ಅಭಿಮಾನಿಗಳಿಗೆ ಮಂಡಿಯೂರಿ ನಮಸ್ಕರಿಸಿದ ನಿತೀನ್:
ಜನಸಾಗರ ಕಂಡು ಭಾವುಕನಾದ ಯುವ ಸಾರಥಿ:
ಅಫಜಲಪುರ: 2023 ರ ವಿಧಾನ ಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ಚುನಾವಣೆಯ ಕಾವು ರಂಗೇರುತ್ತಿದೆ. ಕಲ್ಯಾಣ ಕರ್ನಾಟಕದ ಹೈ ಓಲ್ಟೇಜ್ ಕ್ಷೇತ್ರವೆಂದೆ ಬಿಂಬತವಾಗುತ್ತಿರುವ ಅಫಜಲಪುರ ವಿಧಾನ ಸಭಾ ಕ್ಷೇತ್ರ ಇತ್ತಿಚೆಗೆ ಒಂದಿಲ್ಲೊಂದು ವಿಷಯದಲ್ಲಿ ಸದ್ದು ಮಾಡುತ್ತಿರುವುದು ಆಶ್ಚರ್ಯವೆನಿಲ್ಲ. ಇಂದು ಅಫಜಲಪುರ ತಾಲೂಕಿನ ಸ್ಟೇಷನ್ ಗಾಣಗಾಪುರದಲ್ಲಿ ಬಿಜೆಪಿ ಪ್ರಬಲ ಆಕಾಂಕ್ಷಿ ನಿತೀನ್ ಗುತ್ತೇದಾರ ನೇತೃತ್ವದಲ್ಲಿ ಜನ ಸ್ಪಂದನ ಕಾರ್ಯಕ್ರಮ ನಡೆಯಿತು.
ಕ್ಷೇತ್ರದಲ್ಲಿ ಇತ್ತಿಚೆಗೆ ಚುನಾವಣಾ ರಣರಂಗದಲ್ಲಿ ಅಭ್ಯರ್ಥಿಗಳ ಹೆಸರು ಬಹಳಷ್ಟು ಕೇಳಿ ಬರುತ್ತಿದ್ದು, ಕಾಂಗ್ರೆಸ್ ಪಕ್ಷದಲ್ಲಿ ಎಳು ಜನ ಆಕಾಂಕ್ಷಿಗಳು ಅರ್ಜಿ ಹಾಕಿದರೂ ಕೊನೆಯದಾಗಿ ಹಾಲಿ ಶಾಸಕ ಎಮ್. ವೈ. ಪಾಟೀಲರಿಗೆ ಕಾಂಗ್ರೆಸ್ ಟಿಕೆಟ್ ನೀಡಿ ಎಲ್ಲಾ ಊಹಾಪೋಹಗಳಿಗೆ ತೆರೆ ಎಳೆದಿದೆ. ಇನ್ನೊಂದು ಕಡೆ ಬಿಜೆಪಿ ಪಕ್ಷದಲ್ಲಿ ಸಹೋದರ ಸವಾಲ ಎಂಬಂತೆ ರಾಜ್ಯ ಬಿಜೆಪಿ ಉಪಾಧ್ಯಕ್ಷ ಮಾಲಿಕಯ್ಯ ಗುತ್ತೇದಾರ ಸಹೋದರ ನಿತೀನ್ ಗುತ್ತೇದಾರ ಶತಾಯಗಥಾಯ ಬಿಜೆಪಿ ಟಿಕೆಟ್ ಗಿಟ್ಟಿಸಿಕೊಳ್ಳುವಲ್ಲಿ ಹರಸಾಹಸ ಮಾಡುತ್ತಿದ್ದಾರೆ.
ಇನ್ನೊಂದು ಕಡೆ ಬಿಜೆಪಿ ಹೈಕಮಾಂಡಗೆ ತಲೆನೋವಿನ ಸಂಗತ ಎದುರಾಗಿರುವುದು ಸುಳ್ಳಲ್ಲ. ಏಕೆಂದರೆ ಒಂದು ಕಡೆ ಮಾಜಿ ಶಾಸಕ ರಾಜ್ಯ ಬಿಜೆಪಿ ಉಪಾಧ್ಯಕ್ಷ ಮಾಲಿಕಯ್ಯ ಗುತ್ತೇದಾರಗೆ ಟಿಕೆಟ್ ನೀಡುವುದೋ ಇಲ್ಲ, ಮಾಜಿ ಜಿಲ್ಲಾ ಪಂಚಾಯತ ಅಧ್ಯಕ್ಷ ನಿತೀನ್ ಗುತ್ತೇದಾರಗೆ ಟಿಕೆಟ್ ನೀಡುವುದೋ ಎಂಬುವುದು ಗೊಂದಲದಗುಡಾಗಿದೆ.
