗಿದ್ದು ಕ್ಯೂ.ಆರ್ ಕೋಡ್ ಹಾಗೂ ಗ್ರಾಹಕರಿಗೆ ಕಂಜುಮರ ನಂಬರ್ ಟ್ಯಾಗ ಮಾಡಲು ಅವರಿಗೆ ವಿವಿರವಾದ ಮಾಹತಿಯನ್ನು ನೀಡಲಾಗುತ್ತದೆ. ಅದರಂತೆ ಮುಂದಿನ ದಿನಗಳಲ್ಲಿ ಎಲ್ಲ ವಿತರಕರು ಅದನ್ನು ಅಳವಡಿಸಿಕೊಂಡು ಸಹಕರಿಸುವತೆ ಸಭೆಗೆ ತಿಳಿಸಿದರು. ಗ್ಯಾಸ ವಿತರಿಸುವಾಗ ವಾಹನದ ಸಂಖ್ಯ ಹಾಗೂ ವಿವರ, ವಿತರಿಸುವ ಸಿಬ್ಬಂದಿಗಳ ವಿವರಗಳನ್ನು ನೀಡುವಂತೆ ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆಯ ಉಪ ನಿರ್ದೇಶಕರಾದ ವಿನಯ ಕುಮಾರ ಪಾಟೀಲ್, ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆಯ ಸಹಾಯನ ನಿರ್ದೇಶಕರುಗಾಳಾದ ಮಲ್ಲಿಕಾರ್ಜುನ ಅರಕೇರಿ, ನಾಮದೇವ ಚವ್ಹಾಣ, ಎಲ್ಲ ತಾಲೂಕಿನ ಆಹಾರ ಶಿರಸ್ತೆದಾರ, ಆಹಾರ ನಿರೀಕ್ಷಕರು, ಸಿಬ್ಬಂದಿಗಳು ಜಿಲ್ಲೆಯ ಎಲ್ಲ ಗ್ಯಾಸ ವಿತರಕರು ಹಾಗೂ ಇತರರು ಉಪಸ್ಥಿತರಿದ್ದರು.


















