ವಿಜಯಪುರ: ವಿವಿಧ ಮಹಾನ್ ನಾಯಕರ ಮೂರ್ತಿ ಮೆರವಣಿಗೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಮೂರ್ತಿಗಳಿಗೆ ಪೂಜೆ ಸಲ್ಲಿಸಿ ಚಾಲನೆ ನೀಡಿದರು. ವಿಜಯಪುರ ನಗರದ ಗೋದಾವರಿ ಹೊಟೇಲ್ ಬಳಿ ಏಳು ಮೂರ್ತಿಗಳ ಮೆರವಣಿಗೆಗೆ ಚಾಲನೆ ನೀಡಿದರು.
ಬೃಹತ್ ಮೆರವಣಿಯಲ್ಲಿ ಜನ ಸಾಗರ ಹರಿದು ಬಂದಿತ್ತು. ಅಲ್ಲದೇ, ಮೆರವಣಿಗೆಯಲ್ಲಿ ಡೊಳ್ಳು ಕುಣಿತ, ಬಂಜಾರಾ ಸಮುದಾಯದ ವೇಷ ಧರಿಸಿದ ಮಹಿಳಾ ತಂಡ, ಹಲಗೆ ಮೇಳ ತಂಡಗಳ ಮೆರಗು ನೀಡಿತ್ತು.
ಇನ್ನು ಡಿಜೆ ಸೌಂಡಿಗೆ ಯುವಕರ ಹೆಜ್ಜೆ ಹಾಕಿದರು. ಅಲ್ಲದೇ, ಮೆರವಣಿಗೆಯಲ್ಲಿ ಜೈ ಶ್ರೀರಾಮ್ ಘೋಷಣೆ ಕೂಗಿದರು. ಮೆರವಣಿಗೆಯಲ್ಲಿ ಅಹಿತಕರ ಘಟನೆಗಳು ಆಗದಂತೆ ಮಾರ್ಗದಲ್ಲಿ ಪೊಲೀಸ್ ಸರ್ಪಗಾವಲು ನಿಯೋಜನೆ ಮಾಡಲಾಯಿತು.