ಒಂದು ಕಡೆ ತಾಲೂಕಿನಾದ್ಯಂತ ಸಂಘಟನೆ ಮಾಡಿ ಸಂಚಲನ ಮೂಡಿಸಿರುವ ಯುವ ಸಾರಥಿ ಹೆಸರಿನಲ್ಲಿ ಜನರನ್ನ ವಿಶೇಷವಾಗಿ ಯುವ ಸಮುದಾಯವನ್ನ ತನ್ನೆಡೆಗೆ ಸೆಳೆಯುವಲ್ಲಿ ಯಶಸ್ವಿಯಾದ ನಿತೀನ್ ಗುತ್ತೇದಾರ ತಾಲ್ಲೂಕಿನಲ್ಲಿ ಸಂಚಲನ ಮೂಡಿಸಿದ್ದಾರೆ.
ನಿತೀನ್ ಗುತ್ತೇದಾರ ಅವರ ತಂದೆಯವರಾದ ದಿ. ವೆಂಕಯ್ಯ ಗುತ್ತೇದಾರ ಸಮಾಧಿಯ ಪಕ್ಕದಲ್ಲಿ ಜನಸ್ಪಂದನ ಕಾರ್ಯಕ್ರಮ ಏರ್ಪಡಿಸಿದ ನಿತೀನ್ ಗುತ್ತೇದಾರ ಕಾರ್ಯಕ್ರಮ ಉದ್ದೇಶಿಸಿ ಭಾವುಕರಾಗಿ ಮಾತನಾಡಿದರು. ತಮ್ಮ ತಂದೆಯವರನ್ನ ಇನ್ನೋರ್ವ ಸಹೋದರ ದಿ. ಅಶೋಕ ಗುತ್ತೇದಾರ ನೆನೆದು ಮಾತು ಪ್ರಾರಂಭಿಸಿದರು. ನನಗೆ ಬಿಜೆಪಿ ಪಕ್ಷದ ಟಿಕೆಟ್ ಸಿಗುವ ನಿರೀಕ್ಷೆ ನೂರಕ್ಕೆ ನೂರರಷ್ಟಿದೆ. ಒಂದು ವೇಳೆ ಟಿಕೆಟ್ ಸಿಗದಿದ್ದರೆ ನಿಮ್ಮೆಲ್ಲರ ಆಶೀರ್ವಾದದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುವೆ ಎಂದರು. ನಾನು ತಾಲೂಕಿನ ಪ್ರತಿಯೊಂದು ಗ್ರಾಮಗಳಿಗೆ ತೆರಳಿ ಜನರ ಕಷ್ಟ ಸುಖಗಳನ್ನು ಕಂಡಿದ್ದೆನೆ. ಮುಂದೆ ನಿವೆಲ್ಲರೂ ನನಗೆ ಒಂದು ಬಾರಿ ಅವಕಾಶ ಮಾಡಿ ಕೊಟ್ಟಿದಲ್ಲಿ, ನಿಮ್ಮ ಕಷ್ಟಕರ ಸುಖಗಳಲ್ಲಿ ಭಾಗಿಯಾಗುತ್ತೆನೆ ಎಂದರು.
ಮತ್ತೆ ಮಾತು ಮುಂದುವರೆಸಿದ ಅವರು ನಾನು ಅಧಿಕಾರಕ್ಕಾಗಿ ಚುನಾವಣೆಗೆ ಸ್ಪರ್ಧಿಸುತ್ತಿಲ್ಲ. ನಿಮ್ಮೆಲ್ಲರ ಸೇವೆ ಮಾಡಲು ಅವಕಾಶ ನೀಡಿ ಎಂದು ಅಂಗಲಾಚಿ ಬೇಡಿಕೊಳ್ಳುತ್ತಿದ್ದೆನೆ ಎಂದರು. ನಿವೇಲ್ಲರೂ ಯಾರಿಗೂ ಹೆದರುವ ಅವಶ್ಯಕತೆ ಇಲ್ಲ. ನಿಮ್ಮೊಂದಿಗೆ ನಾನಿದ್ದೆನೆ. ಚುನಾವಣೆ ಬರುತ್ತೆ ಹೋಗುತ್ತೆ ನಮ್ಮ ನಿಮ್ಮ ಪ್ರೀತಿ ವಿಶ್ವಾಸ ದೊಡ್ಡದು ಎಂದರು.
ವರದಿ: ಉಮೇಶ್ ಅಚಲೇರಿ ವಾಯ್ಸ್ ಆಫ್ ಜನತಾ ಅಫ್ಜಲಪುರ